ಕಿವೀಸ್‌ ವಿರುದ್ಧ ಸರಣಿ ಗೆದ್ದ ಆಸ್ಪ್ರೇಲಿಯಾ

By Suvarna News  |  First Published Dec 30, 2019, 10:42 AM IST

ಟಾಮ್‌ ಬ್ಲಂಡೆಲ್‌ ಏಕಾಂಗಿ ಹೋರಾಟದ ಹೊರತಾಗಿಯೂ ಆಸ್ಟ್ರೇಲಿಯಾದ ಸಂಘಟಿತ ಬೌಲಿಂಗ್ ದಾಳಿಗೆ ಕಿವೀಸ್ ತಂಡ ಶರಣಾಗಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಆಸ್ಟ್ರೇಲಿಯಾ 2-0 ಸರಣಿ ಕೈವಶ ಮಾಡಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಮೆಲ್ಬರ್ನ್‌(ಡಿ.30): ಆಸ್ಪ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ 247 ರನ್‌ಗಳ ಸೋಲುಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಆಸೀಸ್‌ 2-0 ಅಜೇಯ ಮುನ್ನಡೆ ಸಾಧಿಸಿ, ಸರಣಿ ವಶಪಡಿಸಿಕೊಂಡಿದೆ. 

Tom Blundell falls after scoring a fighting 121 for New Zealand.

Trent Boult is not coming in to bat which means Australia win the Boxing Day Test by 247 runs! SCORECARD: https://t.co/Svt1gr1205 pic.twitter.com/ZZc5GsaFsS

— ICC (@ICC)

4ನೇ ದಿನವಾದ ಭಾನುವಾರ 4 ವಿಕೆಟ್‌ಗೆ 137 ರನ್‌ಗಳಿಂದ 2ನೇ ಇನ್ನಿಂಗ್ಸ್‌ ಮುಂದುವರೆಸಿದ ಆಸೀಸ್‌, 5 ವಿಕೆಟ್‌ಗೆ 168 ರನ್‌ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಕಿವೀಸ್ ಪರ ನೀಲ್ ವ್ಯಾಗ್ನರ್ 3 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ 1 ವಿಕೆಟ್ ಕಬಳಿಸಿದರು.

Tap to resize

Latest Videos

ಡೆಲ್ಲಿ ಕ್ರಿಕೆಟ್ ವಾರ್ಷಿಕ ಸಭೆಯಲ್ಲಿ ಬಡಿದಾಟ; ಬ್ಯಾನ್‌ಗೆ ಆಗ್ರಹಿಸಿದ ಗಂಭೀರ್!

ಇನ್ನು 488 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಆರಂಭಿಕ ಆಘಾತ ಕಂಡಿತು. ತಂಡದ ಮೊತ್ತ 35 ರನ್’ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಟಾಮ್ ಲಾಥಮ್, ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಟಾಮ್‌ ಬ್ಲಂಡೆಲ್‌ ಶತಕದ ಹೊರತಾಗಿಯೂ ನ್ಯೂಜಿಲೆಂಡ್ 240 ರನ್‌ಗಳಿಗೆ ಆಲೌಟ್‌ ಆಯಿತು.

Some confusion in the middle and Tim Southee is run out for 2!

Australia need just two more wickets to win this Test. pic.twitter.com/d09DMMzJ5x

— ICC (@ICC)

ಆಸ್ಟ್ರೇಲಿಯಾ ಪರ ನೇಥನ್ ಲಯನ್ 4 ವಿಕೆಟ್ ಪಡೆದರೆ, ಜೇಮ್ಸ್ ಪ್ಯಾಟಿನ್ಸನ್ 3 ಹಾಗೂ ಮಾರ್ನಸ್ 1 ವಿಕೆಟ್ ಕಬಳಿಸಿದರು. ಇನ್ನು ಮೂರನೇ ಟೆಸ್ಟ್ ಪಂದ್ಯವು ಜನವರಿ 03ರಿಂದ ಆರಂಭವಾಗಲಿದ್ದು, ಸಿಡ್ನಿ ಮೈದಾನ ಆತಿಥ್ಯ ವಹಿಸಲಿದೆ. 

ಸ್ಕೋರ್‌: 
ಆಸ್ಪ್ರೇಲಿಯಾ 467 ಮತ್ತು 168/5 ಡಿ. 
ನ್ಯೂಜಿಲೆಂಡ್‌ 148 ಮತ್ತು 240/10
 

click me!