
ಟೊಕಿಯೋ (ಸೆ.25) ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಟೂರ್ನಿ ಆರಂಭಗೊಂಡಿದೆ. ಸೆಪ್ಟೆಂಬರ್ 28ರಂದು ಟೀಂ ಇಂಡಿಯಾ ಹೋರಾಟ ಆರಂಭಗೊಳ್ಳಲಿದೆ. ಗ್ರೂಪ್ ಹಂತದ ಪಂದ್ಯಗಳು ಆರಂಭಗೊಂಡಿದೆ. ಈ ಪೈಕಿ ಓಮನ್ ಹಾಗೂ ಹಾಂಕಾಂಗ್ ನಡುವಿನ ಪಂದ್ಯ ಹಲವರ ಗಮನಸೆಳೆದಿದೆ. ಕಾರಣ ಒಂದೇ ತಂಡದ 7 ಬೇರೇ ಬೇರೆ ಕ್ರಿಕೆಟಿಗರ ಸರ್‌ನೇಮ್. ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡ 7 ಕ್ರಿಕೆಟಿಗರ ಸರ್‌ನೇಮ್ ಒಂದೇ ಆಗಿದೆ. ಹಾಗಂತ ಇವರೆಲ್ಲಾ ಒಂದೇ ಕುಟುಂಬದವರಲ್ಲ. ಎಲ್ಲರೂ ಬೇರೇ ಬೇರೆ ಕ್ರಿಕೆಟಿಗರು. ಆದರೆ ಸರ್‌ನೇಮ್ ಮಾತ್ರ ಸೇಮ್ ಟು ಸೇಮ್.
ಓಮನ್ ತನ್ನ ಮೊದಲ ಪಂದ್ಯವನ್ನು ಹಾಂಕಾಂಗ್ ವಿರುದ್ದ ಆಡಿದೆ. ಆದರೆ ಹಾಂಕಾಂಗ್ ಅಬ್ಬರದ ಮುಂದೆ ಸೂಫಿಯಾನ್ ಮೆಹಮೂದ್ ತಂಡ ಮುಗ್ಗರಿಸಿದೆ. ಓಮನ್ ವಿರುದ್ದ ಹಾಂಕಾಂಗ್ 41 ರನ್ ಗೆಲುವು ದಾಖಲಿಸಿದೆ. ಹಾಂಕಾಂಗ್ ನೀಡಿದ 122 ರನ್ ಟಾರ್ಗೆಟ್ ಓಮನ್ ತಂಡಕ್ಕೆ ಸವಾಲಾಗಿತ್ತು. ಸತತ ವಿಕೆಟ್ ಕಳೆದುಕೊಂಡಿತು. ಈ ವೇಳೆ ಬ್ಯಾಟಿಂಗ್‌ಗಾಗಿ ಕ್ರೀಸ್‌ಗೆ ಆಗಮಿಸುತ್ತಿದ್ದ ಒಬ್ಬೊಬ್ಬರ ಸರ್‌ನೇಮ್ ಮಾತ್ರ ಸೇಮ್ ಆಗಿತ್ತು.
ಓಮನ್ ತಂಡದ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಂಡ ಆಟಗಾರರ ಪೈಕಿ 7 ಆಟಗಾರರ ಸರ್‌ನೇಮ್ ಅಲ್ ಬಲುಶಿ (Al Balushi). ನಾಯಕ ಸೂಫ್ಯಾನ್ ಮೆಹಮೂದ್, ವಿಕೆಟ್ ಕೀಪರ್ ಮುಜಾಫರ್ ಶಿರಾಲ್ಕರ್, ಬೌಲರ್ ಅಬ್ದುಲ್ ಜಲೀಲ್ ಹಾಗೂ ಸ್ಪಿನ್ನರ್ ಸಮೀರ್ ಒಥಮನ್ ಈ ನಾಲ್ವರ ಸರ್‌ನೇಮ್ ಬೇರೆಯಾಗಿದೆ. ಇನ್ನುಳಿದಂತೆ ಆರಂಭಿಕರು, ಮಿಡ್ಲ್ ಆರ್ಡರ್ ಸೇರಿದಂತೆ 7 ಮಂದಿಯ ಸರ್‌ನೇಮ್ ಅಲ್ ಬಲುಶಿ.
ಮೊಹಮ್ಮದ್ ಅಲ್ ಬಲುಶಿ, ಶುಯೆಬ್ ಅಲ್ ಬಲುಶಿ, ಜುಬೇರ್ ಅಲ್ ಬಲುಶಿ, ವಾಹೀದ್ ಅಲ್ ಬಲುಶಿ, ಇಸಾ ಅಲ್ ಬಲುಶಿ, ನವೀದ್ ಅಲ್ ಬಲುಶಿ, ಫಾರಿಸ್ ಅಲ್ ಬಲುಶಿ. ಈ ಎಳು ಮಂದಿಯ ಸರ್‌ನೇಮ್ ಒಂದೇ ಆಗಿದೆ. ಬ್ಯಾಟಿಂಗ್ ವೇಳೆ ಸ್ಕೋರ್‌ಬೋರ್ಡ್‌ನಲ್ಲಿ ಎಂ.ಅಲ್ ಬಲುಶಿ, ಎಸ್.ಅಲ್ ಬಲುಶಿ, ಜೆಡ್. ಅಲ್ ಬಲುಶಿ ಎಂದು ನಮೂದಿಸಲಾಗಿತ್ತು. ಓಮನ್ ತಂಡದ ಸ್ಕೂರ್‌ಕಾರ್ಡ್ ಇದೀಗ ಭಾರಿ ಗಮನಸೆಳೆದಿದೆ.
ಸೇಮ್ ಟು ಸೇಮ್ ಸರ್‌ನೇಮ್ ಇದೀಗ ಸೋಶಿಯಲ್ ಮೀಡಿಯಾದಲ್ಲೂ ಟ್ರೆಂಡ್ ಆಗುತ್ತಿದೆ. ಓಮನ್ ತಂಡಕ್ಕೆ ಆಯ್ಕೆಯಾಗಲು ಮೊದಲು ಅಲ್ ಬಲುಶಿ ಸರ್‌ನೇಮ್ ಇರಬೇಕು ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ. 7 ಮಂದಿಯ ಸರ್‌ನೇಮ್ ಒಂದೇ ರೀತಿ ಇರಲು ಕಾರಣವೇನು? ಇದು ಹೇಗೆ ಸಾಧ್ಯವಾಯಿತು ಎಂದು ಹಲವರು ಪ್ರಶ್ನಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.