ತವರಿನಲ್ಲಿ ನಡೆಯಲಿರುವ ಲಂಕಾ, ಕಿವೀಸ್, ಆಸೀಸ್‌ ಸರಣಿಯ ವೇಳಾಪಟ್ಟಿ ಪ್ರಕಟಿಸಿದ BCCI

By Naveena K VFirst Published Dec 8, 2022, 2:50 PM IST
Highlights

ತವರಿನ ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಜನವರಿಯಿಂದ ಮಾರ್ಚ್‌ವರೆಗೆ ಟೀಂ ಇಂಡಿಯಾಗೆ ಬಿಡುವಿರದಷ್ಟು ಸರಣಿ
ಲಂಕಾ, ಕಿವೀಸ್ ಎದುರು ಮೊದಲು ಸೀಮಿತ ಓವರ್‌ಗಳ ಸರಣಿ ಆಯೋಜನೆ

ಮುಂಬೈ(ಡಿ.08): ಹೊಸ ವರ್ಷವಾದ 2023ರನ್ನು ಭರ್ಜರಿಯಾಗಿಯೇ ಸ್ವಾಗತಿಸಲು ಬಿಸಿಸಿಐ ಸಜ್ಜಾಗಿದ್ದು, ತವರಿನಲ್ಲಿ ನಡೆಯಲಿರುವ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಜನವರಿ 03ರಿಂದ ಭಾರತದಲ್ಲಿ ತವರಿನ ಸರಣಿ ಆರಂಭವಾಗಲಿದ್ದು, ಮೊದಲಿಗೆ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ಎದುರು ಸೀಮಿತ ಓವರ್‌ಗಳ ಸರಣಿಯನ್ಣಾಡಲಿದ್ದು, ಇದಾದ ಬಳಿಕ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ದ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಿನಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

ಭಾರತ ತಂಡವು ಮುಂದಿನ ವರ್ಷಾರಂಭದಲ್ಲಿ ಶ್ರೀಲಂಕಾ ಎದುರು ಮೂರು ಪಂದ್ಯಗಳ ಟಿ20 ಸರಣಿಯನ್ನಾಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಾದ ಬಳಿಕ ಉಭಯ ತಂಡಗಳು 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. 3 ಪಂದ್ಯಗಳ ಟಿ20 ಸರಣಿಯು ಜನವರಿ 03, 05 ಹಾಗೂ 07ರಂದು ಕ್ರಮವಾಗಿ ಮುಂಬೈ, ಪುಣೆ ಹಾಗೂ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿಯು ಜನವರಿ 10, 12 ಹಾಗೂ 15ರಂದು ಕ್ರಮವಾಗಿ ಗುವಾಹಟಿ, ಕೋಲ್ಕತಾ ಮತ್ತು ತ್ರಿವೆಂಡ್ರಂನಲ್ಲಿ ನಡೆಯಲಿವೆ.

🚨 NEWS 🚨: BCCI announces schedule for Mastercard home series against Sri Lanka, New Zealand & Australia. | | | |

More Details 🔽https://t.co/gEpahJztn5

— BCCI (@BCCI)

ಲಂಕಾ ಎದುರಿನ ಸರಣಿ ಮುಕ್ತಾಯವಾಗುತ್ತಿದ್ದಂತೆಯೇ ಟೀಂ ಇಂಡಿಯಾ ಕೇವಲ 3 ದಿನಗಳ ಅಂತರದಲ್ಲಿ ನ್ಯೂಜಿಲೆಂಡ್ ಎದುರು ಸೀಮಿತ ಓವರ್‌ಗಳ ಸರಣಿಗೆ ಸಜ್ಜಾಗಲಿದೆ.  ನ್ಯೂಜಿಲೆಂಡ್ ಎದುರು ಕೂಡಾ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 18ರಂದು ಹೈದರಾಬಾದ್‌ನಲ್ಲಿ ನಡೆದರೆ, ಜನವರಿ 21, ಜನವರಿ 24ರಂದು ರಾಯಪುರ ಹಾಗೂ ಇಂಡೋರ್‌ನಲ್ಲಿ ಉಳಿದೆರಡು ಏಕದಿನ ಪಂದ್ಯಗಳು ನಡೆಯಲಿವೆ. ಇನ್ನು ಇದಾದ ಬಳಿಕ ಜನವರಿ 27, 29 ಹಾಗೂ ಫೆಬ್ರವರಿ 01ರಂದು ಮೂರನೇ ಟಿ20 ಪಂದ್ಯಗಳು ನಡೆಯಲಿದ್ದು, ರಾಂಚಿ, ಲಖನೌ ಹಾಗೂ ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದೆ.

ಬಾಂಗ್ಲಾದೇಶ ಎದುರು ಸಿಕ್ಸರ್ ಸುರಿಮಳೆ ಸುರಿಸಿ ಅಪರೂಪದ ದಾಖಲೆ ಬರೆದ ರೋಹಿತ್ ಶರ್ಮಾ..!

ಇನ್ನು ಇದಾದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯು ಆರಂಭವಾಗಲಿದ್ದು, ಇದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಪಾಲಿಗೆ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕೊನೆಯ ಸರಣಿಎನಿಸಿಕೊಳ್ಳಲಿದ್ದು, ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಫೆಬ್ರವರಿ 09ರಂದು ನಾಗ್ಪುರದಲ್ಲಿ ನಡೆದರೆ, ಫೆಬ್ರವರಿ 17ರಂದು ಎರಡನೇ ಟೆಸ್ಟ್‌ ಪಂದ್ಯ ಡೆಲ್ಲಿಯಲ್ಲಿ ಜರುಗಲಿದೆ. ಇದಾದ ಬಳಿಕ ಮಾರ್ಚ್‌ 01ರಿಂದ ಧರ್ಮಶಾಲಾದಲ್ಲಿ ಹಾಗೂ ಮಾರ್ಚ್‌ 09ರಿಂದ ನಾಲ್ಕನೇ ಟೆಸ್ಟ್‌ ಪಂದ್ಯ ಜರುಗಲಿದೆ.

ಇನ್ನು ಟೆಸ್ಟ್ ಸರಣಿ ಮುಕ್ತಾಯದ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಜರುಗಲಿದ್ದು, ಮಾರ್ಚ್‌ 17ರಂದು ನಾಗ್ಪುರ, ಮಾರ್ಚ್‌ 19ರಂದು ವೈಜಾಗ್ ಹಾಗೂ ಮಾರ್ಚ್‌ 22ರಂದು ಚೆನ್ನೈನಲ್ಲಿ ಜರುಗಲಿದೆ.

click me!