ICC U 19 World Cup 2022 : ಭಾರತ ತಂಡಕ್ಕೆ ಯಶ್ ಧುಲ್ ನಾಯಕ, ಕರ್ನಾಟಕದ ಅನೀಶ್ವರ್ ಆಯ್ಕೆ

Suvarna News   | Asianet News
Published : Dec 19, 2021, 08:10 PM IST
ICC U 19 World Cup 2022 : ಭಾರತ ತಂಡಕ್ಕೆ ಯಶ್ ಧುಲ್ ನಾಯಕ, ಕರ್ನಾಟಕದ ಅನೀಶ್ವರ್ ಆಯ್ಕೆ

ಸಾರಾಂಶ

2022ರ ಜನವರಿಯಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟೂರ್ನಿ 2018ರಲ್ಲಿ ಕೊನೆಯ ಬಾರಿಗೆ ಭಾರತ ಚಾಂಪಿಯನ್ ಆಗಿತ್ತು 17 ಸದಸ್ಯರ ತಂಡದಲ್ಲಿ ಕರ್ನಾಟಕದ ಅನೀಶ್ವರ್ ಗೌತಮ್ ಗೆ ಸ್ಥಾನ

ಮುಂಬೈ (ಡಿ.19): ಮುಂದಿನ ವರ್ಷದ ಜನವರಿಯಲ್ಲಿ ಆರಂಭವಾಗಲಿರುವ ಐಸಿಸಿ 19 ವಯೋಮಿತಿ ವಿಶ್ವಕಪ್ ಟೂರ್ನಿಗೆ (ICC U 19 World Cup 2022) ಭಾರತ (India) ತಂಡವನ್ನು ಪ್ರಕಟಿಸಲಾಗಿದ್ದು, ದೆಹಲಿ 17 ವರ್ಷದ ಹುಡುಗ ಯಶ್ ಧುಲ್ ರನ್ನು (Yash Dhull) ತಂಡದ ನಾಯಕರನ್ನಾಗಿ ಬಿಸಿಸಿಐನ (BCCI) ಜೂನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿ ಪ್ರಕಟಿಸಿದೆ. ವೆಸ್ಟ್ ಇಂಡೀಸ್ (West Indies)ಆತಿಥ್ಯದಲ್ಲಿ ಜನವರಿ 14 ರಿಂದ ಫೆಬ್ರವರಿ 5ರವರೆಗೆ ಟೂರ್ನಿ ನಡೆಯಲಿದೆ. ಆಂಧ್ರದ ಎಸ್ ಕೆ ರಶೀದ್ (SK Rasheed) ತಂಡದ ಉಪನಾಯಕರಾಗಿ ಇರಲಿದ್ದಾರೆ. ಅನೀಶ್ವರ್ ಗೌತಮ್ ತಂಡದಲ್ಲಿರುವ ಏಕೈಕ ಕನ್ನಡಿಗ.

ನಾಲ್ಕು ಬಾರಿಯ ಚಾಂಪಿಯನ್ ಆಗಿರುವ ಭಾರತ ತಂಡ ಜನವರಿ 15 ರಂದು ದಕ್ಷಿಣ ಆಫ್ರಿಕಾ (South Africa ) ವಿರುದ್ಧ ಗಯಾನಾದಲ್ಲಿ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಆ ಬಳಿಕ ಜನವರಿ 19 ಹಾಗೂ 22 ರಂದು ಕ್ರಮವಾಗಿ ಐರ್ಲೆಂಡ್  ( Ireland)ಹಾಗೂ ಉಗಾಂಡ (Ugand) ತಂಡವನ್ನು ಟ್ರೆನಿಡಾಡ್ ಹಾಗೂ ಟೊಬಾಗೋನಲ್ಲಿ ಎದುರಿಸಲಿದೆ. ಕೆರಿಬಿಯನ್ ನ ನಾಲ್ಕು ದೇಶಗಳಲ್ಲಿ 48 ಪಂದ್ಯಗಳು ನಡೆಯಲಿದ್ದು, ಒಟ್ಟಾರೆ 16 ತಂಡಗಳು ಭಾಗವಹಿಸಲಿದೆ. ತಲಾ ನಾಲ್ಕು ತಂಡಗಳ ನಾಲ್ಕು ಗುಂಪುಗಳನ್ನಾಗಿ ವಿಭಾಗ ಮಾಡಲಾಗಿದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ ಲೀಗ್ ಹಂತಕ್ಕೆ ಏರಲಿದೆ. ಸೂಪರ್ ಲೀಗ್ ಹಂತದಿಂದ ಚಾಂಪಿಯನ್ ತಂಡಗಳು ನಿರ್ಣಯವಾಗಲಿದೆ. ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳು ಪ್ಲೇಟ್ ಪ್ಲೇ ಆಫ್ ನಲ್ಲಿ ಆಡಲಿದೆ.

