ಸಂತಸದ ಅಲೆಯಲ್ಲಿ ಇನ್‌ಸ್ಟಾಗ್ರಾಂ ಪೋಸ್ಟ್; ಆಸೀಸ್ ಆಟಗಾರ್ತಿಗೆ 1 ನಿಷೇಧ!

Published : Nov 18, 2019, 03:59 PM ISTUpdated : Nov 18, 2019, 04:01 PM IST
ಸಂತಸದ ಅಲೆಯಲ್ಲಿ ಇನ್‌ಸ್ಟಾಗ್ರಾಂ ಪೋಸ್ಟ್; ಆಸೀಸ್ ಆಟಗಾರ್ತಿಗೆ 1 ನಿಷೇಧ!

ಸಾರಾಂಶ

ಪ್ರತಿಯೊಬ್ಬ ಕ್ರಿಕೆಟಿಗ ಅಥವಾ ಆಟಗಾರ್ತಿಗೆ ಆಡೋ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದೇ ಹೆಮ್ಮೆ ಹಾಗೂ ಖುಷಿ ವಿಚಾರ. ಹೀಗೆ ಖುಷಿ ಹೆಚ್ಚಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ  ಆಸೀಸ್ ಮಹಿಳಾ ಕ್ರಿಕೆಟ್ ಆಟಗಾರ್ತಿಗೆ 1 ವರ್, ನಿಷೇಧ ಹೇರಲಾಗಿದೆ.

ಸಿಡ್ನಿ(ನ.18): ಇದು ಸೋಶಿಯಲ್ ಮೀಡಿಯಾ ಜಮಾನ. ತಮ್ಮತಮ್ಮ ಖುಷಿ, ನೋವು, ಬೇಸರ, ಕೋಪ ಎಲ್ಲದಕ್ಕೂ ಸಾಮಾಜಿಕ ಜಾಲತಾಣವೇ ವೇದಿಕೆ. ಇಷ್ಟೇ ಅಲ್ಲ ಮಾಹಿತಿ, ಸುದ್ದಿ ಸೇರಿದಂತೆ ಎಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಸುಲಭವಾಗಿ ಕೈಗೆಟುಕುತ್ತವೆ. ಹೀಗಾಗಿ ಬಹುತೇಕರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಹೀಗೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ್ತಿಗೆ 1 ವರ್ಷ ನಿಷೇಧ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: ಧೋನಿಯಿಂದಲೇ ವಿಶ್ವಕಪ್ ಶತಕ ಕೈತಪ್ಪಿತು; ಗಂಭೀರ್ ಹೇಳಿಕೆಗೆ ಫ್ಯಾನ್ಸ್ ಗರಂ!

ವುಮೆನ್ಸ್ ಬಿಗ್‌ಬ್ಯಾಶ್ ಲೀಗ್ ಟೂರ್ನಿಯ(WBBL) ಹೊಬಾರ್ಟ್ ಹರಿಕೇನ್ ತಂಡದ ವಿಕೆಟ್ ಕೀಪರ್ ಎಮಿಲಿ ಸ್ಮಿತ್ ನಿಷೇಧಕ್ಕೊಳಗಾದ  ಕ್ರಿಕೆಟ್ ಆಟಗಾರ್ತಿ. ಸಿಡ್ನಿ ಥಂಡರ್ ವಿರುದ್ದದ ಪಂದ್ಯಕ್ಕೂ ಮುನ್ನ ತಂಡದ ಪ್ಲೇಯಿಂಗ್ ಇಲೆವೆನ್ ಕುರಿತ ಮಾಹಿತಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ನಿಯಮ ಉಲ್ಲಂಘಿಸಿದ್ದರು. ಐಸಿಸಿ ಭ್ರಷ್ಟಾಚಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ 1 ವರ್ಷ ನಿಷೇಧ ಹೇರಿದೆ.

ಇದನ್ನೂ ಓದಿ: ಅಯ್ಯೋ ವಿಧಿಯೇ... ಅರ್ಧ ಶತಕ ಬಾರಿಸಿ ಪ್ರಾಣಬಿಟ್ಟ ಕ್ರಿಕೆಟಿಗ..!

ನಿಷೇಧದಿಂದಾಗಿ ಇನ್ನುಳಿದ ಮಹಿಳಾ ಬಿಗ್‌ಬ್ಯಾಶ್ ಲೀಗ್ ಟೂರ್ನಿ, ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಕೆಲ ದ್ವಿಪಕ್ಷೀಯ ಸರಣಿಗಳಿಂದ ಹೊರಗುಳಿಯಬೇಕಾಗಿದೆ. ತಾವು ಆಡೋ ಹನ್ನೊಂದರ ಬಳಗದಲ್ಲಿದ್ದಾರೆ ಅನ್ನೋ ಖುಷಿಯಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಸ್ಮಿತ್ ಎಮಿಲಿ ತಿಳಿಯದೇ ತಪ್ಪು ಮಾಡಿದ್ದಾರೆ. ತಮ್ಮ ತಪ್ಪು ಎಮಿಲಿಗೆ ಅರಿವಾಗಿದೆ. ಆದರೆ ನಿಯಮದ ಪ್ರಕಾರಣ ಕ್ರಮ ಕೈಗೊಳ್ಳಲೇಬೇಕಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

 

ಎಮಿಲಿ ಪಂದ್ಯ ಆರಂಭಕ್ಕೂ 1 ಗಂಟೆ ಮುಂಚೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ತಂಡದ ಆಡೋ ಹನ್ನೊಂದರ ಬಳಗ ಸೇರಿದಂತೆ ಹಲವು ಮಾಹಿತಿಗಳು ಒಳಗೊಂಡಿತ್ತು. ಪಂದ್ಯದ ಟಾಸ್‌ಗೂ ಮುನ್ನ ಮಾಹಿತಿ ಸೋರಿಕೆ ಮಾಡಿದ ಕಾರಣಕ್ಕೆ  ಎಮಿಲಿಗೆ ಶಿಕ್ಷೆ ವಿಧಿಸಲಾಗಿದೆ. 

ಎಮಿಲಿ ನಿಷೇಧದಿಂದ ಹೊಬಾರ್ಟ್ ಹರಿಕೇನ್ ತಂಡ ಬದಲಿ ಆಟಗಾರ್ತಿಯನ್ನು ಪ್ರಕಟಿಸಿದೆ. ತಸ್ಮಾನಿಯ ಟೈಗರ್ಸ್ ತಂಡದ ವಿಕೆಟ್ ಕೀಪರ್ ಎಮ್ಮಾ ಮ್ಯಾನಿಕ್ಸ್ ಬದಲಿ ಆಟಗಾರ್ತಿಯನ್ನಾಗಿ ಪ್ರಕಟಿಸಿದೆ. ಎಮ್ಮಾ ಹೊಬಾರ್ಟ್ ಹರಿಕೇನ್ ತಂಡ ಸೇರಿಕೊಂಡಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Ind vs SA: ಶುಭ್‌ಮನ್ ಗಿಲ್ ಫುಲ್ ಫಿಟ್; ಈ ಡೇಟ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಫಿಕ್ಸ್!
ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!