
ಹರ್ಯಾಣ(ಆ.08): ಕೊರೋನಾ ವೈರಸ್ ಕಾರಣ ಕ್ರಿಕೆಟಿಗರು ಮನೆಯಲ್ಲಿ ಬಂದಿಯಾಗಿದ್ದಾರೆ. ಇದರ ನಡುವೆ ಕೆಲ ಕ್ರಿಕೆಟಿಗರು ಆನ್‌ಲೈನ್ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಸುದೀರ್ಘ ದಿನಗಳ ಬಳಿಕ ಇದೀಗ ಕ್ರಿಕೆಟಿಗರು ಮೈದಾನದತ್ತ ಮುಖ ಮಾಡಿದ್ದಾರೆ. ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕೊರಿಯೋಗ್ರಾಫರ್, ಯುಟ್ಯೂಬರ್ ಹಾಗೂ ಡಾಕ್ಟರ್ ಆಗಿರುವ ಧನಶ್ರಿ ವರ್ಮಾ ಅವರಿಗೆ ಚಹಾಲ್ ಮನಸ್ಸು ನೀಡಿದ್ದಾರೆ. ನಾವು ಒಪ್ಪಿದೆವು, ಮನೆಯವರೂ ಒಪ್ಪಿದರು. ಇಂದು ಎಂಗೇಜ್ಮೆಂಟ್ ಸೆರಮನಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚಹಾಲ್ ಪೋಸ್ಟ್ ಮಾಡಿದ್ದಾರೆ. ವರ್ಮಾ ಜೊತೆಗಿನ ಎಂಗೇಜ್ಮೆಂಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಭಾರತದ ಪರ 52 ಏಕದಿನ ಹಾಗೂ 42 ಟಿ20 ಪಂದ್ಯ ಆಡಿರುವ ಚಹಾಲ್ ಪ್ರಮುಖ ಸ್ಪಿನ್ನರ್ ಆಗಿ ಬಡ್ತಿ ಪಡೆದಿದ್ದಾರೆ. ನಿಗದಿತ ಓವರ್ ಕ್ರಿಕೆಟ್‌ನ ಖಾಯಂ ಸ್ಪಿನ್ನರ್ ಚಹಾಲ್ ಏಕದಿನದಲ್ಲಿ 91 ವಿಕೆಟ್ ಹಾಗೂ ಟಿ20ಯಲ್ಲಿ 55 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 84 ಪಂದ್ಯದಿಂದ 100 ವಿಕೆಟ್ ಕಬಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.