ಬಿಸಿಸಿಐ ಮುಂದೆ ಐಸಿಸಿ ಕೂಡ ಏನೂ ಮಾಡಲು ಸಾಧ್ಯವಿಲ್ಲ: ಶಾಹಿದ್ ಅಫ್ರಿದಿ!

By Kannadaprabha NewsFirst Published Feb 17, 2023, 2:58 PM IST
Highlights

ಬಿಸಿಸಿಐ ಮುಂದೆ ಐಸಿಸಿ ಕೂಡ ಏನೂ ಇಲ್ಲವೆಂದ ಶಾಹಿದ್ ಅಫ್ರಿದಿ
2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
ಪಾಕಿಸ್ತಾನ ಪ್ರವಾಸ ಮಾಡಲು ಟೀಂ ಇಂಡಿಯಾ ಹಿಂದೇಟು

ನವದೆಹಲಿ(ಫೆ.17): 2023ರ ಏಷ್ಯಾಕಪ್‌ ಏಕದಿನ ಟೂರ್ನಿಯ ಆತಿಥ್ಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್‌ ಅಫ್ರಿದಿ, ‘ಬಿಸಿಸಿಐ ಮುಂದೆ ಐಸಿಸಿ ಕೂಡ ಏನೂ ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ. ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ಒಪ್ಪದ ಕಾರಣ ಟೂರ್ನಿಯನ್ನು ಸ್ಥಳಾಂತರಿಸಲು ಏಷ್ಯಾ ಕ್ರಿಕೆಟ್‌ ಸಮಿತಿ(ಎಸಿಸಿ) ನಿರ್ಧರಿಸಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ. 

ಖಾಸಗಿ ವಾಹಿನಿಯೊಂದರ ಜತೆ ಮಾತನಾಡಿರುವ ಅಫ್ರಿದಿ, ‘ಪಾಕಿಸ್ತಾನದಲ್ಲಿ ಏಷ್ಯಾಕಪ್‌ ನಡೆಯಲಿದೆಯೇ, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯನ್ನು ಪಾಕಿಸ್ತಾನ ಬಹಿಷ್ಕರಿಸಲಿದೆಯೇ ಎನ್ನುವುದು ನನಗೆ ಗೊತ್ತಿಲ್ಲ. ಇಂತಹ ಮಹತ್ವದ ವಿಚಾರಗಳಲ್ಲಿ ಐಸಿಸಿ ಮಧ್ಯಪ್ರವೇಶಿಸಬೇಕು. ಆದರೆ ಬಿಸಿಸಿಐ ಮುಂದೆ ಐಸಿಸಿಯ ಮಾತೂ ನಡೆಯುವುದಿಲ್ಲ ಎನ್ನುವುದಂತೂ ಸ್ಪಷ್ಟ’ ಎಂದಿದ್ದಾರೆ.

ಏಷ್ಯಾ​ಕಪ್‌: ಯುಎಇನಲ್ಲಿ ಭಾರತದ ಪಂದ್ಯಗಳು?

ಕರಾ​ಚಿ: ಪಾಕಿ​ಸ್ತಾ​ನ​ದಲ್ಲಿ ಏಷ್ಯಾ​ಕಪ್‌ ಕ್ರಿಕೆಟ್‌ ಆಡಲ್ಲ ಎಂದು ಭಾರತ ಸ್ಪಷ್ಟನಿರ್ಧಾರ ತಿಳಿ​ಸಿ​ರುವ ಹಿನ್ನ​ಲೆ​ಯಲ್ಲಿ ಪಾಕಿ​ಸ್ತಾನ ಕ್ರಿಕೆಟ್‌ ಮಂಡ​ಳಿ​(​ಪಿ​ಸಿ​ಬಿ) ಪರಿ​ಹಾ​ರದ ಮಾರ್ಗ ಕಂಡು​ಹಿ​ಡಿ​ದಿದ್ದು, ಟೂರ್ನಿ​ಯನ್ನು ಪಾಕಿ​ಸ್ತಾ​ನ​ದಲ್ಲೇ ನಡೆ​ಸಿ​ದರೂ ಭಾರ​ತದ ಪಂದ್ಯಗಳನ್ನು ಯುಎ​ಇ​ಯಲ್ಲಿ ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ. 

