
ದುಬೈ (ಸೆ.15) ಪಾಕಿಸ್ತಾನ ಕ್ರಿಕೆಟ್ ತಂಡ ಆದಷ್ಟು ಬೇಗ ಮರೆಯಲು ಹಾಗೂ ಯಾವತ್ತೂ ನೆನಪು ಮಾಡಿಕೊಳ್ಳದೇ ಇರಲು ಬಯಸುವ ಪಂದ್ಯಗಳಲ್ಲಿ ಏಷ್ಯಾಕಪ್ 2025 ಟೂರ್ನಿ ಭಾರತ ವಿರುದ್ಧ ಪಂದ್ಯ ಕೂಡ ಒಂದು. ಈ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿತ್ತು ನಿಜ. ಪಂದ್ಯದಲ್ಲಿ ಸೋಲು ಗೆಲುವು ಸಹಜ. ಆದರೆ ಭಾರತದ ವಿರುದ್ಧ ಹೀನಾಯ ಸೋಲು ಒಂದು ರೀತಿಯ ಮುಖಭಂಗವೇ ಸರಿ. ಆದರೆ ಈ ಪಂದ್ಯದ ಆರಂಭದಿಂದ ಅಂತ್ಯದವರೆಗೆ ನಡೆದ ಘಟನೆಗಳು ಪಾಕಿಸ್ತಾನ ಕ್ರಿಕೆಟಿಗರು, ತಂಡ ಹಾಗೂ ದೇಶಕ್ಕೆ ಸಾಲು ಸಾಲು ಮುಖಭಂಗ ನೀಡಿದೆ. ಪಂದ್ಯದ ಆರಂಭದಲ್ಲೇ ಪಾಕಿಸ್ತಾನ ರಾಷ್ಟ್ರಗೀತೆ ಎಂದು ಜಲೇಬಿ ಬೇಬಿ ಸಾಂಗ್ ಪ್ಲೇ ಮಾಡಿದ ಘಟನೆ ನಡೆದಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಆರಂಭದಲ್ಲಿ ಎರಡು ದೇಶಗಳ ರಾಷ್ಟ್ರಗೀತೆ ಪ್ಲೇ ಮಾಡಲಾಗುತ್ತದೆ. ಬಳಿಕ ಪಂದ್ಯ ಆರಂಭಗೊಳ್ಳುತ್ತದೆ. ಭಾರತ ವಿರುದ್ದ ಹುಮ್ಮಸ್ಸಿನಿಂದ ಕಣಕ್ಕಿಳಿದ ಪಾಕಿಸ್ತಾನ ಕ್ರಿಕೆಟಿಗರು ರಾಷ್ಟ್ರಗೀತೆಗೆ ಗೌರವ ಸೂಚಿಸಲು ಸಾಲಾಗಿ ನಿಂತಿದ್ದರು. ಒಂದು ಬದಿಯಲ್ಲಿ ಭಾರತ ತಂಡ ನಿಂತಿದ್ದರೆ, ಮತ್ತೊಂದು ಕಡೆ ಪಾಕಿಸ್ತಾನ ತಂಡ ನಿಂತಿತ್ತು. ಮೈಕ್ ಮೂಲಕ , ಲೇಡಿಸ್ ಆ್ಯಂಡ್ ಜಂಟ್ಲಮೆನ್ ಪಾಕಿಸ್ತಾನದ ರಾಷ್ಟ್ರಗೀತೆಗಾಗಿ ಎದ್ದು ನಿಲ್ಲಿ, ಪಾಕ್ ಬಳಿಕ ಭಾರತದ ರಾಷ್ಟ್ರಗೀತೆ ಎಂದು ಘೋಷಣೆ ಮಾಡಲಾಗಿತ್ತು. ಇತ್ತ ಪಾಕಿಸ್ತಾನ ಕ್ರಿಕೆಟಿಗರು ರಾಷ್ಟ್ರಗೀತಗೆ ಕಾಯುತ್ತಿದ್ದರೆ, ದಿಢೀರ್ ಆಗಿ ಜಲೇಬಿ ಬೇಬಿ ಆಲ್ಬಬ್ ಸಾಂಗ್ ಪ್ಲೇ ಆಗಿದೆ. 2021ರಲ್ಲಿ ಬಿಡುಗಡೆಯಾದ ಇಂಗ್ಲೀಷ್ ಆಲ್ಬಬ್ ಸಾಂಗ್ ಪ್ಲೇ ಮಾಡಲಾಗಿದೆ. ದಿಢೀರ್ ತಪ್ಪಾಗಿದೆ ಅನ್ನೋದು ಅರಿವಿಗೆ ಬರುತ್ತಿದ್ದಂತೆ ಜಲೇಬಿ ಬೇಬಿ ಸಾಂಗ್ ನಿಲ್ಲಿಸಿ ಪಾಕಿಸ್ತಾನ ರಾಷ್ಟ್ರಗೀತೆ ಪ್ಲೇ ಮಾಡಲಾಗಿದೆ.
ಟೀಂ ಇಂಡಿಯಾದ ಮೌನ ಪ್ರತಿಭಟನೆ, ಗೆದ್ದ ಬಳಿಕವೂ ಪಾಕ್ ಜೊತೆಗಿಲ್ಲ ಹ್ಯಾಂಡ್‌ಶೇಕ್
ಪಾಕಿಸ್ತಾನ ಕ್ರಿಕೆಟಿಗರು ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ. ರಾಷ್ಟ್ರಗೀತೆ ಎಂದು ಘೋಷಣೆ ಮಾಡಿ ಜಲೇಬಿ ಸಾಂಗ್ ಹಾಕಿರುವುದು ಪಾಕ್ ಕ್ರಿಕೆಟಿಗರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ. ಇತ್ತ ಪಾಕಿಸ್ತಾನ ಅಭಿಮಾನಿಗಳು ಎದ್ದು ನಿಂತು ಗೌರವ ಸೂಚಿಸಲು ಕಾಯುತ್ತಿರುವಾಗ ಬೇರೆ ಹಾಡು ಪ್ಲೇ ಆಗುತ್ತಿರುವುದು ಕೇಳಿ ಅಸಮಾಧಾನಗೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗರು ಭಾರತ ವಿರುದ್ದದ ಏಷ್ಯಾಕಪ್ 2025 ಪಂದ್ಯದಲ್ಲಿ ಸಾಲು ಸಾಲು ಮುಖಭಂಗ ಅನುಭವಿಸಿದ್ದಾರೆ.
ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಹಿರಿ ಹಿರಿ ಹಿಗ್ಗಿತ್ತು. ಆದರೆ ಇಡೀ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸಮಾಧಾನ ತಂದಿತ್ತು ಟಾಸ್ ಗೆಲುವು ಮಾತ್ರ. ಇನ್ನುಳಿದ ಎಲ್ಲಾ ಹಂತದಲ್ಲೂ ಹಿನ್ನಡೆಗಳೇ ಎದುರಾಗಿತ್ತು. ಟಾಸ್ ಗೆದ್ದ ಬಳಿಕ ಹ್ಯಾಂಡ್‌ಶೇಕ್ ಮಾಡಲು ಸೂರ್ಯಕುಮಾರ್ ಯಾದವ್ ನಿರಾಕರಿಸಿದ್ದರು. ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಕಡಗಣಿಸಿದ್ದರು. ಇದಾದ ಬಳಿಕ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಪ್ರದರ್ಶನ ನೀಡಿ ಸೋಲು ಕಂಡಿತ್ತು. ಭಾರತ ಸುಲಭವಾಗಿ ಚೇಸ್ ಮಾಡಿ ಗೆಲುವು ದಾಖಲಿಸಿತ್ತು. ಪಾಕಿಸ್ತಾನ ತಂಡ ಮೈದಾನದಲ್ಲಿ ಹ್ಯಾಂಡ್‌ಶೇಕ್‌ಗಾಗಿ ಕಾಯುತ್ತಾ ನಿಂತಿತ್ತು. ಭಾರತ ತಂಡಕ್ಕೆ ಗೆಲುವು ತಂದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್, ಶಿವಂ ದುಬೆ ಕ್ರೀಸ್‌ನಲ್ಲೇ ಇದ್ದರೂ ಪಾಕಿಸ್ತಾನ ಕ್ರಿಕೆಟಿಗರ ಜೊತೆ ಕೈಕುಲಕಲಿಲ್ಲ. ಇತ್ತ ಟೀಂ ಇಂಡಿಯಾ ಕ್ರಿಕೆಟಿಗರು ಡಗೌಟ್‌ನಿಂದ ಪೆವಿಲಿಯನ್‌ಗೆ ತೆರಳಿದರೂ. ಯಾರೂ ಕೂಡ ಮೈದಾನಕ್ಕೆ ಬಂದು ಪಾಕಿಸ್ತಾನ ಕ್ರಿಕೆಟಿಗರ ಜೊತೆ ಹ್ಯಾಂಡ್‌ಶೇಕ್ ಮಾಡಲಿಲ್ಲ. ಪಾಕಿಸ್ತಾನ ಕ್ರಿಕೆಟಿಗರು ಕೆಲ ಹೊತ್ತು ಕಾದು ಬಳಿಕ ಮರಳಿದ್ದಾರೆ.
ಇತ್ತ ಡ್ರೆಸ್ಸಿಂಗ್ ರೂಂ ಬಾಗಿಲು ಕೂಡ ಬಂದ್ ಮಾಡಲಾಗಿತ್ತು. ಈ ಮೂಲಕ ಪಾಕಿಸ್ತಾನ ಕ್ರಿಕೆಟಿಗರು ಭಾರತ ತಂಡ ಹುಡುಕಿಕೊಂಡು ಡ್ರೆಸ್ಸಿಂಗ್ ರೂಂಗೆ ಬರುವುದು ಇಷ್ಟವಿರಲಿಲ್ಲ. ಇಲ್ಲೂ ಕೂಡ ಪಾಕಿಸ್ತಾನ ತಂಡ ಹಾಗೂ ಮುಖಭಂಗ ಅನುಭವಿಸಿತ್ತು. ಇಡೀ ಪಂದ್ಯದಲ್ಲಿ ಮುಖಭಂಗ ಅನುಭವಿಸಿದ ಪಾಕಿಸ್ತಾನ ತಂಡ ಗೆಲುವಿನ ಬಳಿಕ ಪ್ರೆಸೆಂಟೇಶನ್ ಸೆರೆಮನಿಗೆ ಆಗಮಿಸಲಿಲ್ಲ.
ಪಾಕ್ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್ ತಂಡ!
ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್, ಟೀಂ ಇಂಡಿಯಾ ಪೆಹಲ್ಗಾಂ ಸಂತ್ರಸ್ತ ಕುಟುಂಬದ ಜೊತೆಗಿದೆ. ಈ ಗೆಲುವು ಭಾರತೀಯ ಸೇನೆಗೆ ಅರ್ಪಿಸುತ್ತಿದ್ದೇವೆ ಎಂದು ಪ್ರೆಸೆಂಟೇಶನ್ ಸೆರೆಮನಿಯಲ್ಲಿ ಹೇಳಿದ್ದಾರೆ. ಇದು ಕೂಡ ಪಾಕಿಸ್ತಾನಕ್ಕೆ ತೀವ್ರ ಮುಖಭಂವಾಗಿತ್ತು. ಕಾರಣ ಆಪರೇಶನ್ ಸಿಂದೂರ್, ಭಾರತದ ದಾಳಿಯನ್ನು ಕೆಲ ಪಾಕಿಸ್ತಾನ ಕ್ರಿಕೆಟಿಗರು ಅಣಕಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.