
ಮುಂಬೈ(ಆ.09): ಬಿಸಿಸಿಐ ಸದ್ಯ ಐಪಿಎಲ್ 2020 ಟೂರ್ನಿ ಆಯೋಜನೆ ಸಿದ್ಧತೆಯಲ್ಲಿದೆ. ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಮಾರ್ಚ್ 29ಕ್ಕೆ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ವೈರಸ್ ಕಾರಣ ಮುಂದೂಡಿಕೆಯಾಗಿತ್ತು. ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣ ಬಾರದ ಹಿನ್ನಲೆಯಲ್ಲಿ ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜಲಾಗುತ್ತಿದೆ. ಕೊರೋನಾ ಕಾರಣ ಆತಂಕದಲ್ಲಿದ್ದ ದೇಶಿ ಟೂರ್ನಿಗಳ ಆರಂಭಕ್ಕೆ ಬಿಸಿಸಿಐ ಮೂಹೂರ್ತ ಫಿಕ್ಸ್ ಮಾಡಿದೆ.
ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ಮುಂದಿನ ವರ್ಷ ಟಿ20 ವಿಶ್ವಕಪ್ ಭಾರತದಲ್ಲಿ..!.
ರಣಜಿ, ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ ಸೇರಿದಂತೆ ದೇಶಿ ಟೂರ್ನಿಗಳ ಆರಂಭಕ್ಕೆ ಬಿಸಿಸಿಐ ದಿನಾಂಕ ನಿಗದಿ ಪಡಿಸಿದೆ. ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ದೇಶಿ ಟೂರ್ನಿಗಳು ಆರಂಭಗೊಳ್ಳಲಿದೆ. ರಾಹುಲ್ ದ್ರಾವಿಡ್ ನೇತೃತ್ವದ ಸಮಿತಿ ದೇಶಿ ಟೂರ್ನಿ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ನವೆಂಬರ್ 19 ರಿಂದ ಡಿಸೆಂಬರ್ 7 ವರೆಗೆ ಸಯ್ಯದ್ ಮುಷ್ತಾಕ್ ಆಲಿ ಟೂರ್ನಿ ನಡೆಯಲಿದೆ.
ಐಪಿಎಲ್‌ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್, ಪಂದ್ಯದ ಸಮಯ ಚೇಂಜ್...!
ರಣಜಿ ಟೂರ್ನಿ ಡಿಸೆಂಬರ್ 13 ರಿಂದ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಹೇಳಿದೆ. ಆದರೆ ದುಲೀಪ್ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿ ಟೂರ್ನಿ ನಡೆಯುವುದು ಅನುಮಾನವಾಗಿದೆ. ಸಿಕೆ ನಾಯ್ಡು ಸೇರಿದಂತೆ ಜ್ಯೂನಿಯರ್ ಕ್ರಿಕೆಟ್ ಟೂರ್ನಿ ಡಿಸೆಂಬರ್ 15 ರಿಂದ ಆರಂಭಗೊಳ್ಳಲಿದೆ. ರಣಜಿ ಟೂರ್ನಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಕೊರೋನಾ ವೈರಸ್ ಕಾರಣ ಪ್ರತಿ ಗುಂಪುಗಳು 2 ನಗರದ 2 ಮೈದಾನದಲ್ಲಿ ಪಂದ್ಯ ಆಡಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.