ಆಸೀಸ್‌ಗೆ ಮತ್ತೆ ಆಘಾತ, 3ನೇ ಟೆಸ್ಟ್‌ಗೆ ಸ್ಟೀವನ್‌ ಸ್ಮಿತ್‌ ನಾಯಕ!

Published : Feb 24, 2023, 01:39 PM IST
ಆಸೀಸ್‌ಗೆ ಮತ್ತೆ ಆಘಾತ, 3ನೇ ಟೆಸ್ಟ್‌ಗೆ ಸ್ಟೀವನ್‌ ಸ್ಮಿತ್‌ ನಾಯಕ!

ಸಾರಾಂಶ

ನಾಲ್ಕು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ 2-0 ಹಿನ್ನಡೆಯಲ್ಲಿರುವ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ ತವರಿಗೆ ವಾಪಾಸಾಗಿದ್ದಾರೆ. ಇದರಿಂದಾಗಿ ಇಂದೋರ್‌ನಲ್ಲಿ ನಡೆಯಲಿರುವ 3ನೇ ಟೆಸ್ಟ್‌ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್‌ ತಂಡವನ್ನು ಮುನ್ನಡೆಸಲಿದ್ದಾರೆ.  

ಇಂದೋರ್‌ (ಫೆ.24): ತಾಯಿಗೆ ತೀವ್ರ ಅನಾರೋಗ್ಯವಿರುವ ಕಾರಣ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್ ತವರಿಗೆ ವಾಪಾಸಾಗಿದ್ದಾರೆ. ಅವರ ಬದಲಿಗೆ ಭಾರತ ವಿರುದ್ಧ ನಡೆಯಲಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಸ್ಟೀವನ್‌ ಸ್ಮಿತ್‌ ಪ್ರವಾಸಿ ತಂಡವನ್ನು ಮುನ್ನಡೆಸಲಿದ್ದಾರೆ. ಮೂರನೇ ಟೆಸ್ಟ್‌ ಪಂದ್ಯ ಬುಧವಾರದಿಂದ ಇಂದೋರ್‌ನಲ್ಲಿ ಆರಂಭವಾಗಲಿದೆ. "ನನ್ನ ತಾಯಿ ತೀವ್ರ ಅನಾರೋಗ್ಯದಲ್ಲಿದ್ದು ಅವರ ಆರೈಕೆಯಲ್ಲಿರುವ ಕಾರಣ ನಾನು ಈ ಸಮಯದಲ್ಲಿ ಭಾರತಕ್ಕೆ ಹಿಂತಿರುಗದೇ ಇರಲು ನಿರ್ಧರಿಸಿದ್ದೇನೆ. ನನ್ನ ಕುಟುಂಬದೊಂದಿಗೆ ನಾನು ಇಲ್ಲಿರುವುದೇ ಸರಿ ಎಂದು ಭಾವಿಸುತ್ತೇನೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನನ್ನ ತಂಡದ ಸಹ ಆಟಗಾರರಿಂದ ನನಗೆ ದೊರೆತ ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ' ಎಂದು ಪ್ಯಾಟ್‌ ಕಮ್ಮಿನ್ಸ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 0-2 ಹಿನ್ನಡೆಯಲ್ಲಿದೆ. ಈಗಾಗಲೇ ಟ್ರೋಫಿ ಗೆಲ್ಲುವ ಕನಸನ್ನು ಭಗ್ನಮಾಡಿಕೊಂಡಿರುವ ಅಸೀಸ್‌, ಕನಿಷ್ಠ ಸರಣಿ ಸೋಲನ್ನು ತಪ್ಪಿಸಿಕೊಳ್ಳುವ ಯೋಚನೆಯಲ್ಲಿದೆ. ಸರಣಿ ಸೋಲು ತಪ್ಪಿಸಿಕೊಳ್ಳಬೇಕಾದರೆ, ಆಸೀಸ್‌ ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲ್ಲಬೇಕಿದೆ.

ಈಗಾಗಲೇ ಗಾಯದ ಕಾರಣದಿಂದಾಗಿ ಅನುಭವಿ ಆಟಗಾರರಾದ ಡೇವಿಡ್‌ ವಾರ್ನರ್‌ ಹಾಗೂ ಜೋಶ್‌ ಹ್ಯಾಸಲ್‌ವುಡ್‌ ಸೇವೆಯನ್ನೂ ಆಸೀಸ್‌ ಕಳೆದುಕೊಂಡಿದ್ದು, ಪ್ಯಾಟ್‌ ಕಮ್ಮಿನ್ಸ್‌ ಕೂಡ ಅಲಭ್ಯರಾಗುವುದರೊಂದಿಗೆ ಪ್ರವಾಸಿ ತಂಡ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದೆ.

ICC WOMEN'S T20 WORLD CUP: ಧೋನಿ ರೀತಿಯಲ್ಲಿ ಹರ್ಮಾನ್‌ ರನೌಟ್‌, ವಿಶ್ವಕಪ್‌ನಿಂದ ಭಾರತ ಔಟ್‌!

2022ರ ಡಿಸೆಂಬರ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡದ ಟೆಸ್ಟ್‌ ಪಂದ್ಯದಲ್ಲಿ ಹಾಗೂ 2021ರ ಆಶಸ್‌ ಟೆಸ್ಟ್‌ ಸರಣಿಯಲ್ಲಿ ಪ್ಯಾಟ್‌ ಕಮ್ಮಿನ್ಸ್‌ ಅಲಭ್ಯರಾಗಿದ್ದಾಗ ಸ್ಟೀವ್‌ ಸ್ಮಿತ್‌ ಆಸೀಸ್‌ನ ಹಂಗಾಮಿ ನಾಯಕರಾಗಿದ್ದರು. ಈ ಟೆಸ್ಟ್‌ಗೆ ಕಮ್ಮಿನ್ಸ್‌ಗೆ ಯಾವುದೇ ಬದಲಿ ಆಟಗಾರನನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹೆಸರಿಸಿಲ್ಲವಾದರೂ, ಮೊದಲ ಟೆಸ್ಟ್‌ನಲ್ಲಿ ಕಾಣಿಸಿಕೊಂಡಿರುವ ಮಿಚೆಲ್ ಸ್ಟಾರ್ಕ್ (ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ) ಅಥವಾ ಸ್ಕಾಟ್ ಬೋಲ್ಯಾಂಡ್‌ನಿಂದ ಸ್ಥಾನ ಪಡೆದುಕೊರ್ಳಳುವ ಸಾಧ್ಯತೆ ಇದೆ. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್‌ಗೆ ಕಮ್ಮಿನ್ಸ್‌ ಮೂಲಕ ಏಕೈಕ ವೇಗದ ಬೌಲರ್‌ನೊಂದಿಗೆ ಕಣಕ್ಕಿಳಿದಿತ್ತು.

ಎದುರಾಳಿಗಳನ್ನ ಮಣಿಸಲು ಅಂಬಾನಿ ತಂತ್ರ, ಜಿಯೋ ಸಿನಿಮಾದಲ್ಲಿ ಐಪಿಎಲ್‌ ಉಚಿತವಾಗಿ ಪ್ರಸಾರ!

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ
ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!