"ಸಹಜವಾಗಿಯೇ ಸಂತೋಷದಿಂದ ಕುಣಿದು ಕುಪ್ಪಳಿಸಿದೆ. ಆಗ ಸ್ಟೀವ್ ಸ್ಮಿತ್ ಹೇಳಿದರು, "ನೋಡಿ, ಪ್ರೇಕ್ಷಕರನ್ನು ಒಂದು ಸೆಕೆಂಡ್ ಎಂದು ಹೇಳಿದರು. ನಾವು ಗಮನಿಸಿದಾಗ ಒಂದು ಲಕ್ಷ ಭಾರತೀಯ ಅಭಿಮಾನಿಗಳು ಅಕ್ಷರಶಃ ನಿಶಬ್ದರಾಗಿದ್ದರು. ಅ ಕ್ಷಣ ಸಾಕಷ್ಟು ವರ್ಷಗಳ ಕಾಲ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ' ಎಂದು ಆಸೀಸ್ ನಾಯಕ ಹೇಳಿದ್ದಾರೆ.
ಮೆಲ್ಬರ್ನ್(ನ.28): 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಮುಗಿದು ಒಂದು ವಾರವೇ ಕಳೆದಿದೆ. ಹೀಗಿದ್ದೂ ಕ್ರಿಕೆಟ್ ಜಗತ್ತು ಆ ಫೈನಲ್ ಪಂದ್ಯದ ಗುಂಗಿನಿಂದ ಹೊರಬಂದಿಲ್ಲ. ತವರಿನಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ದಶಕದ ಬಳಿಕ ಐಸಿಸಿ ಟ್ರೋಫಿ ಗೆಲ್ಲಬೇಕೆನ್ನುವ ರೋಹಿತ್ ಶರ್ಮಾ ಪಡೆಯ ಕನಸು ನುಚ್ಚುನೂರಾಗಿ ಒಂದು ವಾರವೇ ಕಳೆದಿದೆ. ಹೀಗಿದ್ದೂ ವಿಶ್ವಕಪ್ ಕುರಿತಾಗಿ ಒಂದಲ್ಲ ಒಂದು ಸುದ್ದಿ ಸದ್ದು ಮಾಡುತ್ತಲೇ ಇದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿತ್ತು. ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಅಜೇಯವಾಗಿಯೇ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಆದರೆ ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ಎದುರು 6 ವಿಕೆಟ್ ಅಂತರದ ಸೋಲು ಅನುಭವಿಸುವ ಮೂಲಕ ನಿರಾಸೆ ಅನುಭವಿಸಿತು. ಕಾಂಗರೂ ಪಡೆ 6ನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು.
ಧೋನಿ ನಂತರ CSK ಕ್ಯಾಪ್ಟನ್ ಯಾರು..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಇದೀಗ ಆಸ್ಟ್ರೇಲಿಯಾಗೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಪ್ಯಾಟ್ ಕಮಿನ್ಸ್ , ತಾವು ಮರಣಶಯ್ಯೆಯಲ್ಲಿದ್ದಾಗ ನೆನಪಿಸಿಕೊಳ್ಳಲಿರುವ ಕ್ಷಣ ಯಾವುದು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. 'ದ ಏಜ್' ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಪ್ಯಾಟ್ ಕಮಿನ್ಸ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
Question - in 70 years time, what is the moment you will think of from that 2023 World Cup Final?
Pat Cummins - Virat Kohli's wicket. (The Age). pic.twitter.com/wfNnjBR8nN
"ನೀವು ಮರಣಶಯ್ಯೆಯಲ್ಲಿದ್ದಾಗ, 70 ವರ್ಷಗಳಲ್ಲಿ ಆ ಫೈನಲ್‌ನ ಯಾವ ಕ್ಷಣವನ್ನು ನೆನಪಿಸಿಕೊಳ್ಳಲು ಬಯಸುತ್ತೀರಾ?" ಎಂದು ಅಂಕಣಕಾರ ಪೀಟರ್ ಫಿಜ್‌ಸಿಮೊನ್ಸ್ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ಯಾಟ್ ಕಮಿನ್ಸ್, "ನನ್ನ ಪ್ರಕಾರ ವಿರಾಟ್ ಕೊಹ್ಲಿ ವಿಕೆಟ್ ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇನ್ನು ವಿಶ್ವಕಪ್ ಫೈನಲ್ ಪಂದ್ಯವನ್ನು ಸ್ಮರಿಸಿಕೊಳ್ಳುವುದಾದರೇ, "ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಇದಾದ ಬಳಿಕ ನಾಲ್ಕನೇ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಒಂದು ಹಂತದಲ್ಲಿ ಭಾರತ 3 ವಿಕೆಟ್ ಕಳೆದುಕೊಂಡು 148 ರನ್ ಬಾರಿಸಿ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿತ್ತು. ಈ ಸಂದರ್ಭದಲ್ಲಿ ಪ್ಯಾಟ್ ಕಮಿನ್ಸ್ ಅವರ ಶಾಟ್ ಆಫ್ ಲೆಂಗ್ತ್ ಚೆಂಡನ್ನು ಬಾರಿಸುವ ಯತ್ನದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ ಒಳ ಅಂಚನ್ನು ಸವರಿದ ಚೆಂಡು ವಿಕೆಟ್‌ಗೆ ಅಪ್ಪಳಿಸಿತ್ತು. ಆಗ ಇಡೀ ಮೈದಾನವೇ ಒಂದು ಕ್ಷಣ ಸ್ತಬ್ದವಾಗಿ ಹೋಯಿತು.
ರೋಹಿತ್ ಶರ್ಮಾ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ರೆ ಟೀಂ ಇಂಡಿಯಾ ಮುಂದಿನ ಕ್ಯಾಪ್ಟನ್ ಯಾರು?
ಆ ಕ್ಷಣವನ್ನು ಮೆಲುಕು ಹಾಕಿರುವ ಕಮಿನ್ಸ್, "ಸಹಜವಾಗಿಯೇ ಸಂತೋಷದಿಂದ ಕುಣಿದು ಕುಪ್ಪಳಿಸಿದೆ. ಆಗ ಸ್ಟೀವ್ ಸ್ಮಿತ್ ಹೇಳಿದರು, "ನೋಡಿ, ಪ್ರೇಕ್ಷಕರನ್ನು ಒಂದು ಸೆಕೆಂಡ್ ಎಂದು ಹೇಳಿದರು. ನಾವು ಗಮನಿಸಿದಾಗ ಒಂದು ಲಕ್ಷ ಭಾರತೀಯ ಅಭಿಮಾನಿಗಳು ಅಕ್ಷರಶಃ ನಿಶಬ್ದರಾಗಿದ್ದರು. ಅ ಕ್ಷಣ ಸಾಕಷ್ಟು ವರ್ಷಗಳ ಕಾಲ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಲಿದೆ' ಎಂದು ಆಸೀಸ್ ನಾಯಕ ಹೇಳಿದ್ದಾರೆ.
ಭಾರತ ನೀಡಿದ್ದ 241 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಒಂದು ಹಂತದಲ್ಲಿ ಆಸೀಸ್ ಕೂಡಾ 47 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಗಿತ್ತು. ಆದರೆ ಟ್ರಾವಿಸ್ ಹೆಡ್ ಬಾರಿಸಿದ ಆಕರ್ಷಕ ಶತಕ(137) ಹಾಗೂ ಮಾರ್ನಸ್ ಲಬುಶೇನ್ ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಇನ್ನೂ 7 ಓವರ್ ಬಾಕಿ ಇರುವಂತೆಯೇ 6 ವಿಕೆಟ್ ಭರ್ಜರಿ ಜಯ ಸಾಧಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತು.