ಆಸೀಸ್ ದಿಗ್ಗಜ ರಿಕಿ ಪಾಂಟಿಂಗ್‌ ಪಂಜಾಬ್‌ ಕಿಂಗ್ಸ್‌ನ ಹೊಸ ಕೋಚ್‌; ಇನ್ನಾದರೂ ಬದಲಾಗುತ್ತಾ ಪ್ರೀತಿ ಪಡೆಯ ಲಕ್?

By Naveen Kodase  |  First Published Sep 19, 2024, 8:44 AM IST

ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ರಿಕಿ ಪಾಂಟಿಂಗ್ ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್‌ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್‌, ಐಪಿಎಲ್‌ನ ಪಂಜಾಬ್‌ ಕಿಂಗ್ಸ್‌ ತಂಡದ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 4 ವರ್ಷದ ಅವಧಿಗೆ ಪಾಂಟಿಂಗ್‌ರನ್ನು ನೇಮಕ ಮಾಡಿಕೊಂಡಿರುವುದಾಗಿ ಪಂಜಾಬ್‌ ತಂಡದ ಮಾಲಿಕರು ತಿಳಿಸಿದ್ದಾರೆ. 

7 ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ ತಂಡದೊಂದಿಗೆ ಇದ್ದ ಪಾಂಟಿಂಗ್‌ರನ್ನು ಇತ್ತೀಚೆಗೆ ತಂಡದ ಮಾಲಿಕರು ಕೋಚ್‌ ಹುದ್ದೆಯಿಂದ ಕೈಬಿಟ್ಟಿದ್ದರು. ಪಾಂಟಿಂಗ್‌ರ ಮಾರ್ಗದರ್ಶನದಲ್ಲಿ ಡೆಲ್ಲಿ ಚಾಂಪಿಯನ್‌ ಆಗದೆ ಇದ್ದರೂ, 2020ರಲ್ಲಿ ಫೈನಲ್‌ ಪ್ರವೇಶಿಸಿತ್ತು. ಅದಕ್ಕೂ ಮುನ್ನ ಅವರು ಮುಂಬೈ ಇಂಡಿಯನ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

Tap to resize

Latest Videos

undefined

2008ರ ಉದ್ಘಾಟನಾ ಆವೃತ್ತಿಯಿಂದ ಪಂಜಾಬ್‌ ಸಹ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಕಳೆದೆರಡು ಆವೃತ್ತಿಗಳಲ್ಲಿ ಟ್ರೆವರ್‌ ಬೇಯ್ಲಿಸ್‌ ತಂಡದ ಕೋಚ್‌ ಆಗಿದ್ದರು. ಅದಕ್ಕೂ ಮುನ್ನ ಅನಿಲ್‌ ಕುಂಬ್ಳೆ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಆದರೂ ತಂಡಕ್ಕೆ ಯಶಸ್ಸು ದೊರೆತಿರಲಿಲ್ಲ. ರಿಕಿ ಪಾಂಟಿಂಗ್, ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದು, ಇದುವರೆಗೂ ಐಪಿಎಲ್ ಟ್ರೋಫಿ ಬರ ಎದುರಿಸುತ್ತಾ ಬಂದಿರುವ ಪ್ರೀತಿ ಝಿಂಟಾ ಸಹ ಒಡೆತನದ ತಂಡಕ್ಕೆ ಕೊನೆಗೂ ಅದೃಷ್ಟ ಕೈಹಿಡಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. 

ಇಂದಿನಿಂದ ಟೀಂ ಇಂಡಿಯಾಗೆ ಚೆನ್ನೈನಲ್ಲಿ ಬಾಂಗ್ಲಾ ಟೆಸ್ಟ್‌

8 ಆವೃತ್ತಿಗಳಲ್ಲಿ 6ನೇ ಕೋಚ್!

2017ರಿಂದ 2023ರವರೆಗೂ ಪಂಜಾಬ್ ಕಿಂಗ್ಸ್‌, 5 ಕೋಚ್‌ಗಳನ್ನು ಕಂಡಿದೆ. 2017ರಲ್ಲಿ ವಿರೇಂದ್ರ ಸೆಹ್ವಾಗ್, 2018ರಲ್ಲಿ ಬ್ರಾಡ್ ಹಾಡ್ಜ್, 2019ರಲ್ಲಿ ಮೈಕ್ ಹೆಸ್ಸನ್, 2020, 2021ರಲ್ಲಿ ಅನಿಲ್ ಕುಂಬ್ಳೆ, 2022, 2023ರಲ್ಲಿ ಟ್ರೆವರ್ ಬೇಯ್ಲಿಸ್ ಕೋಚ್ ಆಗಿದ್ದರು. 8 ವರ್ಷಗಳಲ್ಲಿ ರಿಕಿ ಪಾಂಟಿಂಗ್, ಪಂಜಾಬ್ ಕಿಂಗ್ಸ್‌ ತಂಡದ ಆರನೇ ಕೋಚ್ ಎನಿಸಿಕೊಂಡಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ: ಪಾಕ್‌ನಲ್ಲಿ ಐಸಿಸಿ ಭದ್ರತಾ ತಂಡದಿಂದ ಪರಿಶೀಲನೆ

ಕರಾಚಿ: ಮುಂದಿನ ವರ್ಷ ನಡೆಯಬೇಕಿರುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಸಿದ್ಧತೆಗಳನ್ನು ಪರಿಶೀಲಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ), ಪಾಕಿಸ್ತಾನಕ್ಕೆ ಭೇಟಿ ನೀಡಿದೆ. ಮಂಗಳವಾರ ಕರಾಚಿಗೆ ಬಂದಿಳಿದ ಐಸಿಸಿ ಭದ್ರತಾ ಘಟಕದ ಐವರು ಅಧಿಕಾರಿಗಳು, ಭದ್ರತಾ ವ್ಯವಸ್ಥೆ ಹಾಗೂ ಕ್ರೀಡಾಂಗಣಗಳ ಪರಿಶೀಲನೆ ನಡೆಸಲಿವೆ. 

ರಾಹುಲ್‌ ದ್ರಾವಿಡ್‌ರ ಕೋಚಿಂಗ್‌ ಶೈಲಿಗೂ ಗೌತಮ್‌ ಗಂಭೀರ್‌ರ ಕೋಚಿಂಗ್‌ ಶೈಲಿಗೂ ವ್ಯತ್ಯಾಸವಿದೆ.: ರೋಹಿತ್ ಶರ್ಮಾ

ಲಾಹೋರ್‌, ಇಸ್ಲಾಮಾಬಾದ್‌ಗೂ ಭೇಟಿ ನೀಡಲಿರುವ ತಂಡ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ. ಸದ್ಯದ ವೇಳಾಪಟ್ಟಿ ಪ್ರಕಾರ ಭಾರತ ತಂಡದ ಎಲ್ಲಾ ಪಂದ್ಯಗಳನ್ನೂ ಲಾಹೋರ್‌ನಲ್ಲಿ ಆಡಿಸುವುದಾಗಿ ಪಿಸಿಬಿ ಹೇಳಿದೆ. ಆದರೆ ಪಾಕಿಸ್ತಾನಕ್ಕೆ ಭಾರತ ತಂಡ ತೆರಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಭಾರತ ತಂಡ ಪಾಕ್‌ಗೆ ಹೋಗಲು ನಿರಾಕರಿಸಿದರೆ, ಆಗ ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಭಾರತದ ಪಂದ್ಯಗಳು ಯುಎಇನಲ್ಲಿ ನಡೆಯಬಹುದು.
 

click me!