
ಮುಂಬೈ(ಏ.16): ಭಾರತ ಪರ ಎಲ್ಲಾ ಮೂರು ಮಾದರಿಯಲ್ಲಿ ಆಡುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಜಸ್‌ಪ್ರೀತ್ ಬುಮ್ರಾ, ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ‘ಎ+’ ದರ್ಜೆಯಲ್ಲಿ ಮುಂದುವರಿದಿದ್ದಾರೆ. ಅಕ್ಟೋಬರ್ 2020ರಿಂದ ಸೆಪ್ಟೆಂಬರ್ 2021ರ ವರೆಗಿನ ಅವಧಿಗೆ ಗುತ್ತಿಗೆ ನವೀಕರಿಸಿ ಗುರುವಾರ(ಏ.16) ಬಿಸಿಸಿಐ ಪಟ್ಟಿ ಪ್ರಕಟಿಸಿತು.
‘ಎ’ ದರ್ಜೆಯಲ್ಲಿ 10, ‘ಬಿ’ ದರ್ಜೆಯಲ್ಲಿ 5 ಹಾಗೂ ‘ಸಿ’ ದರ್ಜೆಯಲ್ಲಿ 10 ಆಟಗಾರರಿದ್ದಾರೆ. ಕರ್ನಾಟಕದ ಕೆ.ಎಲ್.ರಾಹುಲ್ ‘ಎ’ ದರ್ಜೆಯಲ್ಲಿದ್ದರೆ, ಮಯಾಂಕ್ ಅಗರ್‌ವಾಲ್ ‘ಬಿ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ. ‘ಎ+’ ದರ್ಜೆಗೆ ವಾರ್ಷಿಕ 7 ಕೋಟಿ ರುಪಾಯಿ, ‘ಎ’ ದರ್ಜೆಗೆ ವಾರ್ಷಿಕ 5 ಕೋಟಿ ರುಪಾಯಿ, ‘ಬಿ’ ದರ್ಜೆಗೆ ವಾರ್ಷಿಕ 3 ಕೋಟಿ ರುಪಾಯಿ ಹಾಗೂ ‘ಸಿ’ ದರ್ಜೆಗೆ ವಾರ್ಷಿಕ 1 ಕೋಟಿ ರುಪಾಯಿ ವೇತನ ಸಿಗಲಿದೆ. ಇನ್ನು ಕರ್ನಾಟಕದ ಮತ್ತೋರ್ವ ಆಟಗಾರ ಮನೀಶ್ ಪಾಂಡೆ ಹಾಗೂ ಕೇದಾರ್ ಜಾಧವ್ ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ.
ವಿರಾಟ್ ಕೊಹ್ಲಿಗೆ ಒಲಿದ ವಿಸ್ಡನ್ ದಶಕದ ಕ್ರಿಕೆಟಿಗ ಗೌರವ!
‘ಎ+’: ಕೊಹ್ಲಿ, ರೋಹಿತ್, ಬುಮ್ರಾ.
‘ಎ’: ಅಶ್ವಿನ್, ಜಡೇಜಾ, ಪೂಜಾರ, ರಹಾನೆ, ಧವನ್, ರಾಹುಲ್, ಶಮಿ, ಇಶಾಂತ್, ಪಂತ್, ಹಾರ್ದಿಕ್.
‘ಬಿ’: ಸಾಹ, ಉಮೇಶ್ ಯಾದವ್, ಭುವನೇಶ್ವರ್, ಶಾರ್ದೂಲ್, ಮಯಾಂಕ್.
‘ಸಿ’: ಕುಲ್ದೀಪ್, ಸೈನಿ, ದೀಪಕ್ ಚಹರ್, ಗಿಲ್, ವಿಹಾರಿ, ಅಕ್ಷರ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್, ಚಹಲ್, ಸಿರಾಜ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.