2 ಪಿಂಕ್‌ ಬಾಲ್‌ ಟೆಸ್ಟ್‌ಗೆ ಕ್ರಿಕೆಟ್‌ ಆಸ್ಪ್ರೇ​ಲಿ​ಯಾ ಮನ​ವಿ!

Published : Dec 07, 2019, 10:21 AM IST
2 ಪಿಂಕ್‌ ಬಾಲ್‌ ಟೆಸ್ಟ್‌ಗೆ ಕ್ರಿಕೆಟ್‌ ಆಸ್ಪ್ರೇ​ಲಿ​ಯಾ ಮನ​ವಿ!

ಸಾರಾಂಶ

 ಭಾರತದಲ್ಲಿ ನಡೆದ ಚೊಚ್ಚಲ ಡೇ ಅಂಡ್ ನೈಟ್ ಟೆಸ್ಟ್ ಯಶಸ್ವಿಯಾದ ಬೆನ್ನಲ್ಲೇ ಆಸೀಸ್ ಈ ಬಗ್ಗೆ ಹೊಸ ಆಲೋಚನೆ ಮಾಡಿದೆ. ಆದರೆ ದಾದಾ ನೀಡಿದ ಹೇಳಿಕೆ ಆಸೀಸ್ ಕನಸು ಕಮರುವಂತೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಮೆಲ್ಬನ್‌(ಡಿ.07): ಅತಿ​ಹೆಚ್ಚು ಹಗ​ಲು​-ರಾತ್ರಿ ಟೆಸ್ಟ್‌ ಪಂದ್ಯ​ಗ​ಳನ್ನು ಆಡಿ​ರುವ ಆಸ್ಪ್ರೇ​ಲಿಯಾ ತಂಡ, 2021ರಲ್ಲಿ ಭಾರತ ತಂಡ ಆಸ್ಪ್ರೇ​ಲಿಯಾ ಪ್ರವಾಸ ಕೈಗೊಂಡಾಗ 2 ಪಿಂಕ್‌ ಬಾಲ್‌ ಪಂದ್ಯ​ಗ​ಳನ್ನು ಆಡು​ವಂತೆ ಮನವಿ ಮಾಡಲು ಸಜ್ಜಾ​ಗಿದೆ. ಮುಂದಿನ ತಿಂಗಳು ಆಸ್ಪ್ರೇ​ಲಿಯಾ ತಂಡ ಭಾರ​ತಕ್ಕೆ ಆಗ​ಮಿ​ಸಿದ್ದು, ಈ ವೇಳೆ ಅಧ್ಯಕ್ಷ ಎಲ್‌ರ್‍ ಎಡ್ಡಿಂಗ್ಸ್‌ ನೇತೃ​ತ್ವದ ಕ್ರಿಕೆಟ್‌ ಆಸ್ಪ್ರೇ​ಲಿ​ಯಾ ನಿಯೋಗ, ಬಿಸಿ​ಸಿಐ ಜತೆ ಚರ್ಚೆ ನಡೆ​ಸ​ಲಿದೆ ಎನ್ನ​ಲಾ​ಗಿದೆ.

ಭಾರತದ ಪ್ರತಿ ಸರ​ಣಿ​ಯಲ್ಲೂ ಹಗ​ಲು-ರಾತ್ರಿ ಟೆಸ್ಟ್‌?

‘ಭಾ​ರತ ತಂಡ ಇತ್ತೀ​ಚೆಗೆ ಹಗ​ಲು-ರಾತ್ರಿ ಟೆಸ್ಟ್‌ ಆಡಿದ್ದು ಸಂತ​ಸದ ವಿಚಾರ. 2021ರಲ್ಲಿ ತಂಡ ಆಸ್ಪ್ರೇ​ಲಿ​ಯಾ ಪ್ರವಾಸ ಕೈಗೊಂಡಾಗ ಒಂದು ಇಲ್ಲವೇ ಎರಡು ಪಿಂಕ್‌ ಬಾಲ್‌ ಪಂದ್ಯ​ಗ​ಳನ್ನು ಆಡಲು ಒಪ್ಪಿ​ಕೊ​ಳ್ಳ​ಲಿದೆ ಎನ್ನುವ ನಂಬಿಕೆ ಇದೆ’ ಎಂದು ಎಡ್ಡಿಂಗ್ಸ್‌ ಪ್ರತಿ​ಷ್ಠಿತ ವೆಬ್‌ಸೈಟ್‌ವೊಂದಕ್ಕೆ ನೀಡಿ​ರುವ ಸಂದ​ರ್ಶ​ನ​ದಲ್ಲಿ ತಿಳಿ​ಸಿ​ದ್ದಾರೆ.

2 ಪಂದ್ಯ ಆಡು​ವು​ದು ಕಷ್ಟ: ಸೌರವ್‌ ಗಂಗೂಲಿ

ಎಡ್ಡಿಂಗ್ಸ್‌ ನೇತೃ​ತ್ವದ ಕ್ರಿಕೆಟ್‌ ಆಸ್ಪ್ರೇ​ಲಿಯಾ ನಿಯೋಗ ತಮ್ಮನ್ನು ಭೇಟಿ​ಯಾ​ಗಿ ಮನವಿ ಸಲ್ಲಿ​ಸಲಿದೆ ಎನ್ನುವುದರ ಬಗ್ಗೆ ಪ್ರತಿ​ಕ್ರಿಯಿಸಿ​ರುವ ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ‘ನನ್ನನ್ನು ಯಾರೂ ಈ ವರೆಗೂ ಸಂಪರ್ಕಿ​ಸಿಲ್ಲ. ಸರ​ಣಿ​ಯಲ್ಲಿ ನಾಲ್ಕು ಪಂದ್ಯ​ಗಳ ಪೈಕಿ ಎರ​ಡು ಪಂದ್ಯ​ಗ​ಳನ್ನು ಹಗ​ಲು-ರಾತ್ರಿ ಮಾದ​ರಿ​ಯಲ್ಲಿ ಆಡು​ವುದು ಕಷ್ಟ. ಟೆಸ್ಟ್‌ ಕ್ರಿಕೆಟ್‌ ಉಳಿ​ಸಲು ಪಿಂಕ್‌ ಬಾಲ್‌ ಪಂದ್ಯ ಅಗತ್ಯ. ಹಾಗಂತ ಅತಿ​ಯಾಗಿ ಮಾಡುವುದು ಸರಿ​ಯಲ್ಲ. ಪ್ರತಿ ಸರ​ಣಿ​ಯಲ್ಲಿ ಒಂದು ಪಂದ್ಯ​ವನ್ನು ಹಗ​ಲು-ರಾತ್ರಿ ಮಾದ​ರಿ​ಯಲ್ಲಿ ಆಯೋ​ಜಿ​ಸು​ವುದು ಸೂಕ್ತ’ ಎಂದಿ​ದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?