ಗುರು​ವಾರ ಪಿಸಿಬಿ ಅಧ್ಯಕ್ಷ ನಜಂ ಸೇಠಿ ಟೂರ್ನಿಯ ಆತಿ​ಥ್ಯದ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ ಎಂದು ಮಾಧ್ಯ​ಮ​ಗ​ಳಿಗೆ ತಿಳಿ​ಸಿ​ದ್ದಾ​ರೆ. ಆದರೆ ಪಿಸಿಬಿ ಮೂಲ​ಗಳ ಪ್ರಕಾರ, ಸೆಪ್ಟಂಬ​ರ್‌​ನಲ್ಲಿ ಟೂರ್ನಿ ನಡೆ​ಯ​ಲಿದ್ದು, ಭಾರ​ತದ ಪಂದ್ಯ​ಗ​ಳಿಗೆ ಯುಎಇ ಆತಿಥ್ಯ ವಹಿ​ಸ​ಲಿದೆ. ಉಳಿ​ದೆಲ್ಲಾ ಪಂದ್ಯ​ಗಳು ಪಾಕ್‌​ನಲ್ಲಿ ನಡೆ​ಯಲಿವೆ. ಒಂದು ವೇಳೆ ಭಾರತ ಫೈನ​ಲ್‌​ಗೇ​ರಿ​ದರೆ ಫೈನಲ್‌ ಪಂದ್ಯವೂ ಯುಎ​ಇ​ಯಲ್ಲೇ ನಡೆ​ಯಲಿದೆ ಎಂದು ವರ​ದಿ​ಯಾ​ಗಿದೆ.

ವಿಂಡೀಸ್‌ನ 3 ತಂಡಕ್ಕೆ ಮೂವರು ನಾಯಕರು!

ಸೇಂಟ್‌ ಜಾನ್ಸ್‌(ಆ್ಯಂಟಿಗಾ): ವೆಸ್ಟ್‌ಇಂಡೀಸ್‌ನ ಏಕದಿನ ತಂಡದ ನೂತನ ನಾಯಕರಾಗಿ ಶಾಯ್‌ ಹೋಪ್‌, ಟಿ20 ತಂಡದ ನಾಯಕರಾಗಿ ರೋವ್ಮೆನ್‌ ಪೋವೆಲ್‌ ನೇಮಕಗೊಂಡಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್‌ ಬಳಿಕ ನಿಕೋಲಸ್‌ ಪೂರನ್‌ ಎರಡೂ ತಂಡಗಳ ನಾಯಕತ್ವ ತೊರೆದಿದ್ದರು. ಈ ಇಬ್ಬರ ನೇಮಕದೊಂದಿಗೆ ವಿಂಡೀಸ್‌ ಮೂರು ಮಾದರಿಯಲ್ಲಿ ಮೂವರು ವಿಭಿನ್ನ ನಾಯಕರನ್ನು ಹೊಂದಿದಂತಾಗಿದೆ. ಟೆಸ್ಟ್‌ನಲ್ಲಿ ಕ್ರೆಗ್‌ ಬ್ರಾಥ್‌ವೇಟ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಟಿ20 ವಿಶ್ವಕಪ್‌: ಸೆಮೀಸ್‌ ಹೊಸ್ತಿಲಿಗೆ ಆಸ್ಪ್ರೇಲಿಯಾ

ಕೇಪ್‌ಟೌನ್‌: 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಪ್ರೇಲಿಯಾ ಸತತ 3ನೇ ಗೆಲುವು ಸಾಧಿಸಿ, ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸೀಸ್‌ 10 ವಿಕೆಟ್‌ಗಳಿಂದ ಜಯಿಸಿತು. ಲಂಕಾ 8 ವಿಕೆಟ್‌ಗೆ 112 ರನ್‌ ಗಳಿಸಿದರೆ, ಆಸೀಸ್‌ 15.5 ಓವರಲ್ಲಿ ವಿಕೆಟ್‌ ನಷ್ಟವಿಲ್ಲದೆ 115 ರನ್‌ ಗಳಿಸಿತು. 

