Asia Cup 2025: ಪಾಕ್‌ ಕದನಕ್ಕೂ ಮುನ್ನ ಭಾರತಕ್ಕೆ ಇಂದು ಒಮಾನ್‌ ವಿರುದ್ಧ ‘ಅಭ್ಯಾಸ’!

Published : Sep 19, 2025, 10:53 AM IST
Team India's Jersey Sponsor

ಸಾರಾಂಶ

ಈಗಾಗಲೇ ಸೂಪರ್‌-4 ಹಂತ ಪ್ರವೇಶಿಸಿರುವ ಭಾರತ ತಂಡ, ಏಷ್ಯಾಕಪ್‌ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಒಮಾನ್‌ ವಿರುದ್ಧ ಸೆಣಸಲಿದೆ. ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಈ ಪಂದ್ಯವನ್ನು ಅಭ್ಯಾಸವಾಗಿ ಬಳಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ.

ಅಬುಧಾಬಿ: ಈ ಬಾರಿ ಏಷ್ಯಾಕಪ್‌ನಲ್ಲಿ ಈಗಾಗಲೇ ಸೂಪರ್‌-4 ಹಂತ ಪ್ರವೇಶಿಸಿರುವ 8 ಬಾರಿ ಚಾಂಪಿಯನ್‌ ಭಾರತ ತಂಡ, ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಶುಕ್ರವಾರ ಒಮಾನ್‌ ವಿರುದ್ಧ ಸೆಣಸಾಡಲಿದೆ. ಭಾನುವಾರ ಪಾಕಿಸ್ತಾನ ವಿರುದ್ಧ ಆಡಬೇಕಿರುವ ಭಾರತ ತಂಡ, ಒಮಾನ್‌ ಪಂದ್ಯವನ್ನು ಅಭ್ಯಾಸ ರೂಪದಲ್ಲಿ ಬಳಸಿಕೊಳ್ಳಲಿದೆ.

ಆರಂಭಿಕ ಪಂದ್ಯದಲ್ಲಿ ಯುಎಇಯನ್ನು ಮಣಿಸಿ, 2ನೇ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನಕ್ಕೆ ಸೋಲುಣಿಸಿದ್ದ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ, ಹ್ಯಾಟ್ರಿಕ್‌ ಗೆಲುವಿನ ವಿಶ್ವಾಸದಲ್ಲಿದೆ. ಪ್ರಮುಖವಾಗಿ ತಂಡ ಈ ಪಂದ್ಯದಲ್ಲಿ ಬ್ಯಾಟಿಂಗ್‌ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಕಳೆದೆರಡು ಪಂದ್ಯಗಳಲ್ಲೂ ಗುರಿ ಬೆನ್ನತ್ತಿ ಗೆದ್ದಿದ್ದ ತಂಡ, ಒಮಾನ್‌ ವಿರುದ್ಧ ಮೊದಲು ಬ್ಯಾಟ್‌ ಮಾಡುವ ಅವಕಾಶಕ್ಕಾಗಿ ಕಾಯುತ್ತಿದೆ. 

ಬ್ಯಾಟಿಂಗ್‌ ಅಭ್ಯಾಸಕ್ಕಾಗಿ ಕಾಯುತ್ತಿರುವ ಭಾರತ

ಅಭಿಷೇಕ್‌ ಶರ್ಮಾ ಅಬ್ಬರದ ಆಟವಾಡುತ್ತಿದ್ದರೂ, ಶುಭ್‌ಮನ್‌ ಗಿಲ್‌ ಇನ್ನಷ್ಟು ಸಮಯ ಕ್ರೀಸ್‌ನಲ್ಲಿ ಇರಬೇಕಾದ ಅಗತ್ಯವಿದೆ. ತಿಲಕ್‌ ವರ್ಮಾ, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ ಕೂಡಾ ಬ್ಯಾಟಿಂಗ್‌ಗಾಗಿ ಕಾಯುತ್ತಿದ್ದಾರೆ. ಇನ್ನು, ಸೂಪರ್‌-4ಗೂ ಮುನ್ನ ವಿಶ್ರಾಂತಿ ನೆಲೆಯಲ್ಲಿ ಒಮಾನ್‌ ವಿರುದ್ಧ ಪಂದ್ಯಕ್ಕೆ ವೇಗಿ ಬುಮ್ರಾ ಅಲಭ್ಯರಾಗುವ ಸಾಧ್ಯತೆಯಿದೆ. ಹೀಗಾದರೆ ಅರ್ಶ್‌ದೀಪ್‌ ಸಿಂಗ್‌ಗೆ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಅತ್ತ ಒಮಾನ್‌ ತಂಡ ಆರಂಭಿಕ 2 ಪಂದ್ಯಗಳಲ್ಲೂ ಸೋತಿದ್ದು, ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಕಾಯುತ್ತಿದೆ.

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:

ಭಾರತ: ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್.

ಓಮಾನ್: ಅಮೀರ್ ಖಲೀಂ, ಜಿತೀಂದರ್ ಸಿಂಗ್(ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ(ವಿಕೆಟ್ ಕೀಪರ್), ವಾಸೀಂ ಅಲಿ, ಹಸನೈನ್ ಶಾ, ಶಾ ಫೈಸಲ್, ಆರ್ಯನ್ ಬಿಷ್ತ್, ಶಕೀಲ್ ಅಹಮ್ಮದ್, ಸಾಮೇ ಶ್ರೀವಾಸ್ತವ್, ಜಿತಿನ್ ರಮನಂದಿ.

ಪಂದ್ಯ ಆರಂಭ: ರಾತ್ರಿ 8ಗಂಟೆಗೆ

ನೇರಪ್ರಸಾರ: ಸೋನಿ ಲೈವ್‌, ಸೋನಿಸ್ಪೋರ್ಟ್ಸ್‌

01ನೇ ಬಾರಿ: ಭಾರತ ಹಾಗೂ ಒಮಾನ್‌ ತಂಡಗಳು ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಲಿವೆ.

ಭಾರತ vs ಪಾಕಿಸ್ತಾನ ನಡುವೆ ನಾಡಿದ್ದು ಮತ್ತೆ ಹೈವೋಲ್ಟೇಜ್‌ ಕದನ!

ಬುಧವಾರ ಯುಎಇ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 41 ರನ್‌ಗಳಲ್ಲಿ ಗೆಲುವು ಸಾಧಿಸಿದ ಪಾಕಿಸ್ತಾನ ‘ಎ’ ಗುಂಪಿನ 2ನೇ ತಂಡವಾಗಿ ಸೂಪರ್‌-4 ಪ್ರವೇಶಿಸಿದೆ. ಈಗಾಗಲೇ ‘ಎ’ ಗುಂಪಿನಿಂದ ಭಾರತ ಸೂಪರ್‌-4 ಪ್ರವೇಶಿಸಿತ್ತು. ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ತಂಡಗಳು ಭಾನುವಾರ ಮತ್ತೆ ಮುಖಾಮುಖಿಯಾಗಲಿವೆ. ಈಗಾಗಲೇ ಗುಂಪು ಹಂತದಲ್ಲಿ ಉಭಯ ತಂಡಗಳು ಆಡಿದ್ದವು. ಪಂದ್ಯದಲ್ಲಿ ಭಾರತೀಯರ ‘ನೋ ಶೇಕ್‌ಹ್ಯಾಂಡ್‌’ ಭಾರೀ ಸದ್ದು ಮಾಡಿತ್ತು. ಸೂಪರ್‌-4ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಅಗ್ರ-2 ಸ್ಥಾನ ಪಡೆದುಕೊಂಡರೆ, ಟೂರ್ನಿಯ ಫೈನಲ್‌ನಲ್ಲೂ ಉಭಯ ತಂಡಗಳು ಸೆಣಸಾಡಲಿವೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