ಭಾರತೀಯ ಕ್ರಿಕೆಟಿಗರ ಸಂಸ್ಥೆ ಚುನಾವಣೆಗೆ ಕರ್ನಾಟಕ ಶಾಂತಾ ರಂಗಸ್ವಾಮಿ ಸ್ಪರ್ಧಿಸಿದ್ದಾರೆ. ಇತ್ತೀಚೆಗಷ್ಟೇ ಸ್ವಹಿತಾಸಕ್ತಿ ಆರೋಪದ ಹಿನ್ನಲೆಯಲ್ಲಿ ಬಿಸಿಸಿಐ ಸಲಹಾ ಸಮಿತಿಗೆ ರಾಜಿನಾಮೆ ನೀಡಿದ್ದ ಶಾಂತಾ ಇದೀಗ ಚುನಾವಣೆಗೆ ಧುಮುಕಿದ್ದಾರೆ.
ನವದೆಹಲಿ(ಅ.11): ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಕರ್ನಾಟಕದ ಶಾಂತಾ ರಂಗಸ್ವಾಮಿ ಪ್ರತಿನಿಧಿಯಾಗಿ ಬಿಸಿಸಿಐ ಸಮಿತಿ ಸೇರಿಕೊಳ್ಳುವ ಸಾಧ್ಯತೆಯಿದೆ. ಶುಕ್ರವಾರದಿಂದ ಇಲ್ಲಿ 3 ದಿನಗಳ ಕಾಲ ನಡೆಯಲಿರುವ ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ) ಚುನಾವಣೆಯಲ್ಲಿ ಪ್ರತಿನಿಧಿಗಳ ಮಹಿಳಾ ವಿಭಾಗದಲ್ಲಿ ಶಾಂತಾ ರಂಗಸ್ವಾಮಿ ಸ್ಪರ್ಧಿಸಿದ್ದರು.
ಇದನ್ನೂ ಓದಿ: ಬಿಸಿಸಿಐ ಚುನಾವಣೆಗೆ 8 ರಾಜ್ಯ ಸಂಸ್ಥೆಗಳು ಅನರ್ಹ!
undefined
ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಾನಾ ಎಸ್. ಡಾಬಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದಾಗಿ ಶಾಂತಾ ರಂಗಸ್ವಾಮಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಸುಪ್ರೀಂ ಕೋರ್ಟ್ ನೇಮಿತ ಆರ್.ಎಂ ಲೋಧಾ ಸಮಿತಿ ಶಿಫಾರಸು ಮೇರೆಗೆ 9 ಸದಸ್ಯರ ಬಿಸಿಸಿಐ ಸಮಿತಿಯನ್ನು ಆಯ್ಕೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಬಿಸಿಸಿ ನೊಟೀಸ್; ಉತ್ತರಕ್ಕೂ ಮೊದಲೇ ರಾಜಿನಾಮೆ ನೀಡಿದ ಶಾಂತಾ!
ಐಸಿಎ ಪ್ರತಿನಿಧಿಗಳನ್ನು ಬಿಸಿಸಿಐ ಸಮಿತಿಗೆ ಆಯ್ಕೆ ಮಾಡಲಿದ್ದು, ಮಹಿಳಾ ವಿಭಾಗದ ಚುನಾವಣಾ ಕಣದಲ್ಲಿ ಶಾಂತಾ ರಂಗಸ್ವಾಮಿ ಏಕೈಕ ಅಭ್ಯರ್ಥಿಯಾಗಿದ್ದಾರೆ. ಪುರುಷರ ವಿಭಾಗದ ಪ್ರತಿನಿಧಿಯಾಗಲು ಕರ್ನಾಟಕದ ದೊಡ್ಡ ಗಣೇಶ್, ಮಾಜಿ ಕ್ರಿಕೆಟಿಗರಾದ ಕೀರ್ತಿ ಆಜಾದ್ ಹಾಗೂ ಅನ್ಶುಮಾನ್ ಗಾಯಕ್ವಾಡ್ ಸ್ಪರ್ಧಾ ಕಣದಲ್ಲಿದ್ದಾರೆ.
ಇದನ್ನೂ ಓದಿ: BCCI ನೊಟೀಸ್ ಬೆನ್ನಲ್ಲೇ CACಗೆ ಕಪಿಲ್ ದೇವ್ ರಾಜಿನಾಮೆ!
ಸ್ವಹಿತಾಸಕ್ತಿ ಆರೋಪದ ಹಿನ್ನಲೆಯಲ್ಲಿ ಶಾಂತಾ ರಂಗಸ್ವಾಮಿ, ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಸಮಿತಿ ಮುಖ್ಯಸ್ಥ ಕಪಿಲ್ ದೇವ್ ಕೂಡ ರಾಜಿನಾಮೆ ನೀಡಿದ್ದರು. ಬಳಿಕ ಪ್ರತಿಕ್ರಿಸಿದ್ದ ಕಪಿಲ್ ದೇವ್, ಗೌರವದಿಂದ ಒಂದು ಸಭೆಯಲ್ಲಿ ಹುದ್ದೆ ಅಲಂಕರಿಸುವುದು ಸ್ವಹಿತಾಸಕ್ತಿಯಲ್ಲ ಎಂದಿದ್ದಾರೆ.