IPL Auction 2022 ವೇದಿಕೆಯಲ್ಲಿ ದಿಢೀರ್ ಕುಸಿದ ಬಿದ್ದ ಹರಾಜುದಾರ ಹ್ಯೂ ಎಡ್ಮೀಡ್ಸ್!

By Suvarna News  |  First Published Feb 12, 2022, 2:32 PM IST
  • ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಹ್ಯೂ ಎಡ್ಮೀಡ್ಸ್ ಆರೋಗ್ಯ ಏರುಪೇರು
  • ವೇದಿಕೆಯಲ್ಲಿ ಕುಸಿದು ಬಿದ್ದ ಹ್ಯೂ ಎಡ್ಮೀಡ್ಸ್
  • ಕುಸಿದ ಬಿದ್ದ ಕಾರಣ ಹರಾಜು ಪ್ರಕ್ರಿಯೆಯಲ್ಲಿ ಬ್ರೇಕ್ ಘೋಷಣೆ
     

ಬೆಂಗಳೂರು(ಫೆ.12):   ಐಪಿಎಲ್ ಹರಾಜು(IPL Auction 2022) ಪ್ರಕ್ರಿಯೆ ನಡೆಸುತ್ತಿದ್ದ ಹರಾಜುದಾರ ಹ್ಯೂ ಎಡ್ಮೀಡ್ಸ್(hugh edmeades) ದಿಢೀರ್ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ವಾವಿಂಡು ಹಸರಂಗ ಅವರ ಹರಾಜು ನಡೆಯುತ್ತಿದ್ದ ವೇಳೆ ಹ್ಯೂ ಎಡ್ಮೀಡ್ಸ್ ವೇದಿಕೆಯಿಂದ ಕುಸಿದು ಬಿದ್ದಿದ್ದಾರೆ. ಇದರಿಂದ ಕೆಲ ಕಾಲ ಆತಂಕ ವಾತಾವರಣ ನಿರ್ಮಾಣಗೊಂಡಿದೆ.

ಬ್ರಿಟನ್ ಮೂಲದ ಹ್ಯೂ ಎಡ್ಮೀಡ್ಸ್, 2018ರಿಂದಲೂ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸುತ್ತಿದ್ದಾರೆ. ಐಪಿಎಲ್ ಆರಂಭವಾದಾಗಿನಿಂದಲೂ ರಿಚರ್ಡ್ ಮ್ಯಾಡ್ಲಿ ಹರಾಜುದಾರ ಆಗಿದ್ದರು. 2018 ರಿಂದ ಹ್ಯೂ ಎಡ್ಮೀಡ್ಸ್ ಅವರನ್ನು ಬಿಸಿಸಿಐ ನೇಮಿಸಿದೆ. ಹರಾಜು ಪ್ರಕ್ರಿಯೆಯಲ್ಲಿ ಹ್ಯೂ ಎಡ್ಮೀಡ್ಸ್  35 ವರ್ಷಗಳ ಕಾಲ ಅಧಿಕ ಅನುಭವ  ಹೊಂದಿದ್ದಾರೆ. ಆದರೆ ದಿಢೀರ್ ಕುಸಿದು ಬಿದ್ದ ಕಾರಣ ಐಪಿಎಲ್ ಹರಾಜು ಪ್ರಕ್ರಿಯೆ ತಾತ್ಕಾಲಿಕ ಸ್ಥಗಿತಗೊಂಡಿದೆ. ಇದೇ ವೇಳೆ ಲಂಚ್ ಬ್ರೇಕ್ ನೀಡಲಾಗಿದೆ.

Tap to resize

Latest Videos

IPL Auction 2022 ಹರ್ಷಲ್ ಪಟೇಲ್‌ ಮತ್ತೆ ಆರ್‌ಸಿಬಿ ಪಾಲು, 10.75 ಕೋಟಿ ರೂಗೆ ಖರೀದಿ!

ಹ್ಯೂ ಎಡ್ಮೀಡ್ಸ್ ಆರೋಗ್ಯ ಮಾಹಿತಿ ನೀಡಿದ ವೈದ್ಯರು:

ಕುಸಿದು ಬಿದ್ದ  ಹ್ಯೂ ಎಡ್ಮೀಡ್ಸ್  ಅವರಿಗೆ ತಕ್ಷಣ ವೈದ್ಯಕೀಯ ನೆರವು ನೀಡಲಾಗಿದೆ. ಬಿಸಿಸಿಐ ವೈದ್ಯರ ತಂಡ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಕಡಿಮೆ ರಕ್ತದೊತ್ತಡ ಕಾರಣ ಹ್ಯೂ ಎಡ್ಮೀಡ್ಸ್ ಕುಸಿದು ಬಿದ್ದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಕೆಲ ಹೊತ್ತು ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. IPL Auction 2022 : ಲಖನೌ ತಂಡದಲ್ಲಿ ರಾಹುಲ್ -ಮನೀಷ್ ಜೋಡಿ, ಪಡಿಕ್ಕಲ್ ಮಿಲಿಯನೇರ್!

ಹ್ಯೂ ಎಡ್ಮೀಡ್ಸ್ ಕುಸಿದು ಬಿದ್ದ ಕಾರಣ ನಿಗದಿತ ಸಮಯಕ್ಕಿಂತ ಮೊದಲೇ ಊಟಕ್ಕೆ ಬ್ರೇಕ್ ಘೋಷಿಸಲಾಗಿದೆ.  ಬಿಸಿಸಿಐ ಮೂಲಗಳ ಪ್ರಕಾರ 3.30ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ ಮತ್ತೆ ಆರಂಭಗೊಳ್ಳಲಿದೆ. 

ಬ್ರಿಟನ್ ಮೂಲದ 63 ವರ್ಷದ ಹ್ಯೂ ಎಡ್ಮೀಡ್ಸ್ 25,000 ಹೆಚ್ಚು ಹರಾಜುಗಳನ್ನು ನಡೆಸಿಕೊಟ್ಟಿದ್ದಾರೆ. ಹರಾಜಿನಲ್ಲಿ ಅಪಾರ ಅನುಭವ ಹೊಂದಿರುವ ಹ್ಯೂ ಎಡ್ಮೀಡ್ಸ್ ದಿಢೀರ್ ಕುಸಿದು ಬಿದ್ದ ಘಟನ ಅಭಿಮಾನಿಗಳಲ್ಲಿ ಆತಂಕ ತಂದಿದೆ.  ಫೈನ್ ಆರ್ಟ್, ಕ್ಲಾಸಕ್ ಕಾರ್ಸ್, ಫುಟ್ಬಾಲ್ ಸೇರಿದಂತೆ ಕ್ರೀಡಾಪಟುಗಳ ಹರಾಜುಗಳಲ್ಲಿ ಹ್ಯೂ ಎಡ್ಮೀಡ್ಸ್ ಸಕ್ರಿಯರಾಗಿದ್ದಾರೆ. ಐಪಿಎಲ್ ಹರಾಜಿನ ಮೊದಲ ದಿನ ಅಂತ್ಯದ ವೇಳೆ ಹ್ಯೂ ಎಡ್ಮೀಡ್ಸ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆದರೆ ವೈದ್ಯರ ಸೂಚನೆಯಂತೆ ವಿಶ್ರಾಂತಿಗೆ ಜಾರಿದ್ದರು. 

ಹ್ಯೂ ಎಡ್ಮೀಡ್ಸ್ ಅಸ್ವಸ್ಥರಾದ ಕಾರಣ ತಕ್ಷಣ ಬಿಸಿಸಿಐ ಐಪಿಎಲ್ ಹರಾಜು ಪ್ರಕ್ರಿಯೆ ಮುಂದುವರಿಸಲು ವೀಕ್ಷಕ ವಿವರಣೆಗಾರ ಚಾರು ಶರ್ಮಾರಿಗೆ ಆಹ್ವಾನ ನೀಡಿತು. ತಕ್ಷಣವೇ ಒಪ್ಪಿಕೊಂಡ ಚಾರು ಶರ್ಮಾ, ಸ್ಥಗಿತಗೊಂಡ ಹರಾಜು ಪ್ರಕ್ರಿಯೆಯನ್ನು 3.45 ರಿಂದ ಆರಂಭಿಸಿದರು. ಅತ್ಯಂತ ಯಶಸ್ವಿಯಾಗಿ ಚಾರು ಶರ್ಮಾ ಐಪಿಎಲ್ ಹರಾಜು ಪ್ರಕ್ರಿಯೆ ಮುನ್ನಡೆಸಿದರು.  ದೇಸಿ ಕ್ರಿಕೆಟ್ ಲೀಗ್, ಇತರ ಕ್ರೀಡೆಗಳ ಹರಾಜು ಪ್ರಕ್ರಿಯೆ ಮಾಡಿರುವ ಚಾರು ಶರ್ಮಾ ಇದೇ ಮೊದಲ ಬಾರಿಗೆ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. 

ಐಪಿಎಲ್ ಟ್ರೋಫಿ
2008:  ರಾಜಸ್ಥಾನ ರಾಯಲ್ಸ್ 
2009:    ಡೆಕ್ಕನ್ ಚಾರ್ಜಸ್ 
2010: ಚೆನ್ನೈ ಸೂಪರ್ ಕಿಂಗ್ಸ್ 
 2011:   ಚೆನ್ನೈ ಸೂಪರ್ ಕಿಂಗ್ಸ್
2012:   ಕೋಲ್ಕತಾ ನೈಟ್ ರೈಡರ್ಸ್ 
2013:    ಮುಂಬೈ ಇಂಡಿಯನ್ಸ್
2014:   ಕೋಲ್ಕತಾ ನೈಟ್ ರೈಡರ್ಸ್
2015:   ಮುಂಬೈ ಇಂಡಿಯನ್ಸ್ 
2016:   ಸನ್‌ರೈಸರ್ಸ್ ಹದರಾಬಾದ್
2017:   ಮುಂಬೈ ಇಂಡಿಯನ್ಸ್
2018:   ಚೆನ್ನೈ ಸೂಪರ್ ಕಿಂಗ್ಸ್
2019:ಮುಂಬೈ ಇಂಡಿಯನ್ಸ್  
2020:   ಮುಂಬೈ ಇಂಡಿಯನ್ಸ್ 
2021:  ಚೆನ್ನೈ ಸೂಪರ್ ಕಿಂಗ್ಸ್  

 

click me!