
ಸಿಡ್ನಿ(ನ.10): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಪಾರ ಅಭಿಮಾನಿ ಬಳಗವಿದೆ. ಭಾರತದಲ್ಲಿ ಮಾತ್ರವಲ್ಲ. ಪಾಕಿಸ್ತಾನ, ಆಸ್ಟ್ರೇಲಿಯಾ ಸೇರಿದಂತೆ ದೇಶ ವಿದೇಶಗಳಲ್ಲಿ ಕೊಹ್ಲಿ ಅಭಿಮಾನಿಗಳಿದ್ದಾರೆ. ಅದೆಷ್ಟೋ ಯುವ ಕ್ರಿಕೆಟಿಗರಿಗೆ ಕೊಹ್ಲಿ ರೋಲ್ ಮಾಡೆಲ್. ಕ್ರಿಕೆಟಿಗರ ಮಕ್ಕಳಿಗೂ ಕೊಹ್ಲಿಯೇ ಮಾದರಿ. ಇದೀಗ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಪುತ್ರಿಗೆ ಅಪ್ಪನ ಬದಲು ಕೊಹ್ಲಿ ರೋಲ್ ಮಾಡೆಲ್ ಎಂದಿದ್ದಾರೆ.
ಇದನ್ನೂ ಓದಿ ವಿದಾಯದ ನಂತರದ ಪ್ಲಾನ್ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ!
ಡೇವಿಡ್ ವಾರ್ನರ್ ಪತ್ನಿ ಕ್ಯಾಂಡೈಸ್ ತಮ್ಮ ಪುತ್ರಿಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ನಮ್ಮ ಪುತ್ರಿ ಹೆಚ್ಚಿನ ಸಮಯ ಭಾರತದಲ್ಲಿ ಕಳೆದಿದ್ದಾಳೆ. ಇದೀಗ ಕೊಹ್ಲಿ ಆಗಲು ಬಯಸಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ ವಾರ್ನರ್ ಗುಡುಗು: ಲಂಕಾ ಎದುರು ಆಸಿಸ್ T20 ಸರಣಿ ಕ್ಲೀನ್ ಸ್ವೀಪ್
ವಾರ್ನರ್ ರೀತಿ ಸ್ಫೋಟಕ ಬ್ಯಾಟಿಂಗ್‌ಗಿಂತ ಕೊಹ್ಲಿಯ ಕ್ಲಾಸಿಕ್ ಬ್ಯಾಟಿಂಗ್ ಶೈಲಿ ವಾರ್ನರ್ ಪುತ್ರಿಗೆ ಇಷ್ಟವಾಗಿದೆ. ಕೊಹ್ಲಿ ಹಾಗೂ ವಾರ್ನರ್ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್. ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿಗಿಂತ ವಾರ್ನರ್ ಹೆಚ್ಚು ಯಶಸ್ಸು ಸಾಧಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಇಷ್ಟೇ ಅಲ್ಲ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.