ರಣಜಿ ಟ್ರೋಫಿ: ಇನ್ನಿಂಗ್ಸ್‌ ಮುನ್ನಡೆಗೆ ಕರ್ನಾಟಕ ಕಸರತ್ತು!

By Kannadaprabha News  |  First Published Feb 7, 2020, 9:10 AM IST

ಮೊದಲ ಇನ್ನಿಂಗ್ಸ್‌ನಲ್ಲಿ 426 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿ, ಗೆಲುವಿನ ವಿಶ್ವಾಸದಲ್ಲಿದ್ದ ಕರುಣ್‌ ನಾಯರ್‌ ಪಡೆಗೆ ಪಂದ್ಯದ 3ನೇ ದಿನವಾದ ಗುರುವಾರ ಆಘಾತ ಎದುರಾಯಿತು. ಮಧ್ಯಪ್ರದೇಶ ತಂಡ ಇಡೀ ದಿನ ಕಳೆದುಕೊಂಡಿದ್ದು ಕೇವಲ 2 ವಿಕೆಟ್‌.


ಶಿವಮೊಗ್ಗ(ಫೆ.07): ಸುಲಭ ಗೆಲುವು ಸಾಧಿಸಿ 2019-20ರ ರಣಜಿ ಟ್ರೋಫಿ ನಾಕೌಟ್‌ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಉತ್ಸಾಹದಲ್ಲಿದ್ದ ಕರ್ನಾಟಕಕ್ಕೆ ಹಿನ್ನಡೆಯಾದಂತೆ ಕಾಣುತ್ತಿದೆ. ಮಧ್ಯಪ್ರದೇಶ ವಿರುದ್ಧ ಇಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ಪಂದ್ಯ ಬಹುತೇಕ ಡ್ರಾನತ್ತ ಸಾಗಿದೆ. ಅಲ್ಲದೆ ಮೊದಲ ಇನ್ನಿಂಗ್ಸ್‌ ಮುನ್ನಡೆಯನ್ನಾದರೂ ಸಾಧಿಸಿ, 3 ಅಂಕ ಪಡೆಯಲು ಕರ್ನಾಟಕ ಕಸರತ್ತು ನಡೆಸಬೇಕಿದೆ.

It’s stumps on day-3 at Shivamogga and a barren day for Karnataka comes to an end. MP didn’t lose a wicket for two sessions despite Karnataka coming hard at them. Now, it’s only about fighting it out for the FIL on the last day. MP: 311/4; trail by 115 runs

— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka)

ಮೊದಲ ಇನ್ನಿಂಗ್ಸ್‌ನಲ್ಲಿ 426 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿ, ಗೆಲುವಿನ ವಿಶ್ವಾಸದಲ್ಲಿದ್ದ ಕರುಣ್‌ ನಾಯರ್‌ ಪಡೆಗೆ ಪಂದ್ಯದ 3ನೇ ದಿನವಾದ ಗುರುವಾರ ಆಘಾತ ಎದುರಾಯಿತು. ಮಧ್ಯಪ್ರದೇಶ ತಂಡ ಇಡೀ ದಿನ ಕಳೆದುಕೊಂಡಿದ್ದು ಕೇವಲ 2 ವಿಕೆಟ್‌. 2ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 60 ರನ್‌ ಗಳಿಸಿದ್ದ ಮಧ್ಯಪ್ರದೇಶ, 3ನೇ ದಿನದಾಟದ ಮುಕ್ತಾಯಕ್ಕೆ 4 ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿದ್ದು, ಇನ್ನು 115 ರನ್‌ಗಳ ಹಿನ್ನಡೆಯಲ್ಲಿದೆ.

Tap to resize

Latest Videos

ಶುಕ್ರವಾರ 4ನೇ ಹಾಗೂ ಅಂತಿಮ ದಿನವಾಗಿದ್ದು, ಮೊದಲ ಇನ್ನಿಂಗ್ಸ್‌ ಮುನ್ನಡೆಗಾಗಿ ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಯಲಿದೆ. ಪಂದ್ಯ ಡ್ರಾಗೊಂಡರೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯುವ ತಂಡಕ್ಕೆ 3 ಅಂಕ ಸಿಗಲಿದ್ದು, ಮತ್ತೊಂದು ತಂಡಕ್ಕೆ 1 ಅಂಕ ಸಿಗಲಿದೆ.

ರಣಜಿ ಟ್ರೋಫಿ: ಮಧ್ಯ ಪ್ರದೇಶ ವಿರುದ್ಧ ಕರ್ನಾಟಕ ಬೃಹತ್‌ ಮೊತ್ತ!

ಮಧ್ಯಪ್ರದೇಶ ಈಗಾಗಲೇ ನಾಕೌಟ್‌ ರೇಸ್‌ನಿಂದ ಹೊರಬಿದ್ದಿರುವ ಕಾರಣ, ಫಲಿತಾಂಶದಿಂದ ತಂಡಕ್ಕೆ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ. ಆದರೆ ನಾಕೌಟ್‌ ಹಂತಕ್ಕೇರುವ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿರುವ ಕರ್ನಾಟಕಕ್ಕೆ ಗೆಲುವಿನ ಅಗತ್ಯವಿದೆ. ಈ ಪಂದ್ಯ ಡ್ರಾಗೊಂಡರೆ ಬರೋಡಾ ವಿರುದ್ಧ ನಡೆಯಲಿರುವ ಅಂತಿಮ ಪಂದ್ಯವನ್ನು ಗೆಲ್ಲಬೇಕಾದ ಒತ್ತಡಕ್ಕೆ ಕರ್ನಾಟಕ ಸಿಲುಕಲಿದೆ.

ಆದಿತ್ಯ ಶತಕ: 3ನೇ ದಿನವಾದ ಬುಧವಾರ ಮಧ್ಯಪ್ರದೇಶ ಯಶ್‌ ದುಬೆ (45) ಹಾಗೂ ನಾಯಕ ಶುಭಮ್‌ ಶರ್ಮಾ (25) ವಿಕೆಟನ್ನು ಬೇಗನೆ ಕಳೆದುಕೊಂಡಿತು. 123 ರನ್‌ಗಳಿಗೆ ತಂಡ 4 ವಿಕೆಟ್‌ ಕಳೆದುಕೊಂಡಿತು. 5ನೇ ವಿಕೆಟ್‌ಗೆ ಜತೆಯಾದ ಆದಿತ್ಯ ಶ್ರೀವಾಸ್ತವ (109*) ಹಾಗೂ ವೆಂಕಟೇಶ್‌ ಅಯ್ಯರ್‌(80*) ಅಜೇಯ 188 ರನ್‌ ಜೊತೆಯಾಟವಾಡಿದ್ದು, ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌:

ಕರ್ನಾಟಕ 426, 
ಮಧ್ಯಪ್ರದೇಶ 311/4 
(ಆದಿತ್ಯ 109*, ವೆಂಕಟೇಶ್‌ 80*, ಗೌತಮ್‌ 1-61, ಶ್ರೇಯಸ್‌ 1-67)
 

click me!