
ಮುಂಬೈ (ಸೆ.20) ಐಪಿಎಲ್ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ಸ್ಪಾನ್ಸರ್, ಜಾಹೀರಾತು ನೀಡಲು ಕಂಪನಿಗಳು ಮುಗಿ ಬೀಳುತ್ತವೆ. ದುಬಾರಿ ಬೆಲೆ ನೀಡಿ ಪ್ರಾಯೋಜಕತ್ವ ನೀಡುತ್ತದೆ. ಜೊತೆಗೆ ಅದ್ದೂರಿ ಪ್ರಚಾರವನ್ನು ಪಡೆಯುತ್ತವೆ. ಐಪಿಎಲ್ ಆರಂಭಗೊಂಡು ಇಲ್ಲೀವರೆಗೆ ಹಲವು ಕಂಪನಿಗಳು ಪ್ರಾಯೋಜಕಕತ್ವಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹಣ ಬಿಸಿಸಿಗೆ ನೀಡಿದೆ. ಪ್ರಮುಖವಾಗಿ ಐಪಿಎಲ್ ಟೈಟಲ್ ಸ್ಪಾನ್ಸರ್ ನೀಡುವ ಕಂಪನಿ ಒಂದೆರಡು ವರ್ಷಕ್ಕೆ ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡುತ್ತಿದೆ. ಆದರೆ ಟೈಟಲ್ ಸ್ಪಾನ್ಸರ್ ನೀಡುವ ಕಂಪನಿಗೆ ಐಪಿಎಲ್ ಶಾಪ ಬಿಡುತ್ತಿಲ್ಲ. ಐಪಿಎಲ್ ಟೈಟಲ್ ಸ್ಪಾನ್ಸರ್ ನೀಡಿದ ಕಂಪನಿಗಳು ಒಂದಲ್ಲಾ ಒಂದು ಸಮಸ್ಯೆಗೆ ತುತ್ತಾಗುತ್ತಿದೆ. ಇದೀಗ ಟಾಟಾ ಸರದಿ ಆರಂಭಗೊಂಡಿದೆ.
ಡಿಎಲ್ಎಫ್ ಐಪಿಎಲ್‌ನಿಂದ ಆರಂಭಗೊಂಡ ಟೈಟಲ್ ಸ್ಪಾನ್ಸರ್ ಇದೀಗ ಟಾಟಾ ಐಪಿಎಲ್ ವರೆಗೂ ಹಲವು ಕಂಪನಿಗಳು ಐಪಿಎಲ್ ಟೈಟಲ್ ಪ್ರಾಯೋಜಕತ್ವ ನೀಡಿದೆ. ಈ ಪೈಕಿ ಬಹುತೇಕ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದೆ. ಆರ್ಥಿಕ ಸಂಕಷ್ಟಗಳಿಂದ ಕೆಲ ಕಂಪನಿಗಳು ಸಾಲದಲ್ಲಿ ಸಿಲುಕಿ ಒದ್ದಾಡಿದೆ. ಟಾಟಾ ಗ್ರೂಪ್ ಕಳೆದ ಕೆಲ ವರ್ಷಗಳಿಂದ ಐಪಿಎಲ್ ಟೈಟಲ್ ಸ್ಪಾನ್ಸರ್ ಆಗಿದೆ. ಆದರೆ ಟಾಟಾ ಆದಾಯದಲ್ಲಿ ಭಾರಿ ಕುಸಿತ ಕಂಡಿದೆ. ಟಾಟಾ ಷೇರು ಮೌಲ್ಯಗಳು ಕುಸಿತ ಕಂಡಿದೆ. ಜೊತೆಗೆ ಟಾಟಾದಲ್ಲಿ ಆಂತರಿಕ ಕಲಹ ತೀವ್ರಗೊಂಡಿದೆ. ಟಾಟಾ ಸನ್ಸ್ ಚೇರ್ಮನ್ ಚಂದ್ರಶೇಖರನ್ ರಾಜೀನಾಮೆ ನೀಡಿ ಬಳಿಕ ಪಾಲುದಾರರ ಒತ್ತಾಯದ ಮೇರೆಗೆ ಮತ್ತೆ ಮರು ನೇಮಕಗೊಂಡಿದ್ದಾರೆ. ಇಷ್ಟಾದರೂ ಟಾಟಾದ ಸಮಸ್ಯೆಗಳು ಬಗೆಹರಿದಿಲ್ಲ. ಆಂತರಿಕ ಸಮಸ್ಯೆಗಳಿಂದ ಷೇರು ಮೌಲ್ಯ, ಆದಾಯ ಭಾರಿ ಕುಸಿತ ಕಾಣುತ್ತಿದೆ. ಭಾರತದ ಹೆಮ್ಮೆಯ ಹಾಗೂ ಸಧೃಡ ಕಂಪನಿಯಾಗಿ ಗುರುತಿಸಿಕೊಂಡಿದ್ದ ಟಾಟಾದ ಬುಡ ಇದೀಗ ಅಲ್ಲಾಡುತ್ತಿದೆ.
