ಕಮೆಂಟ್ರಿಯಿಂದ ಗೇಟ್‌ಪಾಸ್: ಕೊನೆಗೂ ತುಟಿಬಿಚ್ಚಿದ ಮಂಜ್ರೇಕರ್..!

By Kannadaprabha NewsFirst Published Mar 16, 2020, 1:17 PM IST
Highlights

ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಸಂಜಯ್ ಮಂಜ್ರೇಕರ್‌ಗೆ ಬಿಸಿಸಿಐ ವೀಕ್ಷಕ ವಿವರಣೆಯಿಂದ ಗೇಟ್‌ಪಾಸ್ ನೀಡಿದೆ. ಈ ಬಗ್ಗೆ ಮಂಜ್ರೇಕರ್ ತುಟಿಬಿಚ್ಚಿದ್ದಾರೆ. ಏನಂದ್ರು ಸಂಜಯ್ ಎನ್ನೋದನ್ನು ನೀವೇ ನೋಡಿ.. 

ನವದೆಹಲಿ(ಮಾ.16): ಬಿಸಿಸಿಐ ವೀಕ್ಷಕ ವಿವರಣೆಗಾರರ ತಂಡದಿಂದ ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಸಂಜಯ್‌ ಮಂಜ್ರೇಕರ್‌ ಬೇಸರ ವ್ಯಕ್ತಪಡಿಸಿದ್ದಾರೆ. ವೀಕ್ಷಕ ವಿವರಣೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟಎಂದು ಭಾವಿಸಿದ್ದೆ ಎಂದು ಮಂಜ್ರೇಕರ್‌ ಹೇಳಿದ್ದಾರೆ. 

ವೀಕ್ಷಕ ವಿವರಣೆಗಾರ ಮಂಜ್ರೇಕರ್‌ಗೆ ಬಿಸಿಸಿಐ ಗೇಟ್‌ಪಾಸ್.!

‘ವೀಕ್ಷಕ ವಿವರಣೆ ಮಾಡಲು ನಾನು ಅರ್ಹ ಎಂದು ಎಂದೂ ಭಾವಿಸಿರಲಿಲ್ಲ. ನನಗೆ ಸಿಕ್ಕ ಅದೃಷ್ಟಎಂದೇ ತಿಳಿದಿದ್ದೆ. ಇತ್ತೀಚಿನ ದಿನಗಳಲ್ಲಿ ನನ್ನ ಕಾರ್ಯ ವೈಖರಿ ಬಗ್ಗೆ ಬಿಸಿಸಿಐಗೆ ಸಮಾಧಾನವಿರಲಿಲ್ಲ ಎನಿಸುತ್ತದೆ. ಒಬ್ಬ ವೃತ್ತಿಪರನಾಗಿ ಕ್ರಿಕೆಟ್‌ ಮಂಡಳಿಯ ನಿರ್ಧಾರವನ್ನು ಗೌರವಿಸುತ್ತೇನೆ’ ಎಂದು ಮಂಜ್ರೇಕರ್‌ ಟ್ವೀಟ್‌ ಮಾಡಿದ್ದಾರೆ. 

I have always considered commentary as a great privilege, but never an entitlement. It is up to my employers whether they choose to have me or not & I will always respect that. Maybe BCCI has not been happy with my performance of late. I accept that as a professional.

— Sanjay Manjrekar (@sanjaymanjrekar)

ಕಮೆಂಟರಿ ಬದಲು ಸಲಹೆ ನೀಡಲು ಹೋದ ಮಂಜ್ರೇಕರ್‌ಗೆ ಮಂಗಳಾರತಿ!

ಕಳೆದ ವರ್ಷ ವಿಶ್ವಕಪ್‌ ವೇಳೆ ರವೀಂದ್ರ ಜಡೇಜಾ ವಿರುದ್ಧ ನೀಡಿದ್ದ ಹೇಳಿಕೆ, ಬಾಂಗ್ಲಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್‌ ವೇಳೆ ಸಹ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಜತೆಗಿನ ವಾದದಿಂದಾಗಿ ಸಂಜಯ್‌ ವಿವಾದ ಸೃಷ್ಟಿಸಿದ್ದರು.

click me!