ವಿಶ್ವಕಪ್ ಸೋತ ಭಾರತದ ವಿರುದ್ದವೇ ಘೋಷಣೆ ಕೂಗಿದ 7 ಕಾಶ್ಮೀರ ಯೂನಿವರ್ಸಿಟಿ ವಿದ್ಯಾರ್ಥಿಗಳು ಅರೆಸ್ಟ್..!

By Naveen Kodase  |  First Published Nov 28, 2023, 1:58 PM IST

SKUAST ಪಶು ವೈದ್ಯಕೀಯ ವಿವಿಯ ಡೀನ್ ಡಾ. ಮೊಹಮ್ಮದ್ ಅಬುಬಕರ್ ಅಹಮದ್ ಸಿದ್ದಿಕಿ, ವಿದ್ಯಾರ್ಥಿಗಳು ಅರೆಸ್ಟ್ ಆಗಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. "ಇದೀಗ 7 ವಿದ್ಯಾರ್ಥಿಗಳು ಅರೆಸ್ಟ್ ಆಗಿದ್ದಾರೆ. ಆದರೆ ಈ ಪ್ರಕರಣದ ಕುರಿತಂತೆ ಸದ್ಯದ ಮಾಹಿತಿಯಿಲ್ಲ. ವಿದ್ಯಾರ್ಥಿಗಳು ನಮಗೆ ಯಾವುದೇ ದೂರು ನೀಡಿಲ್ಲ ಎಂದು ದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿಯಾಗಿದೆ.


ಜಮ್ಮು(ನ.28): ಕಾಶ್ಮೀರ ಕೃಷಿ ವಿಶ್ವವಿದ್ಯಾಲಯದ ಏಳು ವಿದ್ಯಾರ್ಥಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಟೀಂ ಇಂಡಿಯಾ 6 ವಿಕೆಟ್ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ ಕಾಶ್ಮೀರ ಕೃಷಿ ವಿವಿಯ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತಂತೆ ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಅನ್ವಯ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ 7 ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಿದ್ದಾರೆ.

ನವೆಂಬರ್ 19ರ ರಾತ್ರಿ ಮಧ್ಯ ಕಾಶ್ಮೀರದ ಗಂದರ್‌ಬಾಲ್‌ನಲ್ಲಿರುವ ಶುಹಾಮಾದಲ್ಲಿರುವ ಶೇರ್-ಎ-ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ(SKUAST)ದ ಪಶುವೈದ್ಯಕೀಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ವಿಶ್ವಕಪ್ ಫೈನಲ್ ಸೋಲುತ್ತಿದ್ದಂತೆ ಕೆಲವು ವಿದ್ಯಾರ್ಥಿಗಳು ಭಾರತ ವಿರುದ್ದ, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಈ ಸಂಬಂಧ ವಿದ್ಯಾರ್ಥಿಯೊಬ್ಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Tap to resize

Latest Videos

ಧೋನಿ ನಂತರ CSK ಕ್ಯಾಪ್ಟನ್ ಯಾರು..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಇದೀಗ SKUAST ಪಶು ವೈದ್ಯಕೀಯ ವಿವಿಯ ಡೀನ್ ಡಾ. ಮೊಹಮ್ಮದ್ ಅಬುಬಕರ್ ಅಹಮದ್ ಸಿದ್ದಿಕಿ, ವಿದ್ಯಾರ್ಥಿಗಳು ಅರೆಸ್ಟ್ ಆಗಿರುವ ವಿಚಾರವನ್ನು ಖಚಿತಪಡಿಸಿದ್ದಾರೆ. "ಇದೀಗ 7 ವಿದ್ಯಾರ್ಥಿಗಳು ಅರೆಸ್ಟ್ ಆಗಿದ್ದಾರೆ. ಆದರೆ ಈ ಪ್ರಕರಣದ ಕುರಿತಂತೆ ಸದ್ಯದ ಮಾಹಿತಿಯಿಲ್ಲ. ವಿದ್ಯಾರ್ಥಿಗಳು ನಮಗೆ ಯಾವುದೇ ದೂರು ನೀಡಿಲ್ಲ ಎಂದು ದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿಯಾಗಿದೆ.

ಪಶುವೈದ್ಯಕೀಯ ವಿಜ್ಞಾನ ವಿಭಾಗದ ಅಧಿಕಾರಿಯೊಬ್ಬರು, ನವೆಂಬರ್ 19ರ ರಾತ್ರಿ ಭಾರತ ವಿಶ್ವಕಪ್ ಫೈನಲ್ ಪಂದ್ಯ ಸೋಲುತ್ತಿದ್ದಂತೆಯೇ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಿದ್ದಾಗಿ ವರದಿಯಾಗಿದೆ.

ವಿಶ್ವಕಪ್ ಗೆದ್ದ ಕಾಂಗರೂಗಳ ‘ಕಮಂಗಿ’ ಆಟ.! ಬಾಲ ಬಿಚ್ಚಿದ ಆಸೀಸ್ ಆಟಗಾರರು..!

"ಹಾಸ್ಟೆಲ್‌ನಲ್ಲಿ ಸುಮಾರು 300 ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ. ಈ ಪೈಕಿ 30ರಿಂದ 40 ವಿದ್ಯಾರ್ಥಿಗಳು ಪಂಜಾಬ್, ರಾಜಸ್ಥಾನ, ಹಾಗೂ ಇತರೆ ರಾಜ್ಯಗಳಿಂದ ಬಂದವರಾಗಿದ್ದಾರೆ. ನವೆಂಬರ್ 19ರ ರಾತ್ರಿ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ, ಗಲಾಟೆ ನಡೆದಿದೆ. ಭಾರತ ಸೋತು ಬೇಸರದಲ್ಲಿದ್ದಾಗ ಸ್ಥಳೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾ ಗೆಲುವನ್ನು ಸಂಭ್ರಮಿಸಿದ್ದಲ್ಲದೇ, ಕೆಲವು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ್ದಾರೆ" ಎಂದು ಹೇಳಿದ್ದಾರೆ.

"ದುರಾದೃಷ್ಟವಶಾತ್ ಈ ಘಟನೆಯ ಕುರಿತಂತೆ ವಿದ್ಯಾರ್ಥಿಗಳು ವಾರ್ಡನ್‌ಗಾಗಲಿ ಅಥವಾ ಈ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ಕಂಪ್ಲೆಂಟ್ ಮಾಡಿಲ್ಲ. ಇದರ ಬದಲಾಗಿ ವಿದ್ಯಾರ್ಥಿಯೊಬ್ಬ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಯ ಸಾಕ್ಷಿಗಳನ್ನು ಆತ ಪೊಲೀಸರಿಗೆ ನೀಡಿದ್ದಾನೆಯೇ ಅಥವಾ ಇಲ್ಲವೇ ಎನ್ನುವ ಕುರಿತಂತೆ ಯಾವುದೇ ಮಾಹಿತಿಯೊಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

20 ವರ್ಷದ ವಿದ್ಯಾರ್ಥಿಯೊಬ್ಬ ನೀಡಿದ ದೂರಿನನ್ವಯ ಜಮ್ಮು ಮತ್ತು ಕಾಶ್ಮೀರ ಪೊಲೀಸರು UAPA(ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ) ಹಾಗೂ ಐಪಿಸಿ ಸೆಕ್ಷನ್ 505 ಮತ್ತು 506 ರ ಅಡಿ ಕೇಸು ದಾಖಲಿಸಿ 7 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

click me!