ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಕಾಂಗರೂಗಳ ಪಡೆ ಮೈಂಡ್‌ಗೇಮ್ ಶುರು ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಮೈಂಡ್‌ಗೇಮ್‌ನಲ್ಲಿ ಆಸ್ಟ್ರೇಲಿಯನ್ನರು ಎಕ್ಸ್‌ಪರ್ಟ್ಸ್. ತಮ್ಮ ಮಾತುಗಳಿಂದ ಎದುರಾಳಿ ತಂಡವನ್ನ ಕೆಣಕೋದು, ಆ ಮೂಲಕ ಅವರ ಆತ್ಮವಿಶ್ವಾಸವನ್ನ ಕುಗ್ಗಿಸೋದು, ಆಸ್ಟ್ರೇಲಿಯನ್ ಮೈಂಡ್ಸೆಟ್.! ಭಾರತದ ವಿರುದ್ಧ ಟೆಸ್ಟ್ ಸರಣಿ ಗೆಲ್ಲಲು ಕಾಂಗರೂಗಳು 3 ತಿಂಗಳಿಗೂ ಮೊದಲೇ ಮೈಂಡ್ ಶುರು ಮಾಡಿದ್ದಾರೆ. ಅಲ್ಲದೇ, ರೋಹಿತ್ ಶರ್ಮಾ ಪಡೆಯನ್ನ ಮಣಿಸಲು ಆಸಿಸ್ ಕ್ಯಾಪ್ಟನ್ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.
ಈ ಬಾರಿ ಭಾರತದ ವಿರುದ್ಧ ಗೆಲ್ಲಲೇಬೇಕು ಅಂತ ಪಣ..!
undefined
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯೇ ಲಾಸ್ಟ್..! ಈ ವರ್ಷ ಟೀಮ್ ಇಂಡಿಯಾ ಇನ್ಯಾವುದೇ ಏಕದಿನ ಸರಣಿ ಆಡಲ್ಲ. ಇನ್ನೇನಿದ್ರೂ ಟೆಸ್ಟ್ ಕ್ರಿಕೆಟ್ನದ್ದೇ ದರ್ಬಾರ್. ಮುಂದಿನ ತಿಂಗಳಿನಿಂದ ರೋಹಿತ್ ಶರ್ಮಾ ಪಡೆ ಬ್ಯಾಕ್ ಟು ಬ್ಯಾಕ್ 3 ಟೆಸ್ಟ್ ಸರಣಿಗಳನ್ನಾಡಬೇಕಿದೆ. 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ಈ ಸರಣಿಗಳು ತಂಡದ ಪಾಲಿಗೆ ಮಹತ್ವದ್ದಾಗಿವೆ.
ಗೌತಮ್ ಗಂಭೀರ್ ಕೋಚ್ ಆಗುತ್ತಿದ್ದಂತೆಯೇ ಬೌಲರ್ ಆಗಿ ಬದಲಾದ ರಿಷಭ್ ಪಂತ್..! ವಿಡಿಯೋ ವೈರಲ್
ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಸೆಪ್ಟೆಂಬರ್ 19ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ. ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ಭಾರತ ಪ್ರವಾಸ ಕೈಗೊಳ್ಳಲಿದ್ದು, ಭಾರತದಲ್ಲಿ 3 ಪಂದ್ಯಗಳ ಸರಣಿ ಆಡಲಿದೆ. ನವೆಂಬರ್‌ನಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಕಾಂಗರೂ ನಾಡಲ್ಲಿ 5 ಟೆಸ್ಟ್‌ಗಳನ್ನಾಡಲಿದೆ.
ಈ 3ರಲ್ಲಿ ಆಸೀಸ್ ಸರಣಿ, ಭಾರತದ ಪಾಲಿಗೆ ಬಿಗ್ ಚಾಲೆಂಜ್ ಆಗಿದೆ. ಯಾಕಂದ್ರೆ, ಈ ಬಾರಿ ಆಸ್ಟ್ರೇಲಿಯನ್ನರನ್ನು ಅವರ ನೆಲದಲ್ಲಿ ಸೋಲಿಸೋದು ಸುಲಭದ ಮಾತಲ್ಲ. ಈ ಬಾರಿ ಬಾರ್ಡರ್-ಗವಾಸ್ಕರ್ ಸರಣಿ ಗೆಲ್ಲಲೇಬೇಕು ಅಂತ ಫಿಕ್ಸ್ ಕಾಂಗರೂ ಪಡೆ ಪಣತೊಟ್ಟಿದೆ. ಅದಕ್ಕಾಗಿ ಈಗಿನಿಂದಲೇ ರಣತಂತ್ರ ರೂಪಿಸುತ್ತಿದೆ. ಅಲ್ಲದೇ, ಮೈಂಡ್‌ಗೇಮ್ ಶುರು ಮಾಡಿದೆ. ಯಾವುದೇ ಸರಣಿ ಆರಂಭಕ್ಕೂ ಮುನ್ನ ತಮ್ಮ ಮಾತುಗಳಿಂದ ಎದುರಾಳಿ ತಂಡವನ್ನ ಕೆಣಕೋದು, ಆ ಮೂಲಕ ಅವ್ರ ಆತ್ಮವಿಶ್ವಾಸವನ್ನ ಕುಗ್ಗಿಸೋದು ಆಸ್ಟ್ರೇಲಿಯನ್ ಮೈಂಡ್‌ಸೆಟ್..! ಈ ಬಾರಿಯೂ ಆಸೀಸ್ ಅದನ್ನೇ ಮಾಡ್ತಿದೆ.
ಈಗಾಗ್ಲೇ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್, ಈ ಸಲ ಆಸ್ಟ್ರೇಲಿಯಾದಲ್ಲಿ ಭಾರತದ ಆಟ ನಡೆಯಲ್ಲ. 5 ಟೆಸ್ಟ್‌ಗಳ ಸರಣಿಯನ್ನು 3-1 ರಿಂದ ಆಸ್ಟ್ರೇಲಿಯಾ ಗೆಲ್ಲಲಿದೆ ಅಂತ ಭವಿಷ್ಯ ನುಡಿದಿದ್ದಾರೆ. ಪಾಂಟಿಂಗ್ ನಂತರ ಹಾಲಿ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಕೂಡ ಟೀಂ ಇಂಡಿಯಾವನ್ನ ಹೊಡ್ದೇ..ಹೊಡಿತೀವಿ ಅಂತ ವಾರ್ನಿಂಗ್ ನೀಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕಿಂಗ್ ಕೊಹ್ಲಿ: ವಿರಾಟ್ ಎಲ್ಲದ್ರಲ್ಲೂ ನಂ.1
ನಾನು ಗೆಲ್ಲದಿರುವ ಏಕೈಕ ಟ್ರೋಫಿ ಅಂದ್ರೆ ಅದು ಬಾರ್ಡರ್-ಗವಾಸ್ಕರ್ ಟ್ರೋಫಿ. ಟೆಸ್ಟ್‌ನಲ್ಲಿ ನಾವು ಕಳೆದ ಕೆಲ ವರ್ಷಗಳಿಂದ ಹಲವು ಸಾಧನೆಗಳನ್ನ ಮಾಡಿದ್ದೇವೆ, ಹಲವು ಸರಣಿಗಳನ್ನ ಗೆದ್ದಿದ್ದೇವೆ. ಆದ್ರೆ, ತವರಿನಲ್ಲಿ ಪ್ರತಿ ಸರಣಿಗಳನ್ನ ಗೆಲ್ಲಬೇಕು ಅನ್ನೋದೆ ನಮ್ಮ ಗುರಿ. ಟೀಂ ಇಂಡಿಯಾವನ್ನ ಸೋಲಿಸೋದು ಸುಲಭವಲ್ಲ. ಅವರು ನಮ್ಮ ನೆಲದಲ್ಲಿ ಅದ್ಭುತವಾಗಿ ಆಡ್ತಾರೆ. ಆದ್ರೆ, ಈ ಬಾರಿ ನಾವು ಅವರಿಗಿಂತ ಉತ್ತಮ ಸ್ಥಾನದಲ್ಲಿದ್ದೇವೆ ಅಂತ ಕಮಿನ್ಸ್ ಹೇಳಿದ್ದಾರೆ.
2 ತಿಂಗಳು ಬ್ರೇಕ್, ಟೀಮ್ ಇಂಡಿಯಾ ವಿರುದ್ಧ ಕಮ್‌ಬ್ಯಾಕ್..!
ಯೆಸ್, ಬಾರ್ಡರ್- ಗವಾಸ್ಕರ್ ಸರಣಿ ಗೆಲ್ಲಲು ಕಮಿನ್ಸ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಸತತ ಕ್ರಿಕೆಟ್‌ನಿಂದ ಬಳಲಿರೋದ್ರಿಂದ 2 ತಿಂಗಳ ಕಾಲ ಕ್ರಿಕೆಟ್ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. 2 ತಿಂಗಳು ನಂತರ ಫ್ರೆಶ್ ಮೈಂಡ್‌ಸೆಟ್‌ನೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಕಳೆದ 6 ವರ್ಷಗಳಲ್ಲಿ ಒಂದೇ ಒಂದು ಸರಣಿ ಸೋತಿಲ್ಲ ಭಾರತ..!
ಟೀಂ ಇಂಡಿಯಾ ಕಳೆದ 6 ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಟೆಸ್ಟ್ ಸರಣಿ ಸೋತಿಲ್ಲ. 2018-19ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ, 2-1ರಿಂದ ಗೆದ್ದಿತ್ತು. 2020-21ರಲ್ಲಿ ಸತತ 2ನೇ ಬಾರಿ 2-1 ಅಂತರದಿಂದ ಟ್ರೋಫಿ ಎತ್ತಿಹಿಡಿದಿತ್ತು. ಇನ್ನು ಕಳೆದ ವರ್ಷ ತವರಿನಲ್ಲಿ 2-1 ಅಂತರದಿಂದ ಗೆದ್ದು ಬೀಗಿತ್ತು. ಸತತ ಸೋಲುಗಳಿಂದ ಕಂಗೆಟ್ಟಿರೋ ಆಸ್ಟ್ರೇಲಿಯಾ, ಈ ಬಾರಿ ಸೇಡು ತೀರಿಸಿಕೊಳ್ಳಲು ಕಾಯ್ತಿದೆ.
ಅದೇನೆ ಇರಲಿ, ನವೆಂಬರ್ 22ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭವಾಗಲಿದೆ. ಭಾರತ ಆಸಿಸ್ ನೆಲದಲ್ಲಿ ಹ್ಯಾಟ್ರಿಕ್ ಟೆಸ್ಟ್ ಸರಣಿ ಗೆಲ್ಲುತ್ತಾ..? ಅಥವಾ ಆಸೀಸ್ ಭಾರತದ ಗೆಲುವಿನ ಓಟಕ್ಕೆ ಕಡಿವಾಣ ಹಾಕುತ್ತಾ..? ಅನ್ನೋದನ್ನ ಕಾದು ನೋಡಬೇಕಿದೆ.
- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್