IPL 2021 ಬಲಿಷ್ಠ ಪಂಜಾಬ್‌ ಕಿಂಗ್ಸ್‌ಗಿಂದು ಚೆನ್ನೈ ಸೂಪರ್‌ ಕಿಂಗ್ಸ್‌ ಸವಾಲು

By Suvarna NewsFirst Published Apr 16, 2021, 9:19 AM IST
Highlights

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 8ನೇ ಪಂದ್ಯದಲ್ಲಿಂದು ಪಂಜಾಬ್‌ ಕಿಂಗ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಂಬೈನ ವಾಂಖೇಡೆ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮುಂಬೈ(ಏ.16): ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹೊಡೆತಕ್ಕೆ ನಲುಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌, ಶುಕ್ರವಾರ ಇಲ್ಲಿ ನಡೆಯಲಿರುವ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಸುಧಾರಿತ ಬೌಲಿಂಗ್‌ ಪ್ರದರ್ಶನ ತೋರುವ ಗುರಿ ಹೊಂದಿದೆ. ಆದರೆ, ಪಂಜಾಬ್‌ನ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ನಿಯಂತ್ರಿಸಲು ಚೆನ್ನೈ ಯಾವ್ಯಾವ ಅಸ್ತ್ರಗಳನ್ನು ಬಳಸಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಇನ್ನು ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿದ್ದ ಪಂಜಾಬ್‌, ಸತತ 2ನೇ ಗೆಲುವಿನ ವಿಶ್ವಾಸದಲ್ಲಿದೆ. ಡೆಲ್ಲಿ ವಿರುದ್ಧ ಆರಂಭಿಕರಾದ ಋುತುರಾಜ್‌ ಹಾಗೂ ಡು ಪ್ಲೆಸಿ ವೈಫಲ್ಯ ಕಂಡರೂ, ಚೆನ್ನೈ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ಆದರೆ ಬೌಲಿಂಗ್‌ನಲ್ಲಿ ತಂಡ ಸಂಪೂರ್ಣ ವೈಫಲ್ಯ ಕಂಡಿತ್ತು. ದೀಪಕ್‌ ಚಹರ್‌, ಶಾರ್ದೂಲ್‌ ಠಾಕೂರ್‌, ಸ್ಯಾಮ್‌ ಕರ್ರನ್‌, ಜಡೇಜಾ, ಮೋಯಿನ್‌ ಅಲಿ ಎಲ್ಲರೂ ದುಬಾರಿಯಾಗಿದ್ದರು.

ಮಿಲ್ಲರ್, ಮೊರಿಸ್ ಅಬ್ಬರಕ್ಕೆ ಪಂತ್ ಸೈನ್ಯ ಪಂಚರ್; ರಾಜಸ್ಥಾನಕ್ಕೆ ಮೊದಲ ಗೆಲುವು!

ಮತ್ತೊಂದೆಡೆ ಪಂಜಾಬ್‌ ಸಹ ಮೊದಲ ಪಂದ್ಯದಲ್ಲಿ ಸಾಧಾರಣ ಬೌಲಿಂಗ್‌ ಪ್ರದರ್ಶನ ತೋರಿತ್ತು. ಅಶ್‌ರ್‍ದೀಪ್‌ ಹಾಗೂ ಶಮಿ ಹೊರತುಪಡಿಸಿ ಉಳಿದ ಬೌಲರ್‌ಗಳು ದುಬಾರಿಯಾಗಿದ್ದರು. ಅದರಲ್ಲೂ ಒಟ್ಟು 22 ಕೋಟಿ ನೀಡಿ ಖರೀದಿಸಿರುವ ಆಸ್ಪ್ರೇಲಿಯಾದ ರಿಚರ್ಡ್‌ಸನ್‌ ಹಾಗೂ ಮೆರೆಡಿತ್‌ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಪಂಜಾಬ್‌ ತನ್ನ ಬ್ಯಾಟಿಂಗ್‌ನಷ್ಟೇ ಬೌಲಿಂಗ್‌ ಪ್ರದರ್ಶನದ ಕಡೆಗೂ ಗಮನ ನೀಡಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಪಂಜಾಬ್‌: ಕೆ.ಎಲ್‌.ರಾಹುಲ್‌(ನಾಯಕ), ಮಯಾಂಕ್‌ ಅಗರ್‌ವಾಲ್‌, ಕ್ರಿಸ್‌ ಗೇಲ್‌, ದೀಪಕ್‌ ಹೂಡಾ, ನಿಕೋಲಸ್‌ ಪೂರನ್‌, ಶಾರುಖ್‌ ಖಾನ್‌, ಜಾಯಿ ರಿಚರ್ಡ್‌ಸನ್‌, ಎಂ.ಅಶ್ವಿನ್‌, ಮೊಹಮದ್‌ ಶಮಿ, ರಿಲೇ ಮೆರೆಡಿತ್‌, ಅಶ್‌ರ್‍ದೀಪ್‌ ಸಿಂಗ್‌.

ಚೆನ್ನೈ: ಋುತುರಾಜ್‌ ಗಾಯಕ್ವಾಡ್‌, ಫಾಫ್‌ ಡು ಪ್ಲೆಸಿ, ಮೋಯಿನ್‌ ಅಲಿ, ಸುರೇಶ್‌ ರೈನಾ, ಅಂಬಟಿ ರಾಯುಡು, ಎಂ.ಎಸ್‌.ಧೋನಿ(ನಾಯಕ), ರವೀಂದ್ರ ಜಡೇಜಾ, ಸ್ಯಾಮ್‌ ಕರ್ರನ್‌, ಡ್ವೇನ್‌ ಬ್ರಾವೋ, ಶಾರ್ದೂಲ್‌ ಠಾಕೂರ್‌, ದೀಪಕ್‌ ಚಹರ್‌.

ಸ್ಥಳ: ಮುಂಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

click me!