IPL 2023 ವೇಳಾಪಟ್ಟಿ ಚರ್ಚೆ, ಎಪ್ರಿಲ್ 1ಕ್ಕೆ ಟೂರ್ನಿ ಆರಂಭ, ಮೇ. 28ಕ್ಕೆ ಫೈನಲ್!

By Suvarna NewsFirst Published Jan 26, 2023, 7:14 PM IST
Highlights

ಐಪಿಎಲ್ 2023 ಟೂರ್ನಿಗೆ ತಯಾರಿಗಳು ಆರಂಭಗೊಂಡಿದೆ. ಬಿಸಿಸಿಐ ಇದೀಗ ವೇಳಾಪಟ್ಟ ಅಂತಿಮಗೊಳಿಸುವ ಕಸರತ್ತು ನಡೆಸುತ್ತಿದೆ. ಇದರ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಿಂದ ಮೇ ತಿಂಗಳ ಅಂತ್ಯಕ್ಕೂ ಮೊದಲೇ ಐಪಿಎಲ್ ಮುಗಿಸಬೇಕಾದ ಅನಿವಾರ್ಯತೆ ಇದೆ. 2023ರ  ಐಪಿಎಲ್ ವೇಳಾಪಟ್ಟಿ ಇಲ್ಲಿದೆ.
 

ಮುಂಬೈ(ಜ.26): ಐಪಿಎಲ್ 2023ರ ಟೂರ್ನಿಗೆ ಬಿಸಿಸಿಐ ಅಂತಿಮ ಕಸರತ್ತು ನಡೆಸುತ್ತಿದೆ. ಇದೀಗ ವೇಳಾಪಟ್ಟಿ ಕುರಿತು ಅಂತಿಮ ಹಂತದ ಹಂತದ ಚರ್ಚೆ ಪೂರ್ಣಗೊಂಡಿದೆ. ಬಿಸಿಸಿಐ ಮೂಲಗಳ ಪ್ರಕಾರ ಎಪ್ರಿಲ್ 1 ರಂದು ಐಪಿಎಲ್ 2023 ಟೂರ್ನಿ ಆರಂಭಗೊಳ್ಳುತ್ತಿದೆ. ಇನ್ನು ಮೇ.28ಕ್ಕೆ ಐಪಿಎಲ್ ಫೈನಲ್ ಪಂದ್ಯ ನಡಯಲಿದೆ. ಮೇ.28ರೊಳಗೆ ಐಪಿಎಲ್ ಟೂರ್ನಿ ಮುಗಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ. ಕಾರಣ ಜೂನ್ 8 ರಂದು ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ನಡೆಯಲಿದೆ. 

10 ತಂಡಗಳ ಕಾರಣ 74 ದಿನ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡಿತ್ತು. ಆದರೆ ಟಸ್ಟ್ ಚಾಂಪಿಯನ‌ಶಿಪ್ ಫೈನಲ್ ಪಂದ್ಯದ ಕಾರಣ ಈ ಬಾರಿ ಬಿಸಿಸಿಐಗೆ ಕೇವಲ 54 ದಿನ ಮಾತ್ರ ಸಿಗಲಿದೆ. ಸಂಪೂರ್ಣ ವೇಳಾಪಟ್ಟಿ ಫೆಬ್ರವರಿ ಮೊದಲ ವಾರದಲ್ಲಿ ಅಂತಿಗೊಳಿಸಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮೂಲಗಳು ಹೇಳಿವೆ.

Women's IPL : ಅದಾನಿ ತೆಕ್ಕೆಗೆ ಅಹಮದಾಬಾದ್‌, ಬೆಂಗಳೂರು ತಂಡವನ್ನು ಖರೀದಿಸಿದ ಆರ್‌ಸಿಬಿ ಫ್ರಾಂಚೈಸಿ..!

ನಾವು ಐಪಿಎಲ್ ವೇಳಾಪಟ್ಟಿಯ ಅಂತಿಮ ಹಂತದ ಚರ್ಚೆಯಲ್ಲಿದ್ದೇವೆ. ಮಹಿಳಾ ಐಪಿಎಲ್ ಟೂರ್ನಿಗೆ ಅಂತಿ ರೂಪರೇಶೆ ನೀಡಬೇಕಿದೆ. ಮಹಿಳಾ ಐಪಿಎಲ್ ಟೂರ್ನಿ ತಂಡಗಳು ಅಂತಿಮಗೊಂಡಿದೆ. ಆಟಗಾರರ ಹರಾಜು ಸೇರಿದಂತೆ ಹಲವು ಪ್ರಕ್ರಿಯೆ ಕುರಿತು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ. ಇದೇ ಸಭೆಯಲ್ಲಿ ವೇಳಾಪಟ್ಟಿ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಜೂನ್ 8 ರಂದು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಕಾರಣ ಎಪ್ರಿಲ್ 1 ರಂದು ಐಪಿಎಲ್ 2023 ಟೂರ್ನಿ ಆರಂಭಿಸಿ ಮೇ.28ಕ್ಕೆ ಅಂತ್ಯಗೊಳಿಸುವುದು ಸೂಕ್ತ. ಹೀಗಾಗಿ ಡಬಲ್ ಹೆಡ್ಡರ್ ಪಂದ್ಯಗಳ ಸಂಖ್ಯೆ ಕಳೆದಬಾರಿಗಿಂತ ಹೆಚ್ಚಾಗಲಿದೆ ಎಂದು ಮೂಲಗಳು ಹೇಳಿವೆ.

ಎಪ್ರಿಲ್ 1 ಶನಿವಾರ. ಇನ್ನು ಫೈನಲ್ ಪಂದ್ಯ ಆಯೋಜಿಸಿರುವ ಮೇ.28 ಭಾನುವಾರವಾಗಿದೆ. ಐಪಿಎಲ್ ಪ್ಲೇ ಆಫ್ ಸಂದರ್ಭದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ಆಟಗಾರರ ಲಭ್ಯತೆ ಇರುವುದಿಲ್ಲ. ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆಯಾದರೆ, ಕೆಲ ಆಟಗಾರರು ಐಪಿಎಲ್ ಪ್ಲೇ ಆಫ್ ಹಂತದ ಪಂದ್ಯಕ್ಕೆ ಲಭ್ಯವರುವುದಿಲ್ಲ.

IPL 2023: ಭರ್ಜರಿ ಸಿಕ್ಸರ್‌ ಮೂಲಕ ಅಭ್ಯಾಸ ಆರಂಭಿಸಿದ ಮಹೇಂದ್ರ ಸಿಂಗ್ ಧೋನಿ..!

ವಿಶ್ವಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಪಂದ್ಯಕ್ಕೆ ಆಸ್ಟ್ರೇಲಿಯಾ ಸ್ಥಾನ ಖಚಿತಪಡಿಸಿಕೊಂಡಿದೆ. ಭಾರತ ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ದಧ ಟೆಸ್ಟ್ ಸಣಿಯಲ್ಲಿ 3-1 ಅಥವಾ 2-0 ಅಂತರದಲ್ಲಿ ಸರಣಿ ಗೆದ್ದರೆ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಪಂದ್ಯಕ್ಕೆ ಆಯ್ಕೆಯಾಗಲಿದೆ.
 

click me!