ಇಂಗ್ಲೆಂಡ್ ಎದುರಿನ ಎರಡು ಹಾಗೂ ಮೂರನೇ ಟೆಸ್ಟ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಕರಾಚಿ: ತವರಿನಲ್ಲಿ ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 500+ ರನ್ ಬಾರಿಸಿದ ಹೊರತಾಗಿಯೂ ಇನ್ನಿಂಗ್ಸ್ ಅಂತರದ ಸೋಲು ಕಂಡ ಪಾಕಿಸ್ತಾನ ತಂಡದಲ್ಲೀಗ ಮೇಜರ್ ಸರ್ಜರಿ ಮಾಡಲಾಗಿದೆ. ಇದೀಗ ಇಂಗ್ಲೆಂಡ್ ಎದುರಿನ ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು, ತಂಡದ ಸ್ಟಾರ್ ಆಟಗಾರರಾದ ಬಾಬರ್ ಅಜಂ, ಶಾಹೀನ್ ಅಫ್ರಿದಿ ಹಾಗೂ ನಸೀಂ ಶಾಗೆ ಗೇಟ್ ಪಾಸ್ ನೀಡುವ ಮೂಲಕ ಪಿಸಿಬಿ ಆಯ್ಕೆ ಸಮಿತಿ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.
ಬಾಬರ್ ಅಜಂ ಕಳೆದ ಕೆಲ ತಿಂಗಳುಗಳಿಂದ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ದಯನೀಯ ರನ್ ಬರ ಎದುರಿಸುತ್ತಾ ಬಂದಿದ್ದಾರೆ. ಅದರಲ್ಲೂ ಇಂಗ್ಲೆಂಡ್ ಎದುರಿನ ಬ್ಯಾಟಿಂಗ್ ಸ್ನೇಹಿ ಮುಲ್ತಾನ್ ಟೆಸ್ಟ್‌ನಲ್ಲೂ ಬಾಬರ್ ಅಜಂ ರನ್ ಬಾರಿಸಲು ಪರದಾಡಿದ್ದರು. ಮುಲ್ತಾನ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 30 ರನ್ ಗಳಿಸಿದ್ದ ಬಾಬರ್ ಅಜಂ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.
undefined
ಇಂದು ಆಸೀಸ್ ಎದುರು ಗೆದ್ದರೂ, ಸೋತರೂ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕಿದೆ ಸೆಮೀಸ್‌ಗೇರಲು ಒಳ್ಳೆ ಚಾನ್ಸ್!
🚨 Pakistan name squad for second and third Tests against England 🚨 | pic.twitter.com/EHS9m84TXK
— Pakistan Cricket (@TheRealPCB)ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೊಸ ಆಯ್ಕೆ ಸಮಿತಿಯನ್ನು ರಚಿಸಿತ್ತು. ಐಸಿಸಿ ಮಾಜಿ ಅಂಪೈರ್ ಆಲೀಮ್ ದಾರ್, ಆಕೀಬ್ ಜಾವೆದ್ ಹಾಗೂ ಅಝರ್ ಅಲಿ ಅವರನ್ನೊಳಗೊಂಡ ಪಿಸಿಬಿ ಆಯ್ಕೆ ಸಮಿತಿ, ಇಂಗ್ಲೆಂಡ್ ಎದುರಿನ ಉಳಿದೆರಡು ಟೆಸ್ಟ್ ಪಂದ್ಯಕ್ಕೆ ಮೂರು ಸ್ಟಾರ್ ಆಟಗಾರರನ್ನು ಕೈಬಿಟ್ಟು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.
ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಉಳಿದೆರಡು ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡುವ ಮುನ್ನ ಬಾಬರ್ ಅಜಂ ಪರ ಪಾಕ್ ಟೆಸ್ಟ್ ನಾಯಕ ಶಾನ್ ಮಸೂದ್ ಬ್ಯಾಟ್ ಬೀಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ತಂಡ ಪ್ರಕಟವಾಗಿದ್ದನ್ನು ಗಮನಿಸಿದಾಗ ಹೊಸ ಆಯ್ಕೆ ಸಮಿತಿ ಪಾಕ್ ನಾಯಕನ ಮಾತಿಗೆ ಸೊಪ್ಪು ಹಾಕಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್: ಟೀಂ ಇಂಡಿಯಾ ಪರ ಎರಡನೇ ಅತಿವೇಗದ ಶತಕ ಸಿಡಿಸಿದ ಸಂಜು ಸ್ಯಾಮ್ಸನ್!
ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಅಕ್ಟೋಬರ್ 15ರಿಂದ ಮತ್ತೊಮ್ಮೆ ಮುಲ್ತಾನ್‌ನಲ್ಲಿಯೇ ನಡೆಯಲಿದೆ. ಇನ್ನು ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಅಕ್ಟೋಬರ್ 24ರಿಂದ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ.
ಪಾಕಿಸ್ತಾನ ಕ್ರಿಕೆಟ್ ತಂಡ ಹೀಗಿದೆ ನೋಡಿ:
ಶಾನ್ ಮಸೂದ್(ನಾಯಕ) ಸೌದ್ ಶಕೀಲ್(ಉಪ ನಾಯಕ), ಅಮೀರ್ ಜಮಾಲ್, ಅಬ್ದುಲ್ ಶಫೀಕ್, ಹಸೀಬುಲ್ಲಾ(ವಿಕೆಟ್ ಕೀಪರ್), ಕಮ್ರಾನ್ ಗುಲಾಮ್, ಮೆಹ್ರಾನ್ ಮುಮ್ತಾಜ್, ಮೀರ್ ಹಮ್ಜಾ, ಮೊಹಮ್ಮದ್ ಅಲಿ, ಮೊಹಮದ್ ಹುರೈರಾ, ಮೊಹಮದ್ ರಿಜ್ವಾಜ್(ವಿಕೆಟ್ ಕೀಪರ್), ನೋಮನ್ ಅಲಿ, ಸೈಮ್ ಆಯುಬ್.