ಸೂಪರ್‌ ಸೀರೀಸ್‌ ಚರ್ಚೆ: ಇಂಗ್ಲೆಂಡ್‌ಗೆ ಗಂಗೂಲಿ!

By Suvarna News  |  First Published Feb 7, 2020, 10:41 AM IST

ಬಿಸಿಸಿಐ ಅಧ್ಯಕ್ಷರಾದ ಬಳಿಕ ಈಗಾಗಲೇ ಕೆಲವು ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿರುವ ಗಂಗೂಲಿ ಇದೀಗ 4 ದೇಶಗಳ ನಡುವಿನ ಸೂಪರ್ ಸೀರೀಸ್ ಆಯೋಜನೆಗೆ ಮುಂದಾಗಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...


ನವದೆಹಲಿ(ಫೆ.07): ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಜತೆ ಹಣಕಾಸು ಹಂಚಿಕೆ ವಿಚಾರದಲ್ಲಿ ತಿಕ್ಕಾಟ ನಡೆಸುತ್ತಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ಕ್ರಿಕೆಟ್‌ ಮಂಡಳಿಗಳ ಜತೆ ಸೇರಿ ‘ಸೂಪರ್‌ ಸೀರೀಸ್‌’ ಚತುಷ್ಕೋನ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಈ ವಿಚಾರವಾಗಿ ಚರ್ಚೆ ನಡೆಸಲು ಸೌರವ್ ಗಂಗೂಲಿ ಬುಧವಾರ ಇಂಗ್ಲೆಂಡ್‌ಗೆ ತೆರಳಿದ್ದಾರೆ.

ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಹಾಗೂ ಕ್ರಿಕೆಟ್‌ ಆಸ್ಪ್ರೇಲಿಯಾ (ಸಿಎ) ಜತೆ ಅನೌಪಚಾರಿಕ ಸಭೆ ನಡೆಸಲಿದ್ದು, ಟೂರ್ನಿ ಆಯೋಜನೆ ಬಗ್ಗೆ ಚರ್ಚೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ‘ಗಂಗೂಲಿ ಇಂಗ್ಲೆಂಡ್‌ಗೆ ತೆರಳಿದ್ದು, 4 ರಾಷ್ಟ್ರಗಳ ಪಂದ್ಯಾವಳಿ ಬಗ್ಗೆ ಚರ್ಚಿಸಲಿದ್ದಾರೆ. ಕ್ರಿಕೆಟ್‌ ಆಸ್ಪ್ರೇಲಿಯಾ ಅಧಿಕಾರಿಗಳು ಸಹ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಟೂರ್ನಿ ಆಯೋಜನೆ ಇರುವ ಅಡೆತಡೆಗಳೇನು, ಅದಕ್ಕೆ ಪರಿಹಾರವೇನು ಎನ್ನುವುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

Tap to resize

Latest Videos

undefined

BCCI ಬಾಸ್ 'ದಾದಾ' ಕೆಲಸವನ್ನು ಕೊಂಡಾಡಿದ ಆಸೀಸ್ CEO

ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಜತೆ ಗಂಗೂಲಿ ಮಾತುಕತೆ ನಡೆಸಿದ್ದರು. ಆ ಬಳಿಕ ಇಸಿಬಿ ಅಧಿಕಾರಿಗಾಳು, ಸೂಪರ್‌ ಸೀರೀಸ್‌ನಲ್ಲಿ ಪಾಲ್ಗೊಳ್ಳಲು ಸಿದ್ಧರಿರುವುದಾಗಿ ಹೇಳಿದ್ದರು. ‘ಇದೊಂದು ಅತ್ಯುತ್ತಮ ಯೋಜನೆ’ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾದ ಸಿಇಒ ಕೆವಿನ್‌ ರಾಬರ್ಟ್ಸ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಎಲ್ಲವೂ ಅಂದುಕೊಂಡತೆ ಆದರೆ ಭಾರತ, ಇಂಗ್ಲೆಂಡ್‌, ಆಸ್ಪ್ರೇಲಿಯಾ ಹಾಗೂ ಮತ್ತೊಂದು ಆಹ್ವಾನಿತ ತಂಡ ಸೂಪರ್‌ ಸೀರೀಸ್‌ನಲ್ಲಿ ಪಾಲ್ಗೊಳ್ಳಲಿವೆ. ಮೂರಕ್ಕಿಂತ ಹೆಚ್ಚು ತಂಡಗಳು ಪಾಲ್ಗೊಂಡರೆ ಅದಕ್ಕೆ ಐಸಿಸಿಯ ಅನುಮತಿ ಬೇಕಿರುತ್ತದೆ. ಅಲ್ಲದೇ ಈ ಟೂರ್ನಿ ಭವಿಷ್ಯದ ವೇಳಾಪಟ್ಟಿಯಲ್ಲೂ ಇಲ್ಲ.

ಭಾರತದ ಟಾಪ್ ಸೆಲೆಬ್ರೆಟಿ ಯಾರು? ಸಮಿಕ್ಷೆ ವರದಿ ಬಹಿರಂಗ!

2023ರಿಂದ 2031ರ ಅವಧಿಯಲ್ಲಿ ವರ್ಷಕ್ಕೊಂದು ವಿಶ್ವಕಪ್‌ ನಡೆಸಲು ಐಸಿಸಿ ಚಿಂತನೆ ನಡೆಸಿದೆ. ಆದರೆ ಪ್ರಸಾರ ಹಕ್ಕು ಹಣ ಕೈತಪ್ಪಲಿದೆ ಎನ್ನುವ ಕಾರಣಕ್ಕೆ ಬಿಸಿಸಿಐ, ಐಸಿಸಿಯ ಪ್ರಸ್ತಾಪವನ್ನು ವಿರೋಧಿಸುತ್ತಿದೆ.

click me!