
ಢಾಕಾ(ನ.20) : ರಾಷ್ಟ್ರೀಯ ಕ್ರಿಕೆಟ್ ಲೀಗ್‌ನಲ್ಲಿ ಸಹ ಆಟಗಾರನ ಮೇಲೆ ಹಲ್ಲೆ ನಡೆಸಿದ ಬಾಂಗ್ಲಾದೇಶ ಮಾಜಿ ವೇಗಿ ಶಹಾದತ್ ಹುಸೇನ್‌ಗೆ 5 ವರ್ಷ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಆದರೆ ನಿಷೇಧ ಅವಧಿಯ ಕೊನೆ 2 ವರ್ಷಗಳನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಮಾನತುಗೊಳಿಸಿದೆ.
ಇದನ್ನೂ ಓದಿ: ಕೊಹ್ಲಿ ವಿಕೆಟ್ ಕಬಳಿಸಿ ಕನಸು ನನಸು ಮಾಡಿಕೊಂಡೆ; ಅಬು ಜಾಯೆದ್!
ಚೆಂಡಿನ ಹೊಳಪಿನ ಬಗ್ಗೆ ನಡೆದ ಜಗಳದಲ್ಲಿ ಸಹ ಆಟಗಾರ ಅರಾಫತ್ ಸನ್ನಿಗೆ ಹುಸೇನ್ ಹೊಡೆದಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಾಂಗ್ಲಾ ಕ್ರಿಕೆಟ್ ಮಂಡಳಿ, ಶಹಾದತ್ ಮೇಲೆ ನಿಷೇಧ ಹೇರಿದೆ. ಜತೆಗೆ 3 ಲಕ್ಷ ಟಾಕಾ (.2.5 ಲಕ್ಷ) ದಂಡ ವಿಧಿಸಿದೆ.
ಇದನ್ನೂ ಓದಿ:ಭಾರತದ ದಾಳಿಗೆ ಬಾಂಗ್ಲಾ ಖಲ್ಲಾಸ್; ಮೂರೇ ದಿನಕ್ಕೆ ಪಂದ್ಯ ಕ್ಲೋಸ್!
ಶಹಾದತ್ ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. 2015ರಲ್ಲಿ 11 ವರ್ಷದ ಮನೆಕೆಲಸದ ಹುಡುಗಿಗೆ ಕಿರುಕುಳ ನೀಡಿದ್ದ ಆರೋಪ ಎದುರಿಸಿದ್ದರು. 2018ರಲ್ಲಿ ತನ್ನ ಕಾರಿಗೆ ಡಿಕ್ಕಿ ಹೊಡೆದ ಆಟೋರಿಕ್ಷಾ ಚಾಲಕನಿಗೆ ಥಳಿಸಿ ಸುದ್ದಿಯಾಗಿದ್ದರು. ಹುಸೇನ್ ಬಾಂಗ್ಲಾ ಪರ 38 ಟೆಸ್ಟ್, 51 ಏಕದಿನ, 6 ಟಿ20 ಪಂದ್ಯಗಳನ್ನಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.