ಕುಲ್ದೀಪ್ ಸ್ಪಿನ್ ಮೋಡಿಗೆ ಶ್ರೀಲಂಕಾ 172 ರನ್‌ಗೆ ಆಲೌಟ್, ಏಷ್ಯಾಕಪ್ ಫೈನಲ್‌ಗೆ ಭಾರತ!

Published : Sep 12, 2023, 11:19 PM ISTUpdated : Sep 12, 2023, 11:37 PM IST
ಕುಲ್ದೀಪ್ ಸ್ಪಿನ್ ಮೋಡಿಗೆ ಶ್ರೀಲಂಕಾ 172 ರನ್‌ಗೆ ಆಲೌಟ್, ಏಷ್ಯಾಕಪ್ ಫೈನಲ್‌ಗೆ ಭಾರತ!

ಸಾರಾಂಶ

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿನ ಗೆಲುವು ಟೀಂ ಇಂಡಿಯಾದ ಅಸಲಿ ಪರಾಕ್ರಮವನ್ನು ತೋರಿಸಿದೆ. ಕಾರಣ 214 ರನ್ ಟಾರ್ಗೆಟ್ ನೀಡಿದ ಲಂಕಾ ತಂಡವನ್ನು 172 ರನ್‌ಗೆ ಕಟ್ಟಿ ಹಾಕಿ ಗೆಲುವಿನ ಕೇಕೆ ಹಾಕಿದೆ.

ಕೊಲೊಂಬೊ(ಸೆ.12) ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಗೆಲುವಿನ ನಾಗಲೋಟ ಮುಂದುವರಿಸಿದೆ.  ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವಿನ ಬಳಿಕ ಇದೀಗ ಶ್ರೀಲಂಕಾ ವಿರುದ್ಧ ರೋಚಕ ಗೆಲುವು ದಾಖಲಿಸಿದೆ. ಲಂಕಾ ತಂಡಕ್ಕೆ 214ರನ್ ಸುಲಭ ಟಾರ್ಗೆಟ್ ನೀಡಿದ ಟೀಂ ಇಂಡಿಯಾ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸುವ ಮೂಲಕ 172 ರನ್‌ಗೆ ಆಲೌಟ್ ಮಾಡಿದೆ. ಈ ಮೂಲಕ 41 ರನ್ ಗೆಲುವು ದಾಖಲಿಸಿದೆ.

ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಗೆಲುವಿನ ನಾಗಾಲೋಟಕ್ಕೆ ಭಾರತ ಬ್ರೇಕ್ ಹಾಕಿದೆ.  ಸತತ 13 ಪಂದ್ಯ ಗೆದ್ದು ಸಾಧನೆ ಮಾಡಿದ್ದ ಶ್ರೀಲಂಕಾ ಇದೀಗ 14ನೇ ಗೆಲುವು ಸಾಧ್ಯವಾಗಿಲ್ಲ. ಈ ಕನಸನ್ನು ಟೀಂ ಇಂಡಿಯಾ ಛಿದ್ರಗೊಳಿಸಿದೆ. ಭಾರತ ತಂಡ ನಿರೀಕ್ಷತ ಬ್ಯಾಟಿಂಗ್ ಪ್ರದರ್ಶನ ಮಾಡಲು ವಿಫಲವಾಗಿತ್ತು. ದುನಿತ್ ವೆಲ್ಲಲಾಗೆ ಸ್ಪಿನ್ ಮೋಡಿಗೆ ಸಿಲುಕಿದ ಟೀಂ ಇಂಡಿಯಾ 213 ರನ್‌ಗೆ ಆಲೌಟ್ ಆಗಿತ್ತು.

Asia Cup 2023: ಲಂಕಾ ಎದುರು 4 ಅಪರೂಪದ ದಾಖಲೆ ಬರೆದ ರೋಹಿತ್ ಶರ್ಮಾ..!

ಸುಲಭ ಟಾರ್ಗೆಟ್ ಪಡೆದ ಶ್ರೀಲಂಕಾ ತಂಡಕ್ಕೆ  ಟೀಂ ಇಂಡಿಯಾ ಬೌಲರ್ಸ್ ಶಾಕ್ ನೀಡಿದರು. ಆರಂಭದಲ್ಲೇ ಜಸ್ಪ್ರೀತ್ ಬುಮ್ರಾ ದಾಳಿಗೆ ಲಂಕಾ ತತ್ತರಿಸಿತು. ಪಥುಮ್ ನಿಸಾಂಕ ಹಾಗೂ ಕುಸಾಲ್ ಮೆಂಡಿಸ್ ವಿಕೆಟ್ ಕೈಚೆಲ್ಲಿದರು. ಇನ್ನು ಮೊಹಮ್ಮದ್ ಸಿರಾಜ್ ದಾಳಿಯಲ್ಲಿ ದಿಮುತ್ ಕರುಣಾರತ್ನೆ ನಿರ್ಗಮಿಸಿದರು.  25 ರನ್‌ಗೆ 3 ವಿಕೆಟ್ ಕಳೆದುಕೊಂಡ ಲಂಕಾ ಸಂಕಷ್ಟಕ್ಕೆ ಸಿಲುಕಿತು.

ಮೂರು ವಿಕೆಟ್ ಪತನದ ಬಳಿಕ ಕುಲ್ದೀಪ್ ಯಾದವ್ ಸ್ಪಿನ್ ಮೋಡಿ ಆರಂಭಗೊಂಡಿತು. ಶ್ರೀಲಂಕಾದ ಒಂದೊಂದೆ ವಿಕೆಟ್ ಪತನ ಆರಂಭಗೊಂಡಿತು. ಸದೀರಾ ಸಮರವಿಕ್ರಮ, ಚಾರಿತ್ ಅಸಲಂಕ ಪೆವಿಲಿಯನ್ ಸೇರಿದರು. ಇತ್ತ ರವೀಂದ್ರ ಜಡೇಜಾ ಕೂಡ ಉತ್ತಮ ಸ್ಪಿನ್ ದಾಳಿ ಮೂಲಕ ಶ್ರೀಲಂಕಾ ತಂಡದ ಮೇಲೆ ಒತ್ತಡ ಹೆಚ್ಚಿಸಿದರು. ಧನಂಜಯ ಡಿಸಿಲ್ವ, ನಾಯಕ ದಸೂನ್ ಶನಕ ಕೂಡ  ನಿರ್ಗಮಿಸಿದರು. 41.3ಓವರ್‌ಗಳಲ್ಲಿ ಶ್ರೀಲಂಕಾ 172 ರನ್‌ಗೆ ಆಲೌಟ್ ಆಯಿತು.

Virat Kohