ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಭಾಸ್ಕರನ್‌ ನಿಧನ: ಬಿಸಿಸಿಐ ಸಂತಾಪ

By Suvarna NewsFirst Published Nov 24, 2020, 9:58 AM IST
Highlights

ಇತ್ತೀಚೆಗಷ್ಟೇ ಕೊನೆಯುಸಿರೆಳೆದ ಕೇರಳ ಮೂಲದ ಮಾಜಿ ಕ್ರಿಕೆಟಿಗನ ನಿಧನಕ್ಕೆ ಬಿಸಿಸಿಐ ನುಡಿನಮನ ಸಲ್ಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ನ.24): ಕೇರಳ ಮಾಜಿ ಕ್ರಿಕೆಟಿಗ ಡಾ. ಸಿ.ಕೆ. ಭಾಸ್ಕರನ್‌ ನಾಯರ್‌ (79), ಕಳೆದ ಶನಿವಾರ ಅಮೆರಿಕದ ಹೂಸ್ಟನ್‌ನಲ್ಲಿ ನಿಧನರಾಗಿದ್ದರು.

79 ವರ್ಷದ ಡಾ. ಸಿ.ಕೆ. ಭಾಸ್ಕರನ್‌ ನಾಯರ್‌ ನವೆಂಬರ್ 21, 2020ರಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಸೋಮವಾರ ಭಾಸ್ಕರನ್‌ ನಿಧನಕ್ಕೆ ಸಂತಾಪ ಸೂಚಿಸಿದೆ. 

1957 ರಿಂದ 1969 ರವರೆಗಿನ 12 ವರ್ಷಗಳ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಭಾಸ್ಕರನ್‌, 42 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳನ್ನಾಡಿದ್ದಾರೆ. ಡಾ. ಸಿ.ಕೆ. ಭಾಸ್ಕರನ್‌ ನಾಯರ್‌ 106 ವಿಕೆಟ್‌ ಪಡೆದಿದ್ದು, 580 ರನ್‌ ಗಳಿಸಿದ್ದಾರೆ. ಆ ವೇಳೆ ಭಾಸ್ಕರನ್‌, ಕೇರಳ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದರು. 

ಐಪಿಎಲ್ ‌2021: ತಂಡದಲ್ಲಿ 5 ವಿದೇಶಿ ಆಟಗಾರನ್ನು ಸೇರಿಸಲು ಫ್ರಾಂಚೈಸಿ ಒತ್ತಾಯ

1965ರಲ್ಲಿ ಆಗಿನ ಸಿಲೋನ್ (ಶ್ರೀಲಂಕಾ) ವಿರುದ್ಧದ ಪಂದ್ಯದಲ್ಲಿ ಮನ್ಸೂರ್‌ ಅಲಿ ಖಾನ್‌ ಪಟೌಡಿ ನೇತೃತ್ವದ ಭಾರತ ತಂಡದಲ್ಲಿ ಆಡಿದ್ದರು. ಮಧ್ಯಮ ವೇಗದ ಬೌಲರ್‌ ಆಗಿದ್ದ ನಾಯರ್ ಸಿಲೋನ್ ವಿರುದ್ಧ 18 ಓವರ್‌ ಬೌಲಿಂಗ್ ಮಾಡಿ 51 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು


 

click me!