37 ಓವರ್ ಮುಕ್ತಾಯಕ್ಕೆ 289 ರನ್ ಗಳಿಸಿದ್ದ ಆಫ್ಘನ್‌ಗೆ 1 ಎಸೆತದಲ್ಲಿ 3 ರನ್ ಅಗತ್ಯವಿತ್ತು. ಆದರೆ 38ನೇ ಓವರ್‌ನ ಮೊದಲ ಎಸೆತದಲ್ಲಿ ಮುಜೀಬ್ ಔಟಾದರು. ಇಷ್ಟಾಗಿಯೂ 37.4 ಓವರಲ್ಲಿ ಆಫ್ಘನ್ 295 ರನ್ ಗಳಿಸಿದ್ದರೆ, ತಂಡದ ನೆಟ್ ರನ್‌ರೇಟ್ ಲಂಕಾದ ನೆಟ್ ರನ್‌ರೇಟ್‌ಗಿಂತ ಹೆಚ್ಚಾಗುತ್ತಿತ್ತು. ಆದರೆ ಆಫ್ಘನ್‌ಗೆ ಇದರ ಅರಿವಿದ್ದಂತೆ ಕಾಣಲಿಲ್ಲ.
ಲಾಹೋರ್(ಸೆ.06): ಅದೃಷ್ಠ ಕೈ ಹಿಡಿದು, ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಭರ್ಜರಿ ಹೋರಾಟ ಪ್ರದರ್ಶಿಸಿದರೂ ಕೊನೆ ಕ್ಷಣದ ಒತ್ತಡಕ್ಕೆ ಒಳಗಾಗಿ, ಲೆಕ್ಕಾಚಾರ ತಪ್ಪಿದ ಅಫ್ಘಾನಿಸ್ತಾನ, ಶ್ರೀಲಂಕಾ ವಿರುದ್ಧ 2 ರನ್ ಸೋಲುಂಡು ಏಷ್ಯಾಕಪ್ ಲೀಗ್ ಹಂತದಲ್ಲೇ ಹೊರಬಿದ್ದಿದೆ. ಸತತ 2 ಗೆಲುವು ಕಂಡ ಲಂಕಾ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್-4 ಹಂತ ಪ್ರವೇಶಿಸಿದೆ.
ಮೊದಲು ಬ್ಯಾಟ್ ಮಾಡಿದ ಲಂಕಾವನ್ನು, ಆಫ್ಘನ್ ತಂಡ 291ಕ್ಕೆ ಕಟ್ಟಿಹಾಕಿತು. ಆಫ್ಘನ್ ನೆಟ್ ರನ್‌ರೇಟ್ ಆಧಾರದಲ್ಲಿ ಲಂಕಾವನ್ನು ಹಿಂದಿಕ್ಕಿ ಮುಂದಿನ ಹಂತ ಪ್ರವೇಶಿಸಬೇಕಿದ್ದರೆ ದೊಡ್ಡ ಗುರಿಯನ್ನು 37.1 ಓವರ್‌ಗಳಲ್ಲಿ ಬೆನ್ನಟ್ಟಬೇಕಿತ್ತು. ಇನ್ನೇನು ಗೆದ್ದೇಬಿಟ್ಟಿತು ಎನ್ನುವಷ್ಟರಲ್ಲಿ ಸತತ ವಿಕೆಟ್ ಕಳೆದುಕೊಂಡ ತಂಡ 37.4 ಓವರ್‌ಗಳಲ್ಲಿ 289ಕ್ಕೆ ಸರ್ವಪತನ ಕಂಡಿತು.
undefined
World Cup 2023 "ನಾನು ಇಂಥ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ": ಮಾಧ್ಯಮದವರ ವಿರುದ್ದ ರೋಹಿತ್ ಶರ್ಮಾ ಕೆಂಡಾಮಂಡಲ..!
ಲೆಕ್ಕಾಚಾರ ತಪ್ಪಿದ್ಹೇಗೆ?