ಚೇತೇಶ್ವರ್ ಪೂಜಾರ 100ನೇ ಟೆಸ್ಟ್: ಈ ಐತಿಹಾಸಿಕ ಸಾಧನೆ ಮಾಡಲು ಪೂಜಾರಗೆ ಗವಾಸ್ಕರ್ ಶುಭ ಹಾರೈಕೆ

ಇನ್ನು ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಪಾಕಿಸ್ತಾನ 70 ರನ್‌ಗಳ ಗೆಲುವು ಪಡೆಯಿತು. ಪಾಕಿಸ್ತಾನ ಮುನಿಬಾ ಅಲಿ ಅವರ ಶತಕ (68 ಎಸೆತದಲ್ಲಿ 102 ರನ್‌)ದ ನೆರವಿನಿಂದ 5 ವಿಕೆಟ್‌ಗೆ 165 ರನ್‌ ಗಳಿಸಿತು. ಐರ್ಲೆಂಡ್‌ 16.3 ಓವರಲ್ಲಿ 95 ರನ್‌ಗೆ ಆಲೌಟ್‌ ಆಯಿತು.

ರ‍್ಯಾಂಕಿಂಗ್‌‌ನಲ್ಲಿ ತಾಂತ್ರಿಕ ದೋಷಕ್ಕೆ ಐಸಿಸಿ ಕ್ಷಮೆ!

ದುಬೈ: ತಾಂತ್ರಿಕ ದೋಷದಿಂದಾಗಿ ಬುಧವಾರ 6 ತಾಸು ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ ಭಾರತ ನಂ.1 ಸ್ಥಾನದಲ್ಲಿದ್ದು ಬಳಿಕ ಮತ್ತೆ 2ನೇ ಸ್ಥಾನ ಪಡೆದಿದ್ದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಕ್ಷಮೆಯಾಚಿಸಿದೆ. 

‘ಅನಗತ್ಯ ಗೊಂದಲ ಸೃಷ್ಟಿಯಾಗಿದ್ದಕ್ಕೆ ಕ್ಷಮೆ ಕೇಳುತ್ತೇವೆ. ಜಿಂಬಾಬ್ವೆ ಹಾಗೂ ವಿಂಡೀಸ್‌ ನಡುವಿನ 2 ಪಂದ್ಯಗಳ ಸರಣಿ ಮುಕ್ತಾಯಗೊಂಡ ಬಳಿಕ ರ‍್ಯಾಂಕಿಂಗ್‌ ಪಟ್ಟಿ ಪರಿಷ್ಕೃತಗೊಂಡಿತ್ತು. ಈ ಸಂದರ್ಭದಲ್ಲಿ ತಪ್ಪಾಗಿದೆ. ಆದರೆ ಭಾರತ ವಿರುದ್ಧ 2ನೇ ಟೆಸ್ಟ್‌ಗೆ ಆಸ್ಪ್ರೇಲಿಯಾ ನಂ.1 ತಂಡವಾಗಿ ಕಾಲಿಡಲಿದೆ. ತಂಡ 126 ರೇಟಿಂಗ್‌ ಅಂಕ ಹೊಂದಿದ್ದು, 115 ಅಂಕ ಹೊಂದಿರುವ ಭಾರತ 2ನೇ ಸ್ಥಾನದಲ್ಲಿದೆ’ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
 

click me!