
ಬೆಂಗಳೂರು(ಜು.21): ಒಬ್ಬ ಚಾಂಪಿಯನ್ ಆಟಗಾರ ಈ ರೀತಿಯ ಕಳಪೆ ಫಾರ್ಮ್ನಲ್ಲಿರೋದನ್ನ ವಿಶ್ವ ಕ್ರಿಕೆಟ್ ನೋಡುತ್ತಿರುವುದು ಇದೇ ಮೊದಲು. ಈ ಹಿಂದೆ ಕ್ರಿಕೆಟ್ ಜಗತ್ತಿನಲ್ಲಿ ಘಟಾನುಘಟಿ ಆಟಗಾರರು ಕಳಪೆ ಫಾರ್ಮ್ನಿಂದ ಬಳಲಿದ್ದರು. ಅದು ಕೇವಲ ಮೂರ್ನಾಲ್ಕು ಸರಣಿಗಳಿಗೆ ಸೀಮಿತ. ಆದ್ರೆ ವಿರಾಟ್ ಕೊಹ್ಲಿ, ಫಾರ್ಮ್ ಕಳೆದುಕೊಂಡು ಮೂರು ವರ್ಷಗಳು ಆಗ್ತಾ ಬರ್ತಿದೆ, ಅವರ ಬ್ಯಾಟಿಂಗ್ನಿಂದ ಶತಕ ಬರದೆ ಸಾವಿರ ದಿನಗಳು ಕಳೆದಿವೆ. ಈ ಪಂದ್ಯದಲ್ಲಿ ಸೆಂಚುರಿ ಹೊಡೆಯುತ್ತಾರೆ, ಆ ಪಂದ್ಯದಲ್ಲಿ ಹೊಡೆಯುತ್ತಾರೆ ಅನ್ನೋ ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದೆ ಬಂತು. ಅವರು ಮಾತ್ರ ಸೆಂಚುರಿ ಹೊಡೆಯುತ್ತಿಲ್ಲ. ಇಂಗ್ಲೆಂಡ್ನಲ್ಲೂ ವಿಫಲರಾದ್ರು.
ಕಳೆದ 9 ಇನ್ನಿಂಗ್ಸ್ನಿಂದ ಅರ್ಧಶತಕವನ್ನೂ ದಾಖಲಿಸಿಲ್ಲ: ಸೆಂಚುರಿ ಸೈಡಿಗಿರಲಿ, ಭಾರತದ ಪರ ಕೊಹ್ಲಿ ಕಳೆದ 9 ಇನ್ನಿಂಗ್ಸ್ನಿಂದ ಹಾಫ್ ಸೆಂಚುರಿಯನ್ನೂ ದಾಖಲಿಸಿಲ್ಲ. ಈಗ BCCI ಟಾರ್ಗೆಟ್ ಬೇರೆ ನೀಡಿದೆ. ಆಗಸ್ಟ್ 26ರಿಂದ ಆರಂಭವಾಗೋ ಏಷ್ಯಾಕಪ್ನಲ್ಲಿ ರನ್ ಗಳಿಸಿದರೆ ಅಕ್ಟೋಬರ್-ನವೆಂಬರ್ನಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ಗೆ ಆಯ್ಕೆ. ಇಲ್ಲದಿದ್ದರೆ ಡ್ರಾಪ್ ಅಂತ. ಹಾಗಾಗಿ ವೆಸ್ಟ್ ಇಂಡೀಸ್ ಟೂರ್ನಿಂದ ರೆಸ್ಟ್ ಪಡೆದಿರೋ ಕಿಂಗ್ ಕೊಹ್ಲಿ, ಆಗಸ್ಟ್ 1ರಿಂದ ಪ್ರಾಕ್ಟೀಸ್ ಆರಂಭಿಸಲಿದ್ದಾರೆ. ಆದರೆ ಕೊಹ್ಲಿಯನ್ನ ಟಿ20 ವಿಶ್ವಕಪ್ ಟೀಮ್ನಿಂದ ಡ್ರಾಪ್ ಮಾಡೋ ತಾಕತ್ತು ಬಿಸಿಸಿಐಗೆ ಇದೆಯಾ..? ಕೊಹ್ಲಿ ಇಲ್ಲದೆ ಆಸ್ಟ್ರೇಲಿಯಾಗೆ ಭಾರತ ಕ್ರಿಕೆಟ್ ತಂಡವನ್ನ ಕರೆದುಕೊಂಡು ಹೋಗೋ ಧೈರ್ಯವನ್ನು ಕೋಚ್ ರಾಹುಲ್ ದ್ರಾವಿಡ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಮಾಡ್ತಾರಾ..? ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣ ಏನ್ ಗೊತ್ತಾ..?
ಟಿ20 ವಿಶ್ವಕಪ್ನಲ್ಲಿ ರನ್ ಧೀರ ಕೊಹ್ಲಿ: ಯೆಸ್, ಇದೊಂದೇ ಕಾರಣಕ್ಕೆ ಕಿಂಗ್ ಕೊಹ್ಲಿಯನ್ನ ಟಿ20 ವರ್ಲ್ಡ್ಕಪ್ ಟೀಮ್ನಿಂದ ಡ್ರಾಪ್ ಮಾಡಲು ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್ಮೆಂಟ್ ಚಿಂತಿಸುತ್ತಿರುವುದು. 4 ವಿಶ್ವಕಪ್ ಟೂರ್ನಿಗಳನ್ನ ಆಡಿರೋ ಕೊಹ್ಲಿ, ನಾಲ್ಕರಲ್ಲೂ ರನ್ ಹೊಳೆ ಹರಿಸಿದ್ದಾರೆ. ಏಕಾಂಗಿಯಾಗಿ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಕಳೆದ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ವಿಫಲರಾಗಿದ್ದು ಬಿಟ್ಟರೆ ಐಸಿಸಿ ಟೂರ್ನಿಯಲ್ಲಿ ಕೊಹ್ಲಿಯನ್ನ ಕಂಟ್ರೋಲ್ ಮಾಡಲು ಯಾವ ತಂಡದಿಂದಲೂ ಸಾಧ್ಯವಾಗಿಲ್ಲ. 4 ವಿಶ್ವಕಪ್ ಟೂರ್ನಿಗಳಲ್ಲಿ 19 ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ, 76.81ರ ಸರಾಸರಿಯಲ್ಲಿ 845 ರನ್ ಹೊಡೆದಿದ್ದಾರೆ. 129.60ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ 10 ಅರ್ಧಶತಕಗಳನ್ನೂ ದಾಖಲಿಸಿದ್ದಾರೆ. 8 ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ.
ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಜಿಂಬಾಬ್ವೆ ವಿರುದ್ಧ ಕಣಕ್ಕಿಳಿಸಲು ಮುಂದಾಗುತ್ತಿರುವುದೇಕೆ..?
ಈ ಟ್ರ್ಯಾಕ್ ರೆಕಾರ್ಡ್ ನೋಡಿದ ಯಾರೇ ಆಗಲಿ, ಕೊಹ್ಲಿಯನ್ನ ವಿಶ್ವಕಪ್ ಟೀಮ್ನಿಂದ ಡ್ರಾಪ್ ಮಾಡಲು ಸಾಧ್ಯವೇ ಇಲ್ಲ. ಹೌದು, ಕೊಹ್ಲಿ ಎರಡುವರೆ ವರ್ಷದಿಂದ ಶತಕ ಹೊಡೆದಿಲ್ಲ ನಿಜ. ಕಳೆದ 9 ಇನ್ನಿಂಗ್ಸ್ನಿಂದ ಅರ್ಧಶತಕವನ್ನೂ ಬಾರಿಸಿಲ್ಲ ನಿಜ. ಚಾಂಪಿಯನ್ ಆಟಗಾರ ಫಾರ್ಮ್ಗೆ ಮರಳಲು ಜಸ್ಟ್ ಒಂದು ಇನ್ನಿಂಗ್ಸ್ ಸಾಕು. ಆ ಒಂದು ಇನ್ನಿಂಗ್ಸ್ ಏಷ್ಯಾಕಪ್ನಲ್ಲಿ ಬಂದರೆ ಇಂದು ವಿರಾಟ್ ಕೊಹ್ಲಿ ವಿರುದ್ಧ ಮಾತನಾಡುತ್ತಿರುವವವರು ಸೈಲೆಂಟ್ ಆಗಿ ಹೋಗ್ತಾರೆ. ಜಸ್ಟ್ ಒಂದು ಬೆಸ್ಟ್ ಇನ್ನಿಂಗ್ಸ್ಗಾಗಿ ಕೊಹ್ಲಿ ಸಹ ಕಾಯ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.