Latest Videos

ಈತ ಕ್ಯಾಪ್ಟನ್ ಅಲ್ಲ, ಆಟಗಾರನಾಗಿ ಕೂಡಾ ತಂಡದಲ್ಲಿರಲು ಯೋಗ್ಯನಲ್ಲ: ಅಚ್ಚರಿ ಹೇಳಿಕೆ ಕೊಟ್ಟ ಸೆಹ್ವಾಗ್..!

By Naveen KodaseFirst Published Jun 18, 2024, 3:12 PM IST
Highlights

ಈ ಬಾರಿಯ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ ತಂಡವು ಗ್ರೂಪ್‌ ಹಂತದಲ್ಲಿ ಸತತ ಎರಡು ಸೋಲಿನ ಬಳಿಕ ಕೆನಡಾ ಹಾಗೂ ಐರ್ಲೆಂಡ್ ಎದುರು ಗೆಲುವು ದಾಖಲಿಸಲಷ್ಟೇ ಶಕ್ತವಾಯಿತು. ಈ ಮೂಲಕ 5 ತಂಡಗಳ 'ಎ' ಗುಂಪಿನಲ್ಲಿ 4 ಅಂಕಗಳ ಸಹಿತ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ನವದೆಹಲಿ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಗ್ರೂಪ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿದೆ. 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಪಾಕಿಸ್ತಾನ ತಂಡವು, ಆತಿಥೇಯ ಯುಎಸ್‌ಎ ಹಾಗೂ ಭಾರತ ಎದುರು ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ. ಇನ್ನು ಪಾಕ್ ತಂಡದ ನಾಯಕ ಬಾಬರ್ ಅಜಂ ಕಳಪೆ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಈ ಬಾರಿಯ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಪಾಕಿಸ್ತಾನ ತಂಡವು ಗ್ರೂಪ್‌ ಹಂತದಲ್ಲಿ ಸತತ ಎರಡು ಸೋಲಿನ ಬಳಿಕ ಕೆನಡಾ ಹಾಗೂ ಐರ್ಲೆಂಡ್ ಎದುರು ಗೆಲುವು ದಾಖಲಿಸಲಷ್ಟೇ ಶಕ್ತವಾಯಿತು. ಈ ಮೂಲಕ 5 ತಂಡಗಳ 'ಎ' ಗುಂಪಿನಲ್ಲಿ 4 ಅಂಕಗಳ ಸಹಿತ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

T20 World Cup 2024: ಟ್ರೋಫಿ ರೇಸ್‌ನಲ್ಲಿ 8 ತಂಡಗಳಷ್ಟೇ ಬಾಕಿ..!

ಇನ್ನು ಪಾಕಿಸ್ತಾನ ನಾಯಕ ಬಾಬರ್ ಅಜಂ, ಬ್ಯಾಟಿಂಗ್‌ನಲ್ಲೂ ಮಿಂಚಲು ವಿಫಲವಾಗಿದ್ದರು. ಗ್ರೂಪ್ ಹಂತದಲ್ಲಿ ಬಾಬರ್ ಅಜಂ 101.66ರ ಸ್ಟ್ರೈಕ್‌ರೇಟ್‌ನಲ್ಲಿ ಕೇವಲ 122 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಪಾಕ್ ನಾಯಕ ಬಾಬರ್ ಅಜಂ ಬಗ್ಗೆ ಅಸಮಾಧಾನ ಹೊರಹಾಕಿರುವ ವಿರೇಂದ್ರ ಸೆಹ್ವಾಗ್, ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಬಾಬರ್ ಅಜಂ ಮೇಲೆ ಕ್ರಮ ಕೈಗೊಳ್ಳುತ್ತದೆಯೆಂದರೆ, ನನ್ನ ಪ್ರಕಾರ ಆತನನ್ನು ನಾಯಕತ್ವದಿಂದ ಕೆಳಗಿಳಿಸುವುದು ಮಾತ್ರವಲ್ಲದೇ, ಆತನಿಗೆ ಟಿ20 ತಂಡದ ಆಯ್ಕೆಗೂ ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗ್ರೂಪ್ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನ ತಂಡದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್‌..!

"ನಾಯಕನಾಗಿ ಒಬ್ಬನನ್ನು ಆಯ್ಕೆ ಮಾಡಬೇಕು ಎಂದರೆ ಅದರಿಂದ ತಂಡಕ್ಕೆ ಆತನಿಂದ ಉಪಯೋಗವಾಗುತ್ತಿದೆಯೇ ಎನ್ನುವುದನ್ನು ಮೊದಲು ಆಲೋಚಿಸಬೇಕು. ಒಂದು ವೇಳೆ ಆತ ಸೂಕ್ತವಲ್ಲ ಎಂದಾದರೇ, ಆತನಿಗೆ ಹಿಂಬಡ್ತಿ ನೀಡಿ ಆತನ ಬದಲಿಗೆ ದೊಡ್ಡ ಹೊಡೆತ ಬಾರಿಸುವ ಬೇರೆ ಆಟಗಾರನನ್ನು ಕಣಕ್ಕಿಳಿಸಿದರೆ ತಂಡಕ್ಕೆ 50-60 ರನ್ ಕೊಡುಗೆ ಸಿಗಲಿದೆ. ನಾನು ಹೇಳುವುದು ಕಠಿಣ ಎನಿಸಬಹುದು. ಒಂದು ವೇಳೆ ನಾಯಕನಾಗಿ ಬಾಬರ್ ಅಜಂ ಅವರನ್ನು ಕೆಳಗಿಳಿಸಿದರೆ, ನನ್ನ ಪ್ರಕಾರ ಆತ ಟಿ20 ತಂಡದಲ್ಲಿರಲು ಯೋಗ್ಯನಲ್ಲ. ಆತನ ಪ್ರದರ್ಶನ ಈಗಿನ ಟಿ20 ಕ್ರಿಕೆಟ್‌ಗೆ ಹೊಂದಿಕೆಯಾಗುವಂತಿಲ್ಲ" ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

click me!