Glenn Maxwell wedding invitation ಚೆನ್ನೈ ಮೂಲದ ಯುವತಿಯ ಜತೆ ಮ್ಯಾಕ್ಸ್‌ವೆಲ್ ಮದುವೆ ಡೇಟ್ ಫಿಕ್ಸ್..!

Suvarna News   | Asianet News
Published : Feb 14, 2022, 12:07 PM IST
Glenn Maxwell wedding invitation ಚೆನ್ನೈ ಮೂಲದ ಯುವತಿಯ ಜತೆ ಮ್ಯಾಕ್ಸ್‌ವೆಲ್ ಮದುವೆ ಡೇಟ್ ಫಿಕ್ಸ್..!

ಸಾರಾಂಶ

* ಗ್ಲೆನ್‌ ಮ್ಯಾಕ್ಸ್‌ವೆಲ್‌-ವಿನಿ ರಾಮನ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್ * ತಮಿಳಿನಲ್ಲಿರುವ ಮದುವೆ ಆಮಂತ್ರಣ ಪತ್ರ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್‌  * ಹಿಂದೂ ಸಂಪ್ರದಾಯದಂತೆ ಮಾರ್ಚ್‌ 27ರಂದು ಮೆಲ್ಬರ್ನ್‌ನಲ್ಲಿ ಮದುವೆಯಾಗಲಿದ್ದಾರೆ

ಮೆಲ್ಬರ್ನ್(ಫೆ.14)‌: ಆಸ್ಪ್ರೇಲಿಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell) ಚೆನ್ನೈನ ಬ್ರಾಹ್ಮಣ ಹುಡುಗಿ ಮಿನಿ ರಾಮನ್‌ (Vini Raman) ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದು, ತಮಿಳಿನಲ್ಲಿರುವ ಮದುವೆ ಆಮಂತ್ರಣ ಪತ್ರ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್‌ ಆಗಿದೆ. 2 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅವರು ಹಿಂದೂ ಸಂಪ್ರದಾಯದಂತೆ ಮಾರ್ಚ್‌ 27ರಂದು ಮೆಲ್ಬರ್ನ್‌ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. 

ವಿನಿ ರಾಮನ್‌ ಔಷಧ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಾರ್ಚ್‌ 27ರಿಂದಲೇ 2022ನೇ ಸಾಲಿನ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಆರಂಭವಾಗುವ ಸಾಧ್ಯತೆ ಇದ್ದು, ಆರಂಭಿಕ ಕೆಲ ಪಂದ್ಯಗಳಿಗೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಗೈರಾಗಬಹುದು ಎನ್ನಲಾಗಿದೆ. ಗ್ಲೆನ್‌ ಮ್ಯಾಕ್ಸ್‌ವೆಲ್ 2021ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡದ ಅಮೋಘ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು.

ಇದರ ಬೆನ್ನಲ್ಲೇ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿಗೂ (IPL Mega Auction) ಮುನ್ನ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ರೀಟೈನ್ ಮಾಡಿಕೊಂಡಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಜತೆಗೆ ವಿರಾಟ್ ಕೊಹ್ಲಿ (Virat Kohli) ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಸಹಾ ಆರ್‌ಸಿಬಿ ರೀಟೈನ್‌ ಮಾಡಿಕೊಂಡಿದೆ. 

ಟಿ20: ಲಂಕಾ ವಿರುದ್ಧ ಆಸೀಸ್‌ಗೆ ಸೂಪರ್‌ ಜಯ

ಸಿಡ್ನಿ: ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಆಸ್ಪ್ರೇಲಿಯಾ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 6 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿತು.

IPL Auction 2022 ಬ್ಯಾಲೆನ್ಸ್ ತಂಡ ಕಟ್ಟಿದ್ದ ಸಿಎಸ್‌ಕೆ, ಹೀಗಿದೆ ಹರಾಜಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಟೀಮ್!

ಜೋಸ್‌ ಇಂಗ್ಲಿಸ್‌ 48 ರನ್‌ ಗಳಿಸಿದರು. ಗುರಿ ಬೆನ್ನತ್ತಿದ ಲಂಕಾ 8 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿತು. ಕೊನೆ ಓವರಲ್ಲಿ 19 ರನ್‌ ಬೇಕಿದ್ದಾಗ ಲಂಕಾ 18 ರನ್‌ ಸಿಡಿಸಿ ಪಂದ್ಯ ಟೈ ಮಾಡಿತು. ಬಳಿಕ ಸೂಪರ್‌ ಓವರ್‌ನಲ್ಲಿ ಲಂಕಾ 1 ವಿಕೆಟ್‌ಗೆ 5 ರನ್‌ ಗಳಿಸಿದರೆ, ಆಸೀಸ್‌ 3 ಎಸೆತಗಳಲ್ಲಿ ಗುರಿ ತಲುಪಿತು. 3ನೇ ಪಂದ್ಯ ಮಂಗಳವಾರ ನಡೆಯಲಿದೆ.

ಲಂಕಾ ಟಿ20 ಲೀಗ್‌ನಲ್ಲಿ ಫಿಕ್ಸಿಂಗ್‌ ಯತ್ನ: ತನಿಖೆ

ಕೊಲಂಬೊ: ಇತ್ತೀಚೆಗೆ ಮುಕ್ತಾಯಗೊಂಡ ಲಂಕಾ ಪ್ರೀಮಿಯರ್‌ ಲೀಗ್‌(ಎಲ್‌ಪಿಎಲ್‌) ಟಿ20 ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಪ್ರಯತ್ನ ನಡೆದಿತ್ತು ಎಂಬ ಆರೋಪದ ಬಗ್ಗೆ ಕ್ರೀಡಾ ಸಚಿವಾಲಯದ ಭ್ರಷ್ಟಾಚಾರ ನಿಗ್ರಹ ಘಟಕ ತನಿಖೆ ಆರಂಭಿಸಿದೆ. 

ಘಟಕದ ಮುಖ್ಯಸ್ಥ ಜಗತ್‌ ಫೊನ್ಸೆಕಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಫಿಕ್ಸಿಂಗ್‌ಗಾಗಿ ತಮಗೆ ಬೇಡಿಕೆ ಇದ್ದ ಬಗ್ಗೆ ರಾಷ್ಟ್ರೀಯ ತಂಡದ ಬ್ಯಾಟರ್‌ ಒಬ್ಬರು ದೂರು ನೀಡಿದ್ದಾರೆ. ಉದ್ಯಮಿಯ ಮಗ ಹಾಗೂ ಆತನ ಸ್ನೇಹಿತ ಭೇಟಿ ಮಾಡಿ ಫಿಕ್ಸಿಂಗ್‌ ಮಾಡಲು ಬೇಡಿಕೆ ಇರಿಸಿದ ಬಗ್ಗೆ ದೂರು ಸ್ವೀಕರಿಸಿದ್ದೇವೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ’ ಎಂದಿದ್ದಾರೆ. 2ನೇ ಆವೃತ್ತಿಯ ಎಲ್‌ಪಿಎಲ್‌ ಕಳೆದ ಡಿಸೆಂಬರ್‌ನಲ್ಲಿ ನಡೆದಿತ್ತು.

ರಣಜಿ: ಕರ್ನಾಟಕ ತಂಡಕ್ಕೆ ಪ್ರಸಿದ್ಧ್, ಕರುಣ್‌ ಅಲಭ್ಯ

ಬೆಂಗಳೂರು: ರಣಜಿ ಟ್ರೋಫಿ (Ranji Trophy) ಕ್ರಿಕೆಟ್‌ ಟೂರ್ನಿಯ ಆಟಗಾರರ ಪಟ್ಟಿಯಲ್ಲಿ ಕರ್ನಾಟಕ ತಂಡ 2 ಬದಲಾವಣೆಗಳನ್ನು ಮಾಡಿದೆ. ವೇಗದ ಬೌಲರ್‌ ಪ್ರಸಿದ್ಧ್ ಕೃಷ್ಣ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದು, ವಿದ್ವತ್‌ ಕಾವೇರಪ್ಪ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.  

ಬ್ಯಾಟರ್‌ ಕರುಣ್‌ ನಾಯರ್‌ಗೆ (Karun Nair) ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಅವರು ತಂಡದಿಂದ ಹೊರಬಿದ್ದಿದ್ದಾರೆ. ರಾಜ್ಯ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಗುಂಪು ಹಂತದ ಪಂದ್ಯಗಳನ್ನು ಚೆನ್ನೈನಲ್ಲಿ ಆಡಲಿದೆ. ಮೊದಲ ಪಂದ್ಯವು ಫೆಬ್ರವರಿ 17ರಿಂದ ರೈಲ್ವೇಸ್‌ ವಿರುದ್ಧ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!
ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!