2022ರಲ್ಲಿ ಟಾಟಾ ಕಂಪನಿ ಐಪಿಎಲ್ ಟೈಟಲ್ ಸ್ಪಾನ್ಸರ್ ಪಡೆದುಕೊಂಡಿತು. ಬಳಿಕ 2028ರ ವರೆಗೆ ಟಾಟಾ ಟೈಟಲ್ ಸ್ಪಾನ್ಸರ್ ವಿಸ್ತರಣೆ ಮಾಡಿದೆ. ಆದರೆ ಟಾಟಾ ಗ್ರೂಪ್ ತೀವ್ರ ಸಮಸ್ಯೆಯಲ್ಲಿ ಸುಲಿಕಿಕೊಂಡಿದೆ. ಟಾಟಾ ಸನ್ಸ್ ಸೇರಿದಂತೆ ಟಾಟಾ ಗ್ರೂಪ್‌ನ ಹಲವು ಕಂಪನಿಗಳ ಆಂತರಿಕ ಕಚ್ಚಾಟ ತೀವ್ರಗೊಂಡಿದೆ.
2008ರಲ್ಲಿ ಐಪಿಎಲ್ ಆರಂಭಗೊಂಡ ದಿನದಿಂದ ಇಲ್ಲೀವರೆಗೆ ಹಲವು ಕಂಪನಿಗಳು ಟೈಟಲ್ ಸ್ಪಾನ್ಸರ್‌ಶಿಪ್ ನೀಡಿದೆ. ಡಿಎಲ್ಎಫ್, ಪೆಪ್ಸಿ, ವಿವೋ, ಡ್ರೀಮ್11 ಹಾಗೂ ಟಾಟಾ. ಈ ಪೈಕಿ ಬಹುತೇಕ ಎಲ್ಲಾ ಕಂಪನಿಗಳು ಒಂದಲ್ಲಾ ಒಂದು ಸಂಕಷ್ಟಕ್ಕೆ ಸಿಲುಕಿದೆ. ಆದರೆ ಈ ಎಲ್ಲಾ ಕಂಪನಿಗಳಿಗೆ ಐಪಿಎಲ್ ಟೈಟಲ್ ಸ್ಪಾನ್ಸರ್‌ನಿಂದಾಗಲಿ, ಐಪಿಎಲ್ ಟೂರ್ನಯಿಂದಾಗಲಿ ಸಮಸ್ಯೆಯಾಗಿಲ್ಲ. ಆದರೆ ಈ ಕಂಪನಿಗಳು ತಮ್ಮದೇ ವೈಯುಕ್ತಿಕ ಸಮಸ್ಯೆಗಳಿಂದ ಬಳಲಿದೆ.
2008ರಿಂದ 2012ರ ವರೆಗೆ ಡಿಎಲ್‌ಎಫ್ ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ನೀಡಿತ್ತು. ಬಳಿಕ ಡಿಎಲ್‌ಎಫ್ ಆರ್ಥಿಕ ಸಮಸ್ಯೆ , ಮಾರಾಟ ಸಮಸ್ಯೆ ಎದುರಿಸಿತು. ಪೆಪ್ಸಿ ಬಳಿಕ ಪ್ರಾಯೋಜಕತ್ವ ಪಡೆದುಕೊಂಡಿತು. ಇತ್ತ ಪೆಪ್ಸಿಗೆ ಉದ್ಯಮದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ, ಜೊತೆಗೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ಗಳಿಂದ ಹೊಡೆತ ಬಿದ್ದಿತು. 2016ರಲ್ಲಿ ವಿವೋ ಪ್ರಾಯೋಜಕತ್ವ ನೀಡಿತ್ತು. ಆದರೆ ಭಾರತ ಚೀನಾ ಗಡಿ ಸಮಸ್ಯೆಯಿಂದ ಹಿಂಪಡೆಯಬೇಕಾಯಿತು. 2022ರಲ್ಲಿ ಟಾಟಾ ಟೈಟಲ್ ಸ್ಪಾನ್ಸರ್‌ಶಿಪ್ ಹಕ್ಕು ಪಡೆದುಕೊಂಡಿತು. ಇದೀಗ ಟಾಟಾದಲ್ಲಿ ತಳಮಳ ಶುರುವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.