ರಣಜಿ ಟ್ರೋಫಿ ಇತಿಹಾಸದಲ್ಲೇ ಅತಿ ಕಿರು ಮ್ಯಾಚ್! 90 ಓವರ್‌ನೊಳಗೆ ಮ್ಯಾಚ್ ಖತಂ

Published : Oct 27, 2025, 03:28 PM IST
Ranji Trophy

ಸಾರಾಂಶ

ಅಸ್ಸಾಂ ಮತ್ತು ಸರ್ವಿಸಸ್ ನಡುವಿನ ರಣಜಿ ಪಂದ್ಯವು ಕೇವಲ 540 ಎಸೆತಗಳಲ್ಲಿ ಮುಕ್ತಾಯಗೊಂಡು, ರಣಜಿ ಇತಿಹಾಸದಲ್ಲೇ ಅತಿ ಕಿರು ಪಂದ್ಯ ಎಂಬ ದಾಖಲೆ ಬರೆದಿದೆ. ಇದೇ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಸರ್ವಿಸಸ್ ತಂಡದ ಇಬ್ಬರು ಬೌಲರ್‌ಗಳು ಹ್ಯಾಟ್ರಿಕ್ ವಿಕೆಟ್ ಪಡೆದು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ತಿನ್ನುಕಿಯಾ(ಅಸ್ಸಾಂ): ಇಲ್ಲಿ ನಡೆದ ಅಸ್ಸಾಂ ಹಾಗೂ ಸರ್ವಿಸಸ್ ನಡುವಿನ ರಣಜಿ ಪಂದ್ಯ ಒಂದೂವರೆ ದಿನಗಳಲ್ಲೇ ಕೊನೆಗೊಂಡಿದೆ. ಪಂದ್ಯದ 4 ಇನ್ನಿಂಗ್ಸ್‌ಗಳು ಸೇರಿ ಒಟ್ಟು 90 ಓವರ್‌ಗಳ ಆಟ ಮಾತ್ರ ನಡೆದಿದ್ದು, ಎಸೆತಗಳ ಆಧಾರದಲ್ಲಿ ಇದು ರಣಜಿ ಇತಿಹಾಸದಲ್ಲೇ ಅತಿ ಕಿರು ಪಂದ್ಯ ಎನಿಸಿಕೊಂಡಿದೆ.

ಪಂದ್ಯದಲ್ಲಿ ಒಟ್ಟು 540 ಎಸೆತಗಳು ದಾಖಲಾದವು. 1962ರಲ್ಲಿ ರೈಲ್ವೇಸ್ ಹಾಗೂ ಡೆಲ್ಲಿ ನಡುವಿನ ಪಂದ್ಯ 547 ಎಸೆತಗಳಲ್ಲೇ ಮುಕ್ತಾಯಗೊಂಡಿದ್ದು ಈವರೆಗಿನ ದಾಖಲೆ ಯಾಗಿತ್ತು. ಆದರೆ ದಿನಗಳ ಆಧಾರದಲ್ಲಿ ಅತಿ ಬೇಗನೇ ಕೊನೆಗೊಂಡ ರಣಜಿ ಪಂದ್ಯ ನಡೆದಿದ್ದು 1934ರಲ್ಲಿ, ಮದ್ರಾಸ್ ಹಾಗೂ ಮೈಸೂರು ನಡುವಿನ ಪಂದ್ಯ ಒಂದೇ ದಿನದಲ್ಲಿ ಮುಕ್ತಾಯವಾಗಿತ್ತು. ಆ ಪಂದ್ಯದಲ್ಲಿ 100.5 ಓವರ್ ಎಸೆಯಲಾಗಿತ್ತು.

359 ರನ್: ಭಾನುವಾರ ಕೊನೆಗೊಂಡ ಪಂದ್ಯದಲ್ಲಿ 4 ಇನ್ನಿಂಗ್ಸ್‌ಗಳಲ್ಲಿ ಒಟ್ಟು 359 ರನ್ ದಾಖಲಾದವು. 32 ವಿಕೆಟ್‌ಗಳು ಪತನ ಗೊಂಡಿತು. ಮೊದಲು ಬ್ಯಾಟ್ ಮಾಡಿದ ಅಸ್ಸಾಂ 17.2 ಓವರಲ್ಲಿ 103ಕ್ಕೆ ಆಲೌಟಾದರೆ, ಸರ್ವಿಸ್ 29.2 ಓವರ್‌ಗಳಲ್ಲಿ 108 ರನ್ ಗಳಿಸಿತು. 2ನೇ ಇನ್ನಿಂಗ್ಸ್‌ನಲ್ಲಿ ಅಸ್ಸಾಂ 29.3 ಓವರ್‌ಗಳಲ್ಲಿ 75 ರನ್ ಗಳಿಸಲಷ್ಟೇ ಶಕ್ತವಾಯಿತು. 71 ರನ್ ಗುರಿ ಪಡೆದ ಸರ್ವಿಸಸ್ 13.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಜಯಭೇರಿ ಬಾರಿಸಿತು.

ರಣಜಿ ಕ್ರಿಕೆಟ್‌ನ ಅತಿ ಕಿರು ಪಂದ್ಯಗಳು

ಪಂದ್ಯ- ಎಸೆತ - ವರ್ಷ - ರನ್

ಅಸ್ಸಾಂ-ಸರ್ವಿಸಸ್- 540 ಎಸೆತ- 2025-26 - 359 ರನ್

ಡೆಲ್ಲಿ-ರೈಲ್ವೇಸ್ - 547 ಎಸೆತ- 1961-62 - 221 ರನ್

ತ್ರಿಪುರ-ರಾಜಸ್ಥಾನ - 574 ಎಸೆತ- 2019-20 - 359 ರನ್

ಹರ್ಯಾಣ-ತ್ರಿಪುರಾ - 597 ಎಸೆತ- 2019-20 - 359 ರನ್

ಮದ್ರಾಸ್-ಮೈಸೂರು - 605 ಎಸೆತ- 1934-35 - 237 ರನ್

ಒಂದು ಇನ್ನಿಂಗ್ಸ್‌ನಲ್ಲಿ ಇಬ್ಬರಿಗೆ ಹ್ಯಾಟ್ರಿಕ್: 91 ವರ್ಷಗಳ ಇತಿಹಾಸದಲ್ಲೇ ಮೊದಲು

ಪಂದ್ಯದ ಮೊದಲ ದಿನವಾದ ಶನಿವಾರ ಸರ್ವಿಸಸ್‌ನ ಬೌಲರ್‌ಗಳಾದ ಅರ್ಜುನ್ ಶರ್ಮಾ ಹಾಗೂ ಮೋಹಿತ್ ಇಬ್ಬರೂ ಹ್ಯಾಟ್ರಿಕ್ ವಿಕೆಟ್ ಪಡೆದರು. ಒಂದೇ ಇನ್ನಿಂಗ್ಸ್ ನಲ್ಲಿ ಇಬ್ಬರು ಬೌಲರ್‌ಗಳು ಹ್ಯಾಟ್ರಿಕ್ ಸಾಧನೆ ಮಾಡಿದ್ದು 91 ವರ್ಷಗಳ ರಣಜಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲು. ಈ ಮೊದಲು ಸರ್ವಿಸಸ್‌ನ ಜೋಗಿಂದರ್ ಸಿಂಗ್ ರಾವ್ 1963ರಲ್ಲಿ ನಾರ್ಥನ್ ಪಂಜಾಬ್ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ 2 ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಅದು ಈಗಲೂ ದಾಖಲೆಯಾಗಿಯೇ ಉಳಿದಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!