37 ಓವರ್ ಮುಕ್ತಾಯಕ್ಕೆ 289 ರನ್ ಗಳಿಸಿದ್ದ ಆಫ್ಘನ್‌ಗೆ 1 ಎಸೆತದಲ್ಲಿ 3 ರನ್ ಅಗತ್ಯವಿತ್ತು. ಆದರೆ 38ನೇ ಓವರ್‌ನ ಮೊದಲ ಎಸೆತದಲ್ಲಿ ಮುಜೀಬ್ ಔಟಾದರು. ಇಷ್ಟಾಗಿಯೂ 37.4 ಓವರಲ್ಲಿ ಆಫ್ಘನ್ 295 ರನ್ ಗಳಿಸಿದ್ದರೆ, ತಂಡದ ನೆಟ್ ರನ್‌ರೇಟ್ ಲಂಕಾದ ನೆಟ್ ರನ್‌ರೇಟ್‌ಗಿಂತ ಹೆಚ್ಚಾಗುತ್ತಿತ್ತು. ಆದರೆ ಆಫ್ಘನ್‌ಗೆ ಇದರ ಅರಿವಿದ್ದಂತೆ ಕಾಣಲಿಲ್ಲ. ಸೂಪರ್-4 ಸ್ಥಾನ ಕೈತಪ್ಪಿತು ಎಂಬ ಬೇಸರದಲ್ಲೇ ಕ್ರೀಸ್‌ಗಿಳಿದ ನಂ.11 ಬ್ಯಾಟರ್ ಫಾರೂಕಿ ತಾವೆದುರಿಸಿದ ಮೊದಲೆರಡು ಎಸೆತಗಳಲ್ಲಿ ರನ್ ಗಳಿಸದೆ 3ನೇ ಎಸೆತದಲ್ಲಿ ಔಟಾದರು. ಅವರು ಒಂದು ರನ್ ಕದ್ದು ರಶೀದ್‌ಗೆ ಸ್ಟ್ರೈಕ್ ನೀಡಿದ್ದರೆ ಅವರು ಬೌಂಡರಿ ಅಥವಾ ಸಿಕ್ಸರ್ ಸಿಡಿಸಿ ಆಫ್ಘನ್‌ಗೆ ಸೂಪರ್-4 ಸ್ಥಾನ ತಂದುಕೊಡಬಹುದಿತ್ತು.
World Cup 2023: ಇವರೇ ನೋಡಿ ಏಕದಿನ ವಿಶ್ವಕಪ್ ಗೆಲ್ಲಲು ಹೊರಟಿರುವ ಭಾರತದ ಹುಲಿಗಳ ಪಡೆ..!
ಸ್ಕೋರ್:
ಶ್ರೀಲಂಕಾ 291/8(ಮೆಂಡಿಸ್ 92, ನಿಸ್ಸಂಕ 41, ನೈಬ್ 4-60)
ಆಫ್ಘನ್ 37.4 ಓವರಲ್ಲಿ 289/10 (ನಬಿ 65, ಹಶ್ಮತುಲ್ಲಾ 59)
ಏಷ್ಯಾಕಪ್: ಇಂದಿನಿಂದ ಸೂಪರ್-4
ಲಾಹೋರ್: ಏಷ್ಯಾಕಪ್‌ನ ಸೂಪರ್-4 ಹಂತದ ನಾಲ್ಕು ತಂಡಗಳು ಅಂತಿಮಗೊಂಡಿದ್ದು, ಮಂಗಳವಾರದಿಂದ ಪಂದ್ಯಗಳು ಆರಂಭಗೊಳ್ಳಲಿದೆ. ‘ಎ’ ಗುಂಪಿನಿಂದ ಭಾರತ, ಪಾಕಿಸ್ತಾನ, ‘ಬಿ’ ಗುಂಪಿನಿಂದ ಶ್ರೀಲಂಕಾ, ಬಾಂಗ್ಲಾದೇಶ ತಂಡಗಳು ಸೂಪರ್-4ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ನೇಪಾಳ ಹಾಗೂ ಅಫ್ಘಾನಿಸ್ತಾನ ಗುಂಪು ಹಂತದಲ್ಲೇ ಹೊರಬಿದ್ದವು. ಮಂಗಳವಾರ ಲಾಹೋರ್‌ನಲ್ಲಿ ನಡೆಯಲಿರುವ ಸೂಪರ್-4ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ-ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಬಳಿಕ ಸೆಪ್ಟೆಂಬರ್ 9ರಿಂದ ನಡೆಯಲಿರುವ ಎಲ್ಲಾ ಪಂದ್ಯಗಳಿಗೆ ಕೊಲಂಬೊ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಭಾನುವಾರ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಸೆಣಸಾಡಲಿವೆ. ಬಳಿಕ ಭಾರತ ಸೆಪ್ಟೆಂಬರ್ 12ಕ್ಕೆ ಶ್ರೀಲಂಕಾ, ಸೆಪ್ಟೆಂಬರ್ 15ಕ್ಕೆ ಬಾಂಗ್ಲಾದೇಶ ವಿರುದ್ಧ ಆಡಲಿದೆ.
ಇಂದಿನ ಪಂದ್ಯ: ಪಾಕಿಸ್ತಾನ-ಬಾಂಗ್ಲಾದೇಶ,
ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್