ಪಾಕಿಸ್ತಾನದಲ್ಲೂ ಕೊರೋನಾ ಅಟ್ಟಹಾಸ ಆರಂಭವಾಗಿದೆ. ಹೀಗಾಗಿ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯನ್ನು ಕ್ರಿಸ್ ಲಿನ್ ಅರ್ಧಕ್ಕೆ ಬಿಟ್ಟು ತವರಿಗೆ ಮರಳಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಲಾಹೋರ್(ಮಾ.17): ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದ ಆಸ್ಪ್ರೇಲಿಯಾದ ಅಗ್ರ ಕ್ರಮಾಂಕ ಆಟಗಾರ ಕ್ರಿಸ್ ಲಿನ್, ಕೊರೋನಾ ಭೀತಿ ಹಿನ್ನೆಲೆಯಲ್ಲಿ ತವರಿಗೆ ತೆರಳಿದ್ದಾರೆ.
ರೋಹಿತ್ ಅನುಪಸ್ಥಿತಿಯಲ್ಲಿ ಈ ನಾಲ್ವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಬಹುದು
undefined
ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಲಾಹೋರ್ ಖಲಂದರ್ ತಂಡವನ್ನು ಪ್ರತಿನಿಧಿಸುತ್ತಿದ್ದ ಲಿನ್, ಮುಲ್ತಾನ್ ಸುಲ್ತಾನ್ಸ್ ವಿರುದ್ಧ ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ಮೂಲಕ ಲಾಹೋರ್ ತಂಡ ಪಿಎಸ್‌ಎಲ್ ಇತಿಹಾಸದಲ್ಲಿ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದೀಗ ಕೋವಿಡ್ 19 ಸೋಂಕು ಪಾಕಿಸ್ತಾನದ 53 ಮಂದಿಯಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಟೂರ್ನಿಯನ್ನು ಅರ್ಧಕ್ಕೆ ಬಿಟ್ಟು ತವರಿಗೆ ಮರಳಿದ್ದಾರೆ.
ಇಲ್ಲಿಯನಕ ಪಿಎಸ್ಎಲ್ ಟೂರ್ನಿಯನ್ನು ಚೆನ್ನಾಗಿಯೇ ಆನಂದಿಸಿದ್ದೇನೆ. ಆದರೆ ಪರಿಸ್ಥಿತಿ ಬಿಗಡಾಯಿಸುತ್ತಿರುವುದರಿಂದ ನಾನು ತವರಿಗೆ ಮರಳುತ್ತಿದ್ದೇನೆ. ಬದುಕಿಗಿಂತ ಕ್ರಿಕೆಟ್ ದೊಡ್ಡದಲ್ಲ ಎನ್ನುವುದನ್ನು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಲಾಹೋರ್ ಖಲಂದರ್ ತಂಡವು ನಾನಿಲ್ಲದೆಯೂ ಮುನ್ನುಗ್ಗು ವಿಶ್ವಾಸ ನನಗಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಲಿನ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ ಮೂರು ವರ್ಷದ ಮಗುವಿಗೂ ಕೊರೋನಾ ಶಂಕೆ : ಆಸ್ಪತ್ರೆಗೆ ದಾಖಲು
29 ವರ್ಷದ ಲಿನ್ 8 ಪಂದ್ಯಗಳಲ್ಲಿ ಒಂದು ಶತಕ ಹಾಗೂ 1 ಅರ್ಧಶತಕ ಸಹಿತ 284 ರನ್ ಬಾರಿಸಿದ್ದರು. ಇದೀಗ ಮಾರ್ಚ್ 17ರಂದು ಲಾಹೋರ್‌ನ ಗಢಾಫಿ ಮೈದಾನದಲ್ಲಿ ಕರಾಚಿ ಕಿಂಗ್ಸ್ ತಂಡದ ವಿರುದ್ಧ ಸೆಣಸಲಿದೆ.
ಇನ್ನು ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಕ್ರಿಸ್ ಲಿನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿದೆ. ಮಾರ್ಚ್ 29ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ಭೀತಿಯಿಂದಾಗಿ ಇದೀಗ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ.