ಪರ್ತ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಸಿಕ್ಸರ್ ಭದ್ರತಾ ಸಿಬ್ಬಂದಿಯ ತಲೆಗೆ ಬಡಿದು ಗಾಯಗೊಳಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಹ್ಲಿ 100 ರನ್ ಗಳಿಸಿ ಅಜೇಯರಾಗಿದ್ದರು.
ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ವಿರಾಟ್ ಕೊಹ್ಲಿ ಸಿಕ್ಸರ್ ಬಾಲ್ ಭದ್ರತಾ ಸಿಬ್ಬಂದಿಗೆ ತಗುಲಿದೆ. ಜೋರಾಗಿ ಬಾಲ್ ತಗುಲಿದ್ದರ ಪರಿಣಾಮ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭದ್ರತಾ ಸಿಬ್ಬಂದಿ ತಲೆಗೆ ಬಾಲ್ ತಗುಲಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿಕ್ಸರ್ ಬಾರಿಸಿದ್ದ ಬಾಲ್ ಭದ್ರತಾ ಸಿಬ್ಬಂದಿಗೆ ತಲೆಗೆ ತಗಲುತ್ತಿದ್ದಂತೆ ವಿರಾಟ್ ಕೊಹ್ಲಿ ಒಂದು ಕ್ಷಣ ಆತಂಕಗೊಂಡಿದ್ದರು. ಭದ್ರತಾ ಸಿಬ್ಬಂದಿಗೆ ಬಾಲ್ ತಾಗುತ್ತಿದ್ದಂತೆ ಆಗಮಿಸಿದ ಫಿಸಿಯೋ ಥೆರಪಿ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರು. 101ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ.
undefined
ಸೆಕ್ಯೂರಿಟಿ ಸಿಬ್ಬಂದಿ ಕುರ್ಚಿ ಹಾಕಿಕೊಂಡು ಬೌಂಡರಿ ಬಳಿಯಲ್ಲಿಯೇ ಕುಳಿತುಕೊಂಡಿರುತ್ತಾರೆ. ಚೆಂಡು ತನ್ನತ್ತ ಬರುತ್ತಿರೋದನ್ನು ಭದ್ರತಾ ಸಿಬ್ಬಂದಿ ಗಮನಿಸಿರಲಿಲ್ಲ. ಹಾಗಾಗಿ ಚೆಂಡು ವ್ಯಕ್ತಿಯ ತಲೆಗೆ ತಾಗಿರೋದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ರಾಹುಲ್-ಯಶಸ್ವಿ ಶತಕದ ಜತೆಯಾಟ; ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಕಮ್‌ಬ್ಯಾಕ್!
ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣ ವಿಫಲರಾಗಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 05 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ, ಸೆಂಚೂರಿ ಸಿಡಿಸಿದರು. ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 100* ರನ್ ಗಳಿಸಿದರು. ಕೊಹ್ಲಿ ಶತಕ ಪೂರೈಸಿದ ಕೂಡಲೇ ನಾಯಕ ಬುಮ್ರಾ 487/6 ರಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆಸ್ಟ್ರೇಲಿಯಾಕ್ಕೆ 534 ರನ್‌ಗಳ ಗುರಿ ನೀಡಲಾಗಿದೆ .
ಇದನ್ನೂ ಓದಿ: ವಿರಾಟ್ ಕೊಹ್ಲಿ ಭರ್ಜರಿ ಶತಕ; ಪರ್ತ್ ಟೆಸ್ಟ್ ಗೆಲ್ಲಲು ಕಠಿಣ ಗುರಿ ನೀಡಿದ ಟೀಂ ಇಂಡಿಯಾ
📂 Virat Kohli's Swashbuckling six .MP4
📺 👉 1st Test, Day 3, LIVE NOW! pic.twitter.com/w0KmBbFznu