19 ವಯೋಮಿತಿ ವಿಶ್ವಕಪ್ ನಲ್ಲಿ ಭಾರತ ಮೊಟ್ಟಮೊದಲ ಬಾರಿಗೆ 2000 ಇಸವಿಯಲ್ಲಿ ಮೊಹಮದ್ ಕೈಫ್ ನೇತೃತ್ವದಲ್ಲಿ ಚಾಂಪಿಯನ್ ಆಗಿದ್ದರೆ, 2008ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ತಂಡ ಪ್ರಶಸ್ತಿ ಜಯಿಸಿತ್ತು. 2012ರಲ್ಲಿ ಉನ್ಮುಕ್ತ್ ಚಾಂದ್ ಹಾಗೂ 2018ರಲ್ಲಿ ಪೃಥ್ವಿ ಷಾ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದರು.
 


2020ರಲ್ಲಿ ಭಾರತ ತಂಡ ಪ್ರಿಯಂ ಗಾರ್ಗ್ ನೇತೃತ್ವದಲ್ಲಿ ಫೈನಲ್ ಸಾಧನೆ ಮಾಡಿದ್ದರೂ, ಪ್ರಶಸ್ತಿ ಹೋರಾಟದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿತ್ತು. ಯುವ ಪ್ರತಿಭೆಗಳ ಪಾಲಿಗೆ ಚಿಮ್ಮುಹಲಗೆ ಎನಿಸಿರುವ 19 ವಯೋಮಿತಿ ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ  ಇಬ್ಬರು ವಿಕೆಟ್ ಕೀಪರ್ ಗಳನ್ನು ಆಯ್ಕೆ ಮಾಡಲಾಗಿದ್ದು ಹರಿಯಾಣದ ದಿನೇಶ್ ಬಾನಾ ಹಾಗೂ ಉತ್ತರ ಪ್ರದೇಶದ ಆರಾಧ್ಯ ಯಾದವ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Under 19 World Cup: ವೇಳಾಪಟ್ಟಿ ಪ್ರಕಟ, ಭಾರತಕ್ಕೆ 'ಬಿ' ಗುಂಪಿನಲ್ಲಿ ಸ್ಥಾನ
ಕರ್ನಾಟಕದ ಅನೀಶ್ವರ್ ಗೌತಮ್‌ ಆಯ್ಕೆ

17 ಸದಸ್ಯರ ತಂಡದಲ್ಲಿ ಕರ್ನಾಟಕದ ಅನೀಶ್ವರ್ ಗೌತಮ್ (Aneeshwar Gautam) ಆಯ್ಕೆಯಾಗಿದ್ದಾರೆ. ಕ್ರಿಕೆಟ್ ಕೋಚ್ ಇರ್ಫಾನ್ ಸೇಠ್ ಅವರ ಮಾಡರ್ನ್ ಕ್ರಿಕೆಟ್ ಕ್ಲಬ್ ನ ಆಟಗಾರನಾಗಿರುವ ಅನೀಶ್ವರ್, ಎಡಗೈ ಆಫ್ ಸ್ಪಿನ್ ಬೌಲರ್ ಹಾಗೂ ಬ್ಯಾಟ್ಸ್ ಮನ್. ಕೆಎಸ್ ಸಿಎ ಲೀಗ್ ಕ್ರಿಕೆಟ್ ನಲ್ಲಿ ಸಾಕಷ್ಟು ಬಾರಿ ಶತಕ, ಅರ್ಧಶತಕ ಬಾರಿಸಿದ ಬ್ಯಾಟ್ಸ್ ಮನ್ ಆಗಿದ್ದಾರೆ.

19 ವಯೋಮಿತಿ ವಿಶ್ವಕಪ್ ಗೆ ಭಾರತ ತಂಡ: ಯಶ್ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗ್ ಕ್ರಿಶ್ ರಘುವಂಶಿ, ಎಸ್ ಕೆ ರಶೀದ್ (ಉಪನಾಯಕ), ನಿಶಾಂತ್ ಸಿಂಧು, ಸಿದ್ಧಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ (ವಿಕೆಟ್ ಕೀಪರ್), ಆರಾಧ್ಯ ಯಾದವ್ (ವಿಕೆಟ್ ಕೀಪರ್), ರಾಜ್ ಅಂಗದ್ ಬಾವಾ, ಮಾನವ್ ಪಾರಖ್, ಕೌಶಾಲ್ ತಂಬೆ, ಆರ್ ಎಸ್ ಹಂಗರ್ಗೇಕರ್, ವಾಸು ವತ್ಸ್, ವಿಕ್ಕಿ ಓತ್ಸ್ವಾಲ್, ರವಿಕುಮಾರ್, ಗರ್ವ್ ಸಂಗ್ವಾನ್. ಮೀಸಲು ಆಟಗಾರರು: ರಿಶಿತ್ ರೆಡ್ಡಿ, ಉದಯ್ ಸಹಾರನ್, ಅನ್ಶ್ ಗೋಸಾಯಿ, ಅಮಿತ್ ರಾಜ್ ಉಪಾಧ್ಯಾಯ್, ಪಿಎಂ ಸಿಂಗ್ ರಾಥೋಡ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?