Virat Kohli vs Sourav Ganguly: ವಿರಾಟ್ ಕೊಹ್ಲಿಗೆ ನೋಟಿಸ್ ನೀಡಲು ಮುಂದಾಗಿದ್ದ ಸೌರವ್ ಗಂಗೂಲಿ..!

By Suvarna NewsFirst Published Jan 21, 2022, 3:55 PM IST
Highlights

* ವಿರಾಟ್ ಕೊಹ್ಲಿ ನಡೆಸಿದ್ದ ಸುದ್ದಿಗೋಷ್ಠಿ ಕುರಿತಂತೆ ಗರಂ ಆಗಿದ್ದರಂತೆ ಸೌರವ್ ಗಂಗೂಲಿ

* ಕೊಹ್ಲಿ ಮಾತಿಗೆ ಸ್ಪಷ್ಟನೆ ಕೇಳಿ ಶೋಕಾಸ್ ನೋಟಿಸ್ ನೀಡಲು ಮುಂದಾಗಿದ್ದ ದಾದಾ

* ದಾದಾ ಅವರ ಈ ನಿರ್ಧಾರಕ್ಕೆ ಅಡ್ಡಗಾಲು ಹಾಕಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ನವದೆಹಲಿ(ಜ.21): ಭಾರತ ಏಕದಿನ ಕ್ರಿಕೆಟ್ ತಂಡದ (Indian Cricket Team) ನಾಯಕತ್ವದಿಂದ ವಜಾಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಬಿಸಿಸಿಐ (BCCI) ಅಧಿಕಾರಿಗಳ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದ ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ (Virat Kohli) ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಶೋಕಾಸ್‌ ನೋಟಿಸ್‌ ನೀಡಲು ಮುಂದಾಗಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ ಏಕದಿನ ನಾಯಕತ್ವದಿಂದ ವಜಾ ಮಾಡಿದ್ದಾಗಿ ತಮಗೆ ತಿಳಿಸಲಾಯಿತು. ಮೊದಲೇ ಬಿಸಿಸಿಐ ತಮ್ಮೊಂದಿಗೆ ಚರ್ಚಿಸಿರಲಿಲ್ಲ ಎಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೊಹ್ಲಿ ವಿರುದ್ಧ ಕ್ರಮಕ್ಕೆ ಗಂಗೂಲಿ ಮುಂದಾದಾಗ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ಒಪ್ಪಲಿಲ್ಲ. ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಗಂಗೂಲಿಯನ್ನು ತಡೆದರು ಎಂಧು ವರದಿಯಲ್ಲಿ ಹೇಳಲಾಗಿದೆ.

ವಿರಾಟ್ 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ತಾವು ಮುಂಬರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮುಕ್ತಾಯದ ಬಳಿಕ ಭಾರತ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ವಿರಾಟ್ ಕೊಹ್ಲಿ ನಾಯಕತ್ವದ ಕೆಳಗಿಳಿಯಲು ಬಿಸಿಸಿಐ ಹಾಕಿದ ಒತ್ತಡವೇ ಕಾರಣ ಎಂದೆಲ್ಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ತಾವು ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯದಂತೆ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದಾಗಿ ಹೇಳಿದ್ದರು.

ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ, ಟಿ20 ನಾಯಕತ್ವದಿಂದ ಕೆಳಗಿಳಿಯುವುದು ನನ್ನ ಸ್ವಂತ ನಿರ್ಧಾರವಾಗಿತ್ತು. ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ ಬಳಿಕ ಯಾರೊಬ್ಬರು ಈ ಕುರಿತಂತೆ ನನ್ನ ಜತೆ ಮಾತುಕತೆ ನಡೆಸಿಲ್ಲ ಎಂದು ಪರೋಕ್ಷವಾಗಿ ದಾದಾ ಸುಳ್ಳು ಹೇಳಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದರು. 

Kapil Dev on Virat Kohli: ಕೊಹ್ಲಿ ತಮ್ಮ ಅಹಂ ಬದಿಗಿಟ್ಟು ಹೊಸ ನಾಯಕನಡಿಯಲ್ಲಿ ಆಡಲಿ ಎಂದ ಕಪಿಲ್ ದೇವ್

ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ತಂಡವನ್ನು ಆಯ್ಕೆಮಾಡುವಾಗ ಬಿಸಿಸಿಐ ಆಯ್ಕೆ ಸಮಿತಿಯು ಸೀಮಿತ ಓವರ್‌ಗಳ ಭಾರತ ತಂಡಕ್ಕೆ ಒಬ್ಬನೇ ನಾಯಕನಿರಲಿ ಎನ್ನುವ ಉದ್ದೇಶದಿಂದ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ನಾಯಕ ಪಟ್ಟ ಕಟ್ಟಲಾಗಿತ್ತು. ಇನ್ನು ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದ ಸೋಲು ಕಂಡ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೂ ಗುಡ್ ಬೈ ಹೇಳಿದ್ದರು.

ಬರೋಬ್ಬರಿ 6 ಕೆ.ಜಿ ತೂಕ ಇಳಿಸಿದ ರೋಹಿತ್‌ ಶರ್ಮಾ!

ನವದೆಹಲಿ: ಭಾರತ ಸೀಮಿತ ಓವರ್‌ ಕ್ರಿಕೆಟ್‌ ತಂಡಗಳ ನಾಯಕ ರೋಹಿತ್‌ (Rohit Sharma) ಶರ್ಮಾ ತಮ್ಮ ದೇಹದ ತೂಕವನ್ನು 6 ಕೆ.ಜಿ.ಗಳಷ್ಟು ಇಳಿಸಿಕೊಂಡಿದ್ದು, ಸಂಪೂರ್ಣ ಫಿಟ್ನೆಸ್‌ ಕಂಡುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರೋಹಿತ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿದ್ದು ಅವರ ದೇಹದ ತೂಕ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ತೂಕ ಹೆಚ್ಚಾಗಿದ್ದರಿಂದಲೇ ಪದೇಪದೇ ಸ್ನಾಯು ಸೆಳೆತ, ಮಂಡಿ ನೋವಿನ ಸಮಸ್ಯೆಗೆ ಒಳಗಾಗುತ್ತಿದ್ದ ರೋಹಿತ್‌ಗೆ ತೂಕ ಇಳಿಸುವಂತೆ ಎನ್‌ಸಿಎ ಫಿಸಿಯೋಗಳು ಸಲಹೆ ನೀಡಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.

ರೋಹಿತ್ ಶರ್ಮಾ ಫಿಟ್ನೆಸ್ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದರು. ಇದೀಗ ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆಗಿದ್ದು, ಫೆಬ್ರವರಿ ಮೊದಲ ವಾರದಿಂದ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಯ ವೇಳೆ ಟೀಂ ಇಂಡಿಯಾವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ

click me!