Ind vs SA, Boxing Day Test: ಸಂಪೂರ್ಣ ಮಳೆಗೆ ಆಹುತಿಯಾದ 2ನೇ ದಿನದಾಟ..!

By Suvarna NewsFirst Published Dec 27, 2021, 6:51 PM IST
Highlights

* ಭಾರತ-ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್‌ಗೆ ಮಳೆರಾಯ ಅಡ್ಡಿ

* ಎರಡನೇ ದಿನದಾಟದಲ್ಲಿ ಒಂದೂ ಎಸೆತ ಕಾಣದೆ ದಿನದಾಟ ಮುಕ್ತಾಯ

* ಬೃಹತ್ ಮೊತ್ತ ಗಳಿಸಿ ಡಿಕ್ಲೇರ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ ಟೀಂ ಇಂಡಿಯಾ

ಸೆಂಚೂರಿಯನ್‌(ಡಿ.27): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದ ಎರಡನೇ ದಿನದಾಟದಲ್ಲಿ ಒಂದು ಎಸೆತ ಕಾಣದೇ ಅಂತ್ಯವಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ (Rain interupt) ಆಟಗಾರರು ಮೈದಾನಕ್ಕಿಳಿಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪರಿಸ್ಥಿತಿಯನ್ನು ಅವಲೋಕಿಸಿದ ಅಂಪೈರ್‌ಗಳು ಎರಡನೇ ದಿನದಾಟವನ್ನು ರದ್ದು ಪಡಿಸುವ ತೀರ್ಮಾನವನ್ನು ತೆಗೆದುಕೊಂಡರು. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಫ್ರೀಡಂ ಟ್ರೋಫಿ 2021-22 ಸರಣಿಗೆ ಬಾಕ್ಸಿಂಗ್ ಡೇ ದಿನದಂದು ಭರ್ಜರಿ ಆರಂಭ ಸಿಕ್ಕಿತ್ತು. ಆದರೆ ಎರಡನೇ ದಿನದಾಟದಲ್ಲಿ ಪಂದ್ಯಕ್ಕೆ ವರುಣರಾಯ ಅವಕಾಶ ನೀಡಲಿಲ್ಲ. ಮೊದಲೆರಡು ದಿನ ಮಳೆಯ ವಾತಾವರಣದ ಮುನ್ಸೂಚನೆ ಇತ್ತು. ಆದರೆ ಮೂರನೇ ದಿನದಾಟದಿಂದ ವಾತಾವರಣ ತಿಳಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮೂಲಗಳು ತಿಳಿಸಿವೆ. 

ಇಲ್ಲಿನ ಸೂಪರ್ ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ(Virat Kohli) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ದಿನದಾಟದಂತ್ಯದ ವೇಳೆಗೆ ಭಾರತ ಕ್ರಿಕೆಟ್ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು 272 ರನ್ ಬಾರಿಸಿದೆ. ಇದೀಗ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ತನ್ನ ಖಾತೆಗೆ 100 ರನ್‌ ಸೇರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡು, ಬೌಲಿಂಗ್‌ನಲ್ಲಿ ಆತಿಥೇಯ ಹರಿಣಗಳ ಮೇಲೆ ಒತ್ತಡ ಹೇರಬೇಕಾಗಿದೆ. ಭಾರತ ತಂಡವು ಐವರು ತಜ್ಞ ಬೌಲರ್‌ಗಳೊಂದಿಗೆ ಕಣಕ್ಕಿಳಿದಿದೆ. ಹೀಗಾಗಿ ಮೂರನೇ ದಿನದಾಟದ ಆರಂಭದಲ್ಲೇ ಸ್ಪೋಟಕ ಬ್ಯಾಟಿಂಗ್ ನಡೆಸಿ ಹರಿಣಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರಬೇಕಿದೆ.

Rain has forced play to be called off on Day 2 in Centurion. | pic.twitter.com/81iymNCus4

— ICC (@ICC)

Latest Videos

 
ಮೊದಲ ದಿನದಾಟ ಹೇಗಿತ್ತು..?

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಕರ್ನಾಟಕದ ಆರಂಭಿಕ ಜೋಡಿಯಾದ ಮಯಾಂಕ್‌ ಅಗರ್‌ವಾಲ್ (Mayank Agarwal) ಹಾಗೂ ಕೆ.ಎಲ್‌. ರಾಹುಲ್ (KL Rahul) ಶತಕದ ಜತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ಮಯಾಂಕ್‌ ಅಗರ್‌ವಾಲ್(60) ಆಕರ್ಷಕ ಅರ್ಧಶತಕ ಬಾರಿಸಿದರು. ಲುಂಗಿ ಎಂಗಿಡಿ ಒಂದೇ ಓವರ್‌ನಲ್ಲಿ ಮಯಾಂಕ್‌ ಅಗರ್‌ವಾಲ್ ಹಾಗೂ ಚೇತೇಶ್ವರ್ ಪೂಜಾರ ಅವರನ್ನು ಸತತ ಎರಡು ಎಸೆತಗಳಲ್ಲಿ ವಿಕೆಟ್ ಪಡೆದು ಪೆವಿಲಿಯನ್ ಹಾದಿ ತೋರಿಸಿದರು. ಮತ್ತೊಂದು ತುದಿಯಲ್ಲಿ ಉಪನಾಯಕ ಕೆ.ಎಲ್. ರಾಹುಲ್ ಅಕರ್ಷಕ ಸಿಡಿಸಿ ಸಂಭ್ರಮಿಸಿದರು. ಇನ್ನು ನಾಯಕ ವಿರಾಟ್ ಕೊಹ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದರಾದರೂ ಅದನ್ನು ದೊಡ್ಡವನ್ನಾಗಿ ಪರಿವರ್ತಿಸಲು ವಿಫಲರಾದರು. ಕೊಹ್ಲಿ 94 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 35 ರನ್‌ ಬಾರಿಸಿ ಎಂಗಿಡಿಗೆ ಮೂರನೇ ಬಲಿಯಾದರು.

SA vs India Boxing Day Test: ದಕ್ಷಿಣ ಆಫ್ರಿಕಾ ಬೌಲರ್ಸ್ ಗೆ "ವಾಲ್" ಆದ KL , ಟೆಸ್ಟ್ ನಲ್ಲಿ 7ನೇ ಶತಕ ಸಿಡಿಸಿದ ರಾಹುಲ್!

ಸದ್ಯ ಕೆ.ಎಲ್‌. ರಾಹುಲ್‌ 248 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 122 ರನ್‌ ಬಾರಿಸಿದ್ದರೆ, ಮತ್ತೊಂದು ತುದಿಯಲ್ಲಿ ಅಜಿಂಕ್ಯ ರಹಾನೆ (Ajinkya Rahane) 81 ಎಸೆತಗಳಲ್ಲಿ 8 ಬೌಂಡರಿ ಸಹಿತ 40 ರನ್‌ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಸಂಕ್ಷಿಪ್ತ ಸ್ಕೋರ್
ಭಾರತ: 272/3
ಕೆ.ಎಲ್‌. ರಾಹುಲ್: 122*
ಮಯಾಂಕ್‌ ಅಗರ್‌ವಾಲ್‌: 60
ಲುಂಗಿ ಎಂಗಿಡಿ: 45/3
 

click me!