
ಬೆಂಗಳೂರು(ಡಿ.07): ಕರ್ನಾಟಕ ತಂಡದ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಶುಕ್ರವಾರ ತಮ್ಮ ಬಹುದಿನಗಳ ಗೆಳತಿ ಅರ್ಚನಾ ಸುಂದತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರು ಪಾಲ್ಗೊಂಡಿದ್ದರು.
ಇತ್ತೀಚೆಗೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ ಶಿವಮೊಗ್ಗ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್‌ನ ಗೌತಮ್ ಅಜೇಯ 134 ರನ್ ಹಾಗೂ 15 ರನ್‌ಗಳಿಗೆ 8 ವಿಕೆಟ್ ಕಿತ್ತು ಟಿ20 ಇತಿಹಾಸದಲ್ಲೇ ವಿಶೇಷ ದಾಖಲೆ ಬರೆದಿದ್ದರು. ಪಂದ್ಯದ ಬಳಿಕ ಗೌತಮ್, ‘ನನ್ನ ಗೆಳತಿಯ ನಗುವೇ ನನಗೆ ಸ್ಫೂರ್ತಿ’ ಎಂದಿದ್ದರು.
ಹೊಸ ಬದುಕಿಗೆ ಕಾಲಿಟ್ಟ ಮನೀಶ್ ಪಾಂಡೆಗೆ ಶುಭಕೋರಿದ ವಿರಾಟ್ ಕೊಹ್ಲಿ!
ಇನ್ನು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಅಂತಿಮ ಓವರ್ ಬೌಲಿಂಗ್ ಮಾಡುವ ಮೂಲಕ ತಂಡಕ್ಕೆ 1 ರನ್’ಗಳ ರೋಚಕ ಗೆಲುವು ತಂದಿತ್ತಿದ್ದರು. ಡಿ.9ರಿಂದ ಆರಂಭಗೊಳ್ಳಲಿರುವ ರಣಜಿ ಟ್ರೋಫಿಯಲ್ಲಿ ಗೌತಮ್ ರಾಜ್ಯ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.