ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಜಸ್ಪ್ರೀತ್ ಬುಮ್ರಾ ಬದಲಿಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡ ಕೂಡಿಕೊಂಡಿದ್ದಾರೆ. ಇನ್ನು ನೇಪಾಳ ತಂಡದಲ್ಲಿ ಕೂಡಾ ಒಂದು ಬದಲಾವಣೆ ಮಾಡಲಾಗಿದೆ.
ಪಲ್ಲೆಕೆಲೆ(ಸೆ.04): ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತನ್ನ ಪಾಲಿನ ಎರಡನೇ ಪಂದ್ಯವನ್ನಾಡುತ್ತಿದೆ. ಭಾರತ ತಂಡವು ನೆರೆಯ ನೇಪಾಳ ಎದುರು ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಇನ್ನು ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಜಸ್ಪ್ರೀತ್ ಬುಮ್ರಾ ಬದಲಿಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ತಂಡ ಕೂಡಿಕೊಂಡಿದ್ದಾರೆ. ಇನ್ನು ನೇಪಾಳ ತಂಡದಲ್ಲಿ ಕೂಡಾ ಒಂದು ಬದಲಾವಣೆ ಮಾಡಲಾಗಿದೆ. ನೇಪಾಳ ತಂಡದಲ್ಲಿ ಆರಿಫ್ ಶೇಖ್ ಬದಲಿಗೆ ಭೀಮ್ ಶರ್ಕಿ ತಂಡ ಕೂಡಿಕೊಂಡಿದ್ದಾರೆ.
undefined
ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಮೊದಲ ಪಂದ್ಯದಲ್ಲಿ ನಾವು ಬ್ಯಾಟಿಂಗ್ ಮಾಡಿದ್ದೆವು. ಇಂದು ಮಳೆಯ ವಾತಾವರಣ ಇರುವುದರಿಂದ ಸಂಪೂರ್ಣ ಪಂದ್ಯ ನಡೆಯುವ ಬಗ್ಗೆ ಅನುಮಾನವಿದೆ. ಹೀಗಾಗಿ ಇಂದು ಬೌಲಿಂಗ್‌ನಲ್ಲಿ ನಮ್ಮ ಸಾಮರ್ಥ್ಯ ಪರೀಕ್ಷಿಸಲು ಈ ಅವಕಾಶ ಬಳಸಿಕೊಳ್ಳಲಿದ್ದೇವೆ ಎಂದು ಹಿಟ್‌ಮ್ಯಾನ್ ಹೇಳಿದ್ದಾರೆ.
ತಂದೆಯಾದ ವೇಗಿ ಜಸ್ಪ್ರೀತ್ ಬುಮ್ರಾ; ಮಗುವಿನ ಮುದ್ದಾದ ಹೆಸರಿಟ್ಟ ಟೀಂ ಇಂಡಿಯಾ ವೇಗಿ..!
Asia Cup 2023. India won the toss and elected to field. https://t.co/u83iAj3VLS
— BCCI (@BCCI)ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಳೆದ ಪಂದ್ಯವು ಮಳೆಯಿಂದಾಗಿ ಅರ್ಧಕ್ಕೆ ರದ್ದಾಗಿತ್ತು. ಪಾಕ್ ಎದುರು ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ 266 ರನ್‌ಗಳಿಗೆ ಸರ್ವಪತನ ಕಂಡಿತ್ತು. ನಾಯಕ ರೋಹಿತ್ ಶರ್ಮಾ ಸೇರಿದಂತೆ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇದಾದ ಬಳಿಕ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು.
Asia Cup 2023: ನೇಪಾಳ ಎದುರಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್..! ಯಾರಿಗೆ ಸಿಗುತ್ತೆ ಸ್ಥಾನ?
ಇನ್ನೊಂದೆಡೆ ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಎದುರು 238 ರನ್ ಹೀನಾಯ ಸೋಲು ಅನುಭವಿಸಿದ್ದ ನೇಪಾಳ ತಂಡವು ಇದೀಗ ಮತ್ತೊಮ್ಮೆ ಇನ್ನೊಂದು ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ಬಲಾಢ್ಯ ಭಾರತದ ಎದುರು ದಿಟ್ಟ ಹೋರಾಟ ನೀಡಲು ನೇಪಾಳ ಸಜ್ಜಾಗಿದೆ.
ನೇಪಾಳ ವಿರುದ್ಧ ಮೊದಲ ಪಂದ್ಯ: ಯಾವುದೇ ಮಾದರಿಯಲ್ಲಿ ಭಾರತಕ್ಕಿದು ನೇಪಾಳ ವಿರುದ್ಧ ಮೊದಲ ಪಂದ್ಯ. ಏಕದಿನದಲ್ಲಿ ಭಾರತಕ್ಕೆ ಎದುರಾಗಲಿರುವ 20ನೇ ತಂಡ(ರಾಷ್ಟ್ರ) ನೇಪಾಳ.
ಭಾರತ-ನೇಪಾಳ ಪಂದ್ಯವೂ ರದ್ದಾದರೆ ಏನಾಗುತ್ತದೆ?
ಪಲ್ಲಕೆಲೆಯಲ್ಲಿ ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಭಾರತ ತನ್ನ 2ನೇ ಪಂದ್ಯವನ್ನು ಇಂದು ನೇಪಾಳ ವಿರುದ್ಧ ಆಡಲಿದೆ. ಈ ಪಂದ್ಯವೂ ರದ್ದಾದರೆ, ಆಗ ಭಾರತ ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಲಿದೆ. ನೇಪಾಳ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿತ್ತು.
ತಂಡಗಳು ಹೀಗಿವೆ ನೋಡಿ:
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ , ಮೊಹಮ್ಮದ್ ಸಿರಾಜ್.
ನೇಪಾಳ: ಕುಸಾಲ್ ಭುರ್ಟೆಲ್, ಆಸಿಫ್, ರೋಹಿತ್(ನಾಯಕ), ಭೀಮ್ ಶರ್ಕಿ, ಸೋಮ್ಪಾಲ್, ದೀಪೇಂದ್ರ, ಗುಲ್ಶನ್, ಕುಶಾಲ್ ಮಲ್ಲಾ, ಕರಣ್, ಸಂದೀಪ್, ಲಲಿತ್.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಟ್
ಪಲ್ಲಕೆಲೆ ಪಿಚ್ ಬ್ಯಾಟರ್‌ಗಳಿಗೆ ಸವಾಲಾಗಿ ಪರಿಣಮಿಸಬಹುದು. ಮಳೆ ಸುರಿಯುತ್ತಿರುವ ಕಾರಣ ಔಟ್‌ಫೀಲ್ಡ್ ನಿಧಾನಗೊಂಡಿರಲಿದ್ದು, ರನ್ ಗಳಿಸಲು ಹೆಚ್ಚು ಪರಿಶ್ರಮ ವಹಿಸಬೇಕಾಗಬಹುದು. ವೇಗಿಗಳಿಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ಇದೆ.