
ನವದೆಹಲಿ: ಸತತ ಸೋಲುಗಳ ಬಳಿಕ ಟೀಂ ಇಂಡಿಯಾ ಆಟಗಾರರ ಮೇಲೆ ಬಿಸಿಸಿಐ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಾದರೆ ಆಟಗಾರರು ಕಡ್ಡಾಯವಾಗಿ ದೇಸಿ ಕ್ರಿಕೆಟ್ ಆಡಲೇಬೇಕು ಎಂದು ಬಿಸಿಸಿಐ ಆದೇಶಿಸಿದೆ.
ಆಟಗಾರರು ಪಾಲಿಸಲೇಬೇಕಾದ 10 ಪ್ರಮುಖ ನಿಯಮಗಳನ್ನು ಗುರುವಾರ ಬಿಸಿಸಿಐ ಪ್ರಕಟಿಸಿದೆ. ಆಟಗಾರರು ರಾಷ್ಟ್ರೀಯ ತಂಡದಿಂದ ಹೊರಗಿದ್ದಾಗ ದೇಸಿ ಕ್ರಿಕೆಟ್‌ನಲ್ಲಿ ಆಡಬೇಕು. ಅಲ್ಲದಿದ್ದರೆ ಅವರನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದೆ.
ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಗುಜರಾತ್ ಎದುರಾಳಿ, WPL ವೇಳಾಪಟ್ಟಿ ಪ್ರಕಟಿಸಿ ಬಿಸಿಸಿಐ
ಜೊತೆಗೆ ವಿದೇಶಿ ಪ್ರವಾಸ ವೇಳೆ ಆಟಗಾರರ ಪತ್ನಿ, ಕುಟುಂಬಸ್ಥರು ಜೊತೆಗಿರುವುದಕ್ಕೂ ಕಡಿವಾಣ ಹಾಕಿರುವ ಬಿಸಿಸಿಐ, ಸರಣಿ ವೇಳೆ ವೈಯಕ್ತಿಕ ಜಾಹೀರಾತು ಶೂಟಿಂಗ್‌ಗಳಲ್ಲೂ ಪಾಲ್ಗೊಳ್ಳದಂತೆ ನಿರ್ಬಂಧ ಹೇರಿದೆ. ವೈಯಕ್ತಿಕ ಮ್ಯಾನೇಜರ್, ಕಾರ್ಯದರ್ಶಿ, ಶೆಫ್‌ಗಳನ್ನು ಸರಣಿ ವೇಳೆ ಜೊತೆಗೆ ಕರೆದುಕೊಂಡು ಹೋಗುವುದನ್ನೂ ನಿಷೇಧಿಸಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ಕೇಂದ್ರೀಯ ಗುತ್ತಿಗೆಯಲ್ಲಿ ಶುಲ್ಕ ಕಡಿತ ಮಾತ್ರವಲ್ಲದೇ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಕ್ಕೂ ನಿರ್ಬಂಧ ವಿಧಿಸಲಾಗುವುದು ಎಂದು ಬಿಸಿಸಿಐ ಎಚ್ಚರಿಸಿದೆ.
ಭಾರತ ತಂಡ ಕಳೆದ ನ್ಯೂಜಿಲೆಂಡ್ ವಿರುದ್ಧ ತವರಿನ ಸರಣಿ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ತೋರಿತ್ತು. ಹೀಗಾಗಿ ಆಟಗಾರರು ತಮ್ಮ ಪ್ರದರ್ಶನ ಉತ್ತಮಗೊಳಿಸಲು, ಏಕಾಗ್ರತೆ ಹೆಚ್ಚಾಗಲು, ತಂಡದ ಶಿಸ್ತು ಕಾಪಾಡಲು ಈ ನಿಯಮಗಳನ್ನು ಬಿಸಿಸಿಐ ಜಾರಿಗೊಳಿಸಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಎರಡು ತಂಡಗಳು ಫೈನಲ್ ಆಡಲಿವೆ: ಭವಿಷ್ಯ ನುಡಿದ ನಾಸಿರ್ ಹುಸೇನ್
ಪ್ರಮುಖ ನಿಯಮಗಳು
1. ಎಲ್ಲಾ ಆಟಗಾರರು ಇನ್ನು ದೇಸಿ ಕ್ರಿಕೆಟ್‌ನಲ್ಲಿ ಆಡುವುದು ಕಡ್ಡಾಯ.
2. ವಿದೇಶಿ ಪ್ರವಾಸ ವೇಳೆ ಪತ್ನಿ, ಕುಟುಂಬಸ್ಥರ ಜೊತೆಗೆ ಇರುವುದಕ್ಕೆ ಕಾಲಮಿತಿ.
3. ಸರಣಿ ವೇಳೆ ಆಟಗಾರರ ವೈಯಕ್ತಿಕ ಮ್ಯಾನೇಜರ್, ಶೆಫ್‌ಗೆ ಅವಕಾಶವಿಲ್ಲ
4. ತಂಡದ ತರಬೇತಿ ಶಿಬಿರದಿಂದ ಬೇಗನೇ ನಿರ್ಗಮಿಸುವಂತಿಲ್ಲ.
5. ಸರಣಿ/ಟೂರ್ನಿ ವೇಳೆ ವೈಯಕ್ತಿಕ ಜಾಹೀರಾತು ಶೂಟಿಂಗ್ ಬ್ಯಾನ್.
6. ವಿದೇಶ ಪ್ರವಾಸ ವೇಳೆ ಕೊಂಡೊಯ್ಯುವ ಲಗೇಜ್ ತೂಕಕ್ಕೂ ಮಿತಿ.
7. ಬಿಸಿಸಿಐ ಶೂಟಿಂಗ್, ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.