ಆಸ್ಟ್ರೇಲಿಯನ್ ಕ್ರಿಕೆಟರ್ (Australian cricketer) ಡೇವಿಡ್ ವಾರ್ನರ್ ಮೈಕ್ ಹಿಂಭಾಗಕ್ಕೆ ಇರಿಸಿ ಜೋರಾಗಿ ಸದ್ದು ಮಾಡುತ್ತಾ ಗಾಳಿ ಬಿಟ್ಟ ವೀಡಿಯೋವೊಂದು ಈಗ ಸಖತ್ ವೈರಲ್ ಆಗಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಇದಕ್ಕೆ ನೋಡುಗರು ಕೂಡ ಅಷ್ಟೇ ಸ್ವಾರಸ್ಯವಾಗಿ ಕಾಮೆಂಟ್ ಮಾಡಿದ್ದಾರೆ.
ಮಾನವ ದೇಹ ಎಂದ ಮೇಲೆ ಕಾಯಿಲೆಗಳು ಸಹಜ. ಅಪನವಾಯು ಅಥವಾ ಸಾಮಾನ್ಯವಾಗಿ ಹೂಸು ದೇಹದಲ್ಲಿ ಉತ್ಪತ್ತಿಯಾಗುವ ಗ್ಯಾಸ್ ಅಥವಾ ವಾಯುವನ್ನು ಹೊರ ಹಾಕುವ ವಿಧಾನ. ಗ್ಯಾಸ್ಟಿಕ್ ಸಮಸ್ಯೆ ಇರುವವರಿಗೆ ಸಹಜವಾಗಿಯೇ ಬಾಯಿಯಿಂದ ತೇಗು ಹಿಂಭಾಗದಿಂದ ಹೂಸು ಬರುವುದು. ಆದರೆ ಹೀಗೆ ಸದ್ದು ಮಾಡುತ್ತಾ ಹೂಸು ಬರುವಾಗ ಮುಜುಗರಕ್ಕೊಳಗಾಗುವರೇ ಹೆಚ್ಚು. ಇಂತಹ ಹೂಸಿನ ಬಗ್ಗೆ ಅನೇಕ ಸಾಹಿತಿಗಳು ಕವಿಗಳು ಹಾಸ್ಯಮಯವಾಗಿ ಬರೆದಿದ್ದಾರೆ.
ಇದೇ ವಿಚಾರದ ಬಗ್ಗೆ ಸ್ನೇಹಿತರ ಜೊತೆ ಚರ್ಚಿಸುತ್ತಿದ್ದಾಗ, ದೇವರು ಮನುಷ್ಯನಿಗೆ ಉಚಿತವಾಗಿ ಕೊಟ್ಟ ಪೀಪಿ ಈ ಹೂಸು ಎಂದು ಶಾಲೆಯಲ್ಲಿ ಪಾಠ ಮಾಡುತ್ತಾ ಶಿಕ್ಷಕರೊಬ್ಬರು ಈ ಹೂಸಿನ ಬಗ್ಗೆ ಹೇಳಿ ಇಡೀ ತರಗತಿಯನ್ನು ನಗೆಗಡಲಲ್ಲಿ ತೇಲಿಸಿದ್ದರಂತೆ. ಅದೇನೇ ಇರಲಿ ಜೋರಾಗಿ ಸದ್ದು ಮಾಡುತ್ತಾ ಈ ಹೂಸು ಬಂದರೆ ಸಹಜವಾಗಿ ಮುಜುಗರ ಆಗಿಯೇ ಆಗುತ್ತದೆ. ಏಕೆಂದರೆ ಇದು ಸಹಜ ಎಂದು ಬಹುತೇಕರಿಗೆ ಅನಿಸುವುದೇ ಇಲ್ಲ. ಹೀಗಿರುವಾಗ ಆಸ್ಟ್ರೇಲಿಯನ್ ಕ್ರಿಕೆಟರ್ (Australian cricketer) ಡೇವಿಡ್ ವಾರ್ನರ್ ಮೈಕ್ ಹಿಂಭಾಗಕ್ಕೆ ಇರಿಸಿ ಜೋರಾಗಿ ಸದ್ದು ಮಾಡುತ್ತಾ ಗಾಳಿ ಬಿಟ್ಟ ವೀಡಿಯೋವೊಂದು ಈಗ ಸಖತ್ ವೈರಲ್ ಆಗಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಇದಕ್ಕೆ ನೋಡುಗರು ಕೂಡ ಅಷ್ಟೇ ಸ್ವಾರಸ್ಯವಾಗಿ ಕಾಮೆಂಟ್ ಮಾಡಿದ್ದಾರೆ.
undefined
ಬ್ಯೂಟಿ ಆಫ್ ಕ್ರಿಕೆಟ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ (Instagram Page) ಈ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಇದು ಐಪಿಎಲ್ ಪಂದ್ಯಾವಳಿ ವೇಳೆ ನಡೆದ ಒಂದು ತಮಾಷೆಯ ಕ್ಷಣವಾಗಿದೆ. ಈ ಡೇವಿಡ್ ವಾರ್ನರ್ ಮೈಕ್ ಹಿಡಿದು ನಿಂತಿದ್ದು, ಅವರ ಪಕ್ಕದಲ್ಲೇ ಇನ್ನೋರ್ವ ಕ್ರಿಕೆಟಿಗರಿದ್ದಾರೆ. ಬಹುಶಃ ವಾರ್ನರ್ ಸನ್‌ರೈಸರ್ ಹೈದರಾಬಾದ್ (Sunrise Hyderabad)ತಂಡವನ್ನು ಪ್ರತಿನಿಧಿಸುತ್ತಿದ್ದ ವೇಳೆಯ ದೃಶ್ಯ ಇದಾಗಿದ್ದು, ಮೈದಾನದಲ್ಲಿ ಮೈಕ್ ಹಿಡಿದು ನಿಂತಿದ್ದ ವಾರ್ನರ್‌ಗೆ ಹೂಸು ಬಂದಿದ್ದು, ವಾರ್ನರ್ ಸ್ವಲ್ಪವೂ ಮುಜುಗರಕ್ಕೀಡಾಗದೇ ಮೈಕ್ ಕೈಯಲ್ಲಿದ್ದ ಮೈಕ್ (Mike) ಅನ್ನು ಹಿಂಭಾಗಕ್ಕೆ ಹಿಡಿದು ಮೈಕ್‌ನಲ್ಲೇ ಗಾಳಿ ಬಿಟ್ಟಿದ್ದು ಮೈಕ್‌ನಿಂದಾಗಿ ಈ ಸದ್ದು ಮತ್ತಷ್ಟು ಜೋರಾಗಿಯೇ ಕೇಳಿ ಬಂದಿದೆ. ಈ ವೇಳೆ ವಾರ್ನರ್ ಹಾಗೂ ಸುತ್ತಲಿದ್ದವರು ಜೋರಾಗಿ ನಗುವುದನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ.
ನೋಡಲು ವಿಚಿತ್ರ ಅನಿಸೋ ಈ ಓರಿ ನೋಡಿದ್ರೆ ಬಾಲಿವುಡ್ ಮಂದಿ ಹಿಂಗ್ಯಾಕೆ ಆಡ್ತಾರೆ? ಡ್ರಗ್ ಪೆಡ್ಲರ್ ಅಂತನಾ?
ಈ ವೀಡಿಯೋ ಶೇರ್ ಮಾಡಿದ 'ಬ್ಯೂಟಿ ಆಫ್ ಕ್ರಿಕೆಟ್' ಎಂಬ ಇನ್ಸ್ಟಾಗ್ರಾಮ್ ಪೇಜ್ ಇದು ಲೈವ್‌ನಲ್ಲೇ ಹೂಸು ಬಿಟ್ಟ ಮೊದಲ ಕ್ರಿಕೆಟಿಗ ಡೇವಿಡ್ ವಾರ್ನರ್ ಎಂದು ಬಿರುದು ನೀಡಿದೆ. ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರ ಕಾಮೆಂಟ್ ಮಾತ್ರ ಒಂದಕ್ಕಿಂತ ಒಂದು ಹಾಸ್ಯಮಯವಾಗಿದ್ದು, ನಕ್ಕು ನಗಿಸುತ್ತಿದೆ. ವೀಡಿಯೋ ನೋಡಿದ ಒಬ್ಬರು ಏಕೆ ಮೈಕ್ ಮೂಲಕ ವಾರ್ನರ್ ಹೂಸು ಬಿಟ್ಟಿದ್ದು ಎಂದು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬರು ಬಹುಶಃ ಡೇವಿಡ್ ವಾರ್ನರ್ ಮೈಕ್ ಟೆಸ್ಟ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ವಾರ್ನರ್ ಹೂಸು ಬಿಡುವುದು ಎಂದು ಕಲೆ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹೂಸು ಬಿಟ್ಟ ನಂತರ ಮೈಕ್ ಅನ್ನು ವಾರ್ನರ್ ಬಳಿ ಮೂಸಲು ಹೇಳಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಡೇವಿಡ್ ವಾರ್ನರ್ ಮೈಕ್ ಟೆಸ್ಟ್ ಚೆನ್ನಾಗಿ ಮಾಡಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋವೊಂದು ಎಲ್ಲರನ್ನು ನಕ್ಕು ನಗಿಸುವಂತೆ ಮಾಡುತ್ತಿದೆ.
ಅಂದಹಾಗೆ ಹೂಸು ದೇಹದಲ್ಲಿ ಉತ್ಪತ್ತಿಯಾಗುವ ಗ್ಯಾಸ್‌ನ್ನು ಹೊರ ಹಾಕು ಸಹಜ ಪ್ರಕ್ರಿಯೆಯಾಗಿದ್ದು, ಆದರೆ ಸದ್ದಿಲ್ಲದೇ ಬರುವ ಗಾಳಿಗಿಂತ ಸದ್ದು ಮಾಡುತ್ತಾ ಬರುವ ಗಾಳಿ ಒಳ್ಳೆಯದಂತೆ..!