
ಟೀಂ ಇಂಡಿಯಾ ಆಯ್ಕೆ ಬಗ್ಗೆ ಟೀಕೆಗಳು ಇದ್ದದ್ದೇ. ಆದರೆ ಆರ್‍ಸಿಬಿ ಅಭಿಮಾನಿಗಳು, ಕ್ರಿಕೆಟ್ ಅಭಿಮಾನಿಗಳು, ಕೆಲವು ವಿಶ್ಲೇಷಕರು ಕೇಳುತ್ತಿರುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಜತ್ ಪಾಟೀದಾರ್, ಭುವನೇಶ್ವರ್ ಕುಮಾರ್ ಹಾಗೂ ಕೃನಾಲ್ ಪಂಡ್ಯ. ಈ ಮೂವರು ಏನು ಅಪರಾಧ ಮಾಡಿದ್ದಾರೆ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಭುಗಿಲೆದ್ದಿದೆ.
2026 ಏಷ್ಯನ್ ಗೇಮ್‌ಗೆ ಟೀಂ ಇಂಡಿಯಾದ ಹಠಾತ್ ಬದಲಾವಣೆ ಆಗಿದೆ. ಬೆನ್ನಲ್ಲೇ ಈ ಪ್ರಶ್ನೆ ಮತ್ತೊಮ್ಮೆ ಎದ್ದಿದೆ. ಜೊತೆಗೆ ಸಾಕಷ್ಟು ಊಹಾಪೋಗಳು ಎದ್ದಿವೆ. ವರುಣ್ ಚಕ್ರವರ್ತಿ ಗಾಯಗೊಂಡ ನಂತರ ಆಯ್ಕೆದಾರರು ಡೆಲ್ಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ವಿಪ್ರಜ್ ನಿಗಮ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
1983ರ ವಿಶ್ವಕಪ್ ವಿಜೇತ ಕೃಷ್ಣಮಾಚಾರಿ ಶ್ರೀಕಾಂತ್ ಈ ಬಗ್ಗೆ ಗಂಭೀರ ಪ್ರಶ್ನೆಗಳನ್ನ ಎತ್ತಿದ್ದು, ಬಿಸಿಸಿಐ ಬಳಿ ಉತ್ತರ ಇದೆಯಾ? ಇಲ್ಲವೋ ಗೊತ್ತಿಲ್ಲ. ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ವಿಶ್ಲೇಷಣೆ ಮಾಡಿರುವ ಶ್ರೀಕಾಂತ್, ಐಪಿಎಲ್ ಹಾಗೂ ದೇಸಿಯ ಟೂರ್ನಿಗಳಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದರೂ ಕೆಲವು ಆಟಗಾರರನ್ನು ಪದೇ ಪದೇ ಕಡೆಗಣಿಸ್ತಿರುವ ಬಿಸಿಸಿಐ ಆಯ್ಕೆ ಸಮಿತಿಯ ನೈತಿಕತೆಯನ್ನ ಪ್ರಶ್ನೆ ಮಾಡಿದ್ದಾರೆ.
ಅದರಲ್ಲೂ ಮುಖ್ಯವಾಗಿ ರಜತ್ ಪಾಟೀದಾರ್ ಕೃನಾಲ್ ಪಾಂಡ್ಯ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ನನ್ನ ಪ್ರಕಾರ ಈ ಮೂವರು ಏನು ತಪ್ಪು ಮಾಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಅವರನ್ನು ಯಾಕೆ ನಿರಂತವಾಗಿ ಕಡೆಗಣಿಸಲಾಗುತ್ತಿದೆ? ಬಿಸಿಸಿಐ ಮಾಡುತ್ತಿರುವ ಕೆಲವು ಸರಳ ಆಯ್ಕೆಗಳು ಅರ್ಥ ಆಗಲ್ಲ. ಭುವಿ ಮತ್ತು ಕೃನಾಲ್ ಅವರನ್ನು ವಯಸ್ಸಿನ ಕಾರಣಕ್ಕೆ ಹೊರಗಿಡೋದು ಆಯ್ಕೆಗಾರರ ಆಯ್ಕೆ ಆಗಬಾರದು. ಇತ್ತೀಚೆಗಿನ ಅವರ ಪ್ರದರ್ಶನ, ಕೌಶಲ್ಯ, ಸಾಮರ್ಥ್ಯವನ್ನು ಯಾಕೆ ಗಣನೆಗೆ ತೆಗೆದುಕೊಳ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರ್ಥವಾಗದ ಇನ್ನೊಂದು ಆಯ್ಕೆ ಅಂದರೆ ವರುಣ್ ಚಕ್ರವರ್ತಿ ತಂಡದಿಂದ ಹೊರಗೆ ಬಿದ್ದಾಗ, ಅವರಂಥ ಬಲಿಷ್ಠ ಸ್ಪಿನ್ನರ್ ವಿಪ್ರರಾಜ್ ಬದಲಿ ಆಗಲು ಹೇಗೆ ಸಾಧ್ಯ? ಈ ಮೊದಲು ವಿಪ್ರಜ್ ಚೆನ್ನಾಗಿ ಆಡ್ತಿದ್ದರು. ಆದರೆ ಅವರಿಗೆ ಕ್ರಿಕೆಟ್ ಆಡಲು ಅವಕಾಶವೇ ಸಿಕ್ಕಿಲ್ಲ. ಹೀಗಿದ್ದೂ ಅವರು ದಿಢೀರ್ ಅಂತಾ ತಂಡವನ್ನು ಹೇಗೆ ಸೇರಿದರು? ಎಂದು ಪ್ರಶ್ನೆ ಮಾಡಿದ್ದಾರೆ. '
ಯುವ ಆಟಗಾರರಾದ ರವಿ ಬಿಷ್ಣೋಯ್ ಮತ್ತು ಯಶ್ ಠಾಕೂರ್ ಆಯ್ಕೆಯನ್ನೂ ಪ್ರಶ್ನೆ ಮಾಡಲಾಗಿದೆ. ಯುವ ಆಟಗಾರರು ತಮ್ಮ ಪ್ರದರ್ಶನದ ಮೂಲಕ ಹಿರಿಯ ಆಟಗಾರರ ಜಾಗವನ್ನು ಅಲಂಕರಿಸಬೇಕು. ಐಪಿಎಲ್‌ನಂಥ ವೇದಿಕೆಯಲ್ಲಿ ಆಡಲು ಅವಕಾಶ ಸಿಗದೇ ಇದ್ದವರು ಟೀಂ ಇಂಡಿಯಾಗೆ ಹೇಗೆ ಆಯ್ಕೆ ಮಾಡ್ತಾರೆ. ಇದಕ್ಕೆ ಮಾನದಂಡ ಏನು?
ಗಾಯದ ಕಾರಣದಿಂದ ವರುಣ್ ಚಕ್ರವರ್ತಿ ಅಫ್ಘಾನ್ ವಿರುದ್ಧದ ಟಿ-20 ತಂಡದಿಂದ ಹೊರಗೆ ಉಳಿದಿದ್ದಾರೆ. ಅಲ್ಲದೇ ಏಷ್ಯನ್ ಗೇಮ್ಸ್‌ಗೂ ಅವರು ಅಲಭ್ಯರಾಗಲಿದ್ದಾರೆ. ಸೆಪ್ಟೆಂಬರ್ 28 ರಂದು ಜಪಾನ್ ನಗೋಯಾದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದೊಂದಿಗೆ ಭಾರತ ತಂಡವು ತನ್ನ ಅಭಿಯಾನವನ್ನು ಆರಂಭಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.