ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ; ಮಹತ್ತರ ಬದಲಾವಣೆ!

By Suvarna NewsFirst Published Feb 20, 2021, 9:20 PM IST
Highlights

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್‌ಗೆ ಅವಕಾಶ ನೀಡಲಾಗಿದೆ. ಟಿ20 ಸರಣಿಗೆ ಆಯ್ಕೆಯಾದ ಟೀಂ ಇಂಡಿಯಾ ಆಟಗಾರರ ವಿವರ ಇಲ್ಲಿದೆ.
 

ಮುಂಬೈ(ಫೆ.20): ಇಂಗ್ಲೆಂಡ್ ವಿರುದ್ಧದ 5 ಟಿ20 ಸರಣಿಗೆ ಬಿಸಿಸಿಐ ಟೀಂ ಇಂಡಿಯಾ ಆಯ್ಕೆ ಮಾಡಿದೆ. 19 ಸದಸ್ಯರನ್ನೊಳಗೊಂಡ ತಂಡವನ್ನು ಬಿಸಿಸಿಐ ಪ್ರಕಟಸಿದೆ. ಇದೇ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್‌‍ಗೆ ಅವಕಾಶ ನೀಡಲಾಗಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಉಪನಾಯಕನಾಗಿದ್ದಾರೆ. ಇಬ್ಬರು ವಿಕೆಟೀ ಕೀಪರ್‌ಗೆ ಅವಕಾಶ ನೀಡಿದೆ. ರಿಷಬ್ ಪಂತ್ ಹಾಗೂ ಇಶಾನ್ ಕಿಶನ್‌ಗೆ ಅವಕಾಶ ನೀಡಲಾಗಿದೆ. ಕನ್ನಡಿಗ ಕೆಎಲ್ ರಾಹುಲ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಇಂಗ್ಲೆಂಡ್‌ ವಿರುದ್ದದ ಕೊನೆಯ 2 ಟೆಸ್ಟ್ ಪಂದ್ಯಗಳಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ..

ಇನ್ನು ರಾಹುಲ್ ಟಿವಾಟಿಯಾಗೂ ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ. ಇನ್ನು ವೇಗಿ ಭುವನೇಶ್ವರ್ ಕುಮಾರ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. 

 

Virat Kohli (Capt), Rohit Sharma (vc), KL Rahul, Shikhar Dhawan, Shreyas Iyer, Suryakumar Yadav, Hardik, Rishabh Pant (wk), Ishan Kishan (wk), Y Chahal, Varun Chakravarthy, Axar Patel, W Sundar, R Tewatia, T Natarajan, Bhuvneshwar Kumar, Deepak Chahar, Navdeep, Shardul Thakur. https://t.co/KkunRWtwE6

— BCCI (@BCCI)

ಬಿಸಿಸಿಐ ಪ್ರಕಟಿಸಿದ ಟಿ20 ತಂಡ ಇಲ್ಲಿದೆ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಇಶಾನ್ ಕಿಶನ್, ಯಜುವೇಂದ್ರ ಚಹಾಲ್, ವರುಣ್ ಚಕ್ರವರ್ತಿ, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ರಾಹುಲ್ ಟಿವಾಟಿಯ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್

ಮಾರ್ಚ್ 12 ರಿಂದ ಇಂಗ್ಲೆಂಡ್ ವಿರುದ್ಧ 5 ಟಿ20 ಸರಣಿ ಆರಂಭಗೊಳ್ಳಲಿದೆ. ಎಲ್ಲಾ ಪಂದ್ಯಗಳನ್ನು ಅಹಮ್ಮದಾಬಾದ್‌ನಲ್ಲಿ ಆಯೋಜಿಸಲಾಗಿದೆ.

click me!