ಟೀಂ ಇಂಡಿಯಾ ನೂತನ ಆಯ್ಕೆ ಸಮಿತಿಗೆ 8 ಜವಾಬ್ದಾರಿ, ಮೂರು ಮಾದರಿಗೆ 3 ತಂಡ!

By Suvarna NewsFirst Published Nov 19, 2022, 12:44 PM IST
Highlights

ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಆದರೆ ಈ ಬಾರಿ ಹಲವು ಕಂಡೀಷನ್ ಹಾಕಿದೆ. ನೂತನ ಸಮಿತಿಗೆ ಏಕದಿನ, ಟೆಸ್ಟ್ ಹಾಗೂ ಟಿ20 ತಂಡಕ್ಕೆ ಮೂರು ತಂಡಗಳನ್ನು ಆಯ್ಕೆ, ಮೂರು ನಾಯಕರ ಆಯ್ಕೆ ಸೇರಿದಂತೆ 8 ಜವಾಬ್ದಾರಿ ನೀಡಿದೆ. 
 

ಮುಂಬೈ(ನ.19) ಟೀಂ ಇಂಡಿಯಾಗೆ ಸೋಲು ಹೊಸದೇನಲ್ಲ. ಆದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಸೋಲು ಬಿಸಿಸಿಐ ಆಕ್ರೋಶ ಹೆಚ್ಚಿಸಿದೆ. ಹೀಗಾಗಿ ಬಿಸಿಸಿಐ ಹಿಂದೆಂದೂ ಕಾಣದಂತೆ ಆಕ್ರಮಣಕಾರಿ ನೀತಿ ಅನುಸರಿಸುತ್ತಿದೆ. ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲು ಹಾಗೂ ಟೂರ್ನಿಯುದ್ದಕ್ಕೂ ಭಾರತದ ಪ್ರದರ್ಶನಕ್ಕೆ ಬಿಸಿಸಿಐ ಗರಂ ಆಗಿದೆ. ಈಗಾಗಲೇ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾ ಮಾಡಿದೆ. ಇದೀಗ ಹೊಸ ಆಯ್ಕೆ ಸಮಿತಿಗೆ ಸೂಕ್ತರಿಂದ ಅರ್ಜಿ ಅಹ್ವಾನಿಸಿದೆ. ಹೊಸದಾಗಿ ರಚನೆಯಾಗುವ ಆಯ್ಕೆ ಸಮಿತಿಗೆ ಬಿಸಿಸಿಐ 8 ಜವಾಬ್ದಾರಿ ನೀಡಲಾಗಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲವರು ಮಾತ್ರ ಅರ್ಜಿ ಹಾಕಿದರೆ ಸಾಕು ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ. ಬಿಸಿಸಿಐ ನೀಡಿರುವ 8 ಜವಾಬ್ದಾರಿಗಳು ಈ ಕೆಳಗಿವೆ.

1) ಟೀಂ ಇಂಡಿಯಾಾಗಿ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡುವುದು, ಎಲ್ಲಾ ಆಯ್ಕೆಗಳು ಪಾರದರ್ಶಿಕವಾಗಿರಬೇಕು
2) ಟೀಂ ಇಂಡಿಯಾ ದ ಪ್ಲೇಯಿಂಗ್ 11ನಷ್ಟೇ ಉತ್ತಮ ಹಾಗೂ ಬಲಿಷ್ಠ ಬೆಂಚ್ ಸ್ಟ್ರೆಂತ್ ತಯಾರಿ
3) ಬಿಸಿಸಿಐನ ಎಲ್ಲಾ ಮೀಟಿಂಗ್,ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು
4) ಅಂತಾರಾಷ್ಟ್ರೀಯ ಹಾಗೂ ದೇಶಿ ಟೂರ್ನಿಗೆ ತೆರಳಿ ಆಟಗಾರರ ಪ್ರದರ್ಶನ ಗಮನಿಸಬೇಕು
5) ಪ್ರತಿ ಮೂರು ತಿಂಗಳಿಗೆ ಆಟಗಾರ ಪ್ರದರ್ಶನ, ಆಯ್ಕೆ ಮಾಡಿದ ತಂಡದ ಪ್ರದರ್ಶನ ವರದಿಯನ್ನು ಬಿಸಿಸಿಐಗೆ ನೀಡಬೇಕು, ತಂಡದಲ್ಲಿ ಆಗಬೇಕಿರುವ ಬದಲಾವಣೆ ಮಾಹಿತಿ ನೀಡಬೇಕು
6) ಮಾಧ್ಯಮಕ್ಕೆ ತಂಡದ ಆಯ್ಕೆ ಕುರಿತು ಮಾಹಿತಿ ನೀಡಬೇಕು, ಬಿಸಿಸಿಐ ನಿಯಮದನ್ವಯ ಮಾಹಿತಿ ನೀಡಬೇಕು
7) ಟೆಸ್ಟ್, ಏಕದಿನ ಹಾಗೂ ಟಿ20 ಮೂರು ತಂಡಕ್ಕೆ ಮೂರು ನಾಯಕರ ಆಯ್ಕೆ ಮಾಡಬೇಕ
8) ಬಿಸಿಸಿಐನ ಎಲ್ಲಾ ನಿಯಮ, ನೀತಿಗಳಿಗೆ ಬದ್ಧರಾಗಿರಬೇಕು

ಆಯ್ಕೆ ಸಮಿತಿ ವಜಾ ಬಳಿಕ ಟೀಂ ಇಂಡಿಯಾಗೆ ಸರ್ಜರಿ, ನಾಯಕತ್ವ ಬದಲಾವಣೆಗೆ ಬಿಸಿಸಿಐ ಪ್ಲಾನ್

ಬಿಸಿಸಿಐ ನೀಡಿರುವ ಈ 8 ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲವರು ಅರ್ಜಿ ಹಾಕಲು ಸೂಚಿಸಲಾಗಿದೆ.  ಅರ್ಜಿ ಸಲ್ಲಿಸುವವರು ಕನಿಷ್ಠ 7 ಟೆಸ್ಟ್‌ ಅಥವಾ 30 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಇಲ್ಲವೇ ಕನಿಷ್ಠ 10 ಏಕದಿನ ಹಾಗೂ 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು ಎಂದು ಬಿಸಿಸಿಐ ಷರತ್ತು ವಿಧಿಸಿದೆ. ಜೊತೆಗೆ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಕನಿಷ್ಠ 5 ವರ್ಷಗಳಾಗಿರಬೇಕು. ಟಿ20 ಅನುಭವವನ್ನು ಪರಿಗಣಿಸದೆ ಇರುವುದು ಅಚ್ಚರಿ ಮೂಡಿಸಿದೆ.

ಚೇತನ್‌ ಶರ್ಮಾ, ಹರ್ವಿಂದರ್‌ ಸಿಂಗ್‌, ಸುನಿಲ್‌ ಜೋಶಿ ಹಾಗೂ ದೇಬಾಶಿಶ್‌ ಮೊಹಂತಿ ಅವರ ಸೇವಾವಧಿ ಮುಕ್ತಾಯಗೊಳ್ಳುವ ಮೊದಲೇ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಸಾಮಾನ್ಯವಾಗಿ ಆಯ್ಕೆ ಸಮಿತಿ 4 ವರ್ಷಗಳ ಅವಧಿ ಹೊಂದಿರಲಿದೆ. ಇದೇ ವೇಳೆ ಆಯ್ಕೆ ಸಮಿತಿ ಸದಸ್ಯರ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನ.28 ಕೊನೆ ದಿನವಾಗಿದೆ.

ಟಿ20 ವಿಶ್ವಕಪ್ ಸೋಲಿಗೆ ತಲೆದಂಡ, ಮುಖ್ಯಸ್ಥ ಸೇರಿ ಟೀಂ ಇಂಡಿಯಾ ಆಯ್ಕೆ ಸಮತಿ ವಜಾ

ಭಾರತ ಟಿ20 ತಂಡಕ್ಕೆ ಧೋನಿ ನಿರ್ದೇಶಕ?
 ಟಿ20 ವಿಶ್ವಕಪ್‌ನಲ್ಲಿ ವೈಫಲ್ಯ ಅನುಭವಿಸಿದ ಭಾರತ ತಂಡದಲ್ಲಿ ಸುಧಾರಣೆ ತರಲು ಯೋಜನೆ ರೂಪಿಸುತ್ತಿರುವ ಬಿಸಿಸಿಐ, ತಂಡಕ್ಕೆ ಮಾಜಿ ನಾಯಕ ಎಂ.ಎಸ್‌.ಧೋನಿ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.  

click me!