ದಿ ಹಂಡ್ರೆಡ್‌ ಟೂರ್ನಿ: ನಾರ್ಥರ್ನ್‌ ಸೂಪರ್‌ಚಾರ್ಜರ್ಸ್‌ ತಂಡಕ್ಕೆ ಡುಪ್ಲೆಸಿಸ್‌ ನಾಯಕ

By Suvarna NewsFirst Published Jul 3, 2021, 2:58 PM IST
Highlights

* ದಿ ಹಂಡ್ರೆಡ್‌ ಟೂರ್ನಿಯಲ್ಲಿ ನಾರ್ಥರ್ನ್‌ ಸೂಪರ್‌ಚಾರ್ಜರ್ಸ್‌ ತಂಡ ಮುನ್ನಡೆಸಲಿದ್ದಾರೆ ಫಾಫ್ ಡು ಪ್ಲೆಸಿಸ್‌

* ಆ್ಯರೋನ್ ಫಿಂಚ್ ಬದಲಿಗೆ ಡು ಪ್ಲೆಸಿಸ್‌ಗೆ ಒಲಿದ ನಾಯಕ ಪಟ್ಟ

* ಚೊಚ್ಚಲ ಆವೃತ್ತಿಯ 100 ಎಸೆತಗಳನ್ನೊಳಗೊಂಡ ದಿ ಹಂಡ್ರೆಡ್‌ ಟೂರ್ನಿ

ಲಂಡನ್(ಜು.03): ದಿ ಹಂಡ್ರೆಡ್‌ ಕ್ರಿಕೆಟ್ ಟೂರ್ನಿಯಲ್ಲಿ ಆ್ಯರೋನ್ ಫಿಂಚ್ ಬದಲಿಗೆ ದಕ್ಷಿಣ ಆಫ್ರಿಕಾ ಅನುಭವಿ ಬ್ಯಾಟ್ಸ್‌ಮನ್‌ ಫಾಫ್ ಡು ಪ್ಲೆಸಿಸ್ ನಾರ್ಥರ್ನ್‌ ಸೂಪರ್‌ಚಾರ್ಜರ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. 

ಚೊಚ್ಚಲ ಆವೃತ್ತಿಯ 100 ಎಸೆತಗಳನ್ನೊಳಗೊಂಡ ದಿ ಹಂಡ್ರೆಡ್‌ ಟೂರ್ನಿಯಿಂದ ಈಗಾಗಲೇ ಹಲವು ವಿದೇಶಿ ಕ್ರಿಕೆಟಿಗರು ನಾನಾ ಕಾರಣಗಳಿಂದ ಹಿಂದೆ ಸರಿದಿದ್ದಾರೆ. ಕೆಲವು ಕ್ರಿಕೆಟಿಗರು ಕೋವಿಡ್ ಭೀತಿಯಿಂದ ಹಿಂದೆ ಸರಿದಿದ್ದರೆ, ಮತ್ತೆ ಕೆಲವು ಕ್ರಿಕೆಟಿಗರು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಚೊಚ್ಚಲ ಆವೃತ್ತಿಯ ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಆ್ಯರೋನ್ ಫಿಂಚ್ ಸದ್ಯ ವೆಸ್ಟ್ ಇಂಡೀಸ್‌ ವಿರುದ್ದ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲು ಸಿದ್ದತೆ ನಡೆಸುತ್ತಿರುವುದರಿಂದ ನಾರ್ಥರ್ನ್‌ ಸೂಪರ್‌ಚಾರ್ಜರ್ಸ್‌ ಮಾಲೀಕರು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್‌ಗೆ ನಾಯಕತ್ವ ಪಟ್ಟ ಕಟ್ಟಿದ್ದಾರೆ. ಬೆನ್ ಸ್ಟೋಕ್ಸ್, ಕ್ರಿಸ್ ಲಿನ್‌, ಆದಿಲ್ ರಶೀದ್ ಅವರನ್ನೊಳಗೊಂಡ ನಾರ್ಥರ್ನ್‌ ಸೂಪರ್‌ಚಾರ್ಜರ್ಸ್‌ ತಂಡವನ್ನು ಡು ಪ್ಲೆಸಿಸ್‌ ಮುನ್ನಡೆಸಲಿದ್ದಾರೆ.

'ದ ಹಂಡ್ರೆಡ್‌' ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದ ಕೇನ್‌ ವಿಲಿಯಮ್ಸನ್‌

ಚೊಚ್ಚಲ ಆವೃತ್ತಿಯಲ್ಲೇ ನಾರ್ಥರ್ನ್‌ ಸೂಪರ್‌ಚಾರ್ಜರ್ಸ್‌ ತಂಡವನ್ನು ಮುನ್ನಡೆಸುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಬೆನ್‌ ಸ್ಟೋಕ್ಸ್, ಆದಿಲ್ ರಶೀದ್‌, ಕ್ರಿಸ್‌ ಲಿನ್ ಹಾಗೂ ಯುವ ಪ್ರತಿಭಾನ್ವಿತ ಅಟಗಾರರನ್ನೊಳಗೊಂಡ ತಂಡದೊಂದಿಗೆ ಆಡಲು ನಾನು ಉತ್ಸುಕನಾಗಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ದಿ ಹಂಡ್ರೆಡ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತುದಿಗಾಲಿನಲ್ಲಿ ನಿಂತಿದ್ದೇನೆ ಎಂದು ಫಾಫ್ ಡು ಪ್ಲೆಸಿಸ್‌ ಹೇಳಿದ್ದಾರೆ.

ಕಳೆದ ವರ್ಷವೇ ಆರಂಭವಾಗಬೇಕಿದ್ದ ಚೊಚ್ಚಲ ಆವೃತ್ತಿಯ ದಿ ಹಂಡ್ರೆಡ್‌ ಟೂರ್ನಿಯು ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಜುಲೈ 21ರಿಂದ ದಿ ಹಂಡ್ರೆಡ್ ಟೂರ್ನಿಯು ಆರಂಭವಾಗಲಿದ್ದು ಆಗಸ್ಟ್ 21ರವರೆಗೆ ನಡೆಯಲಿದೆ.

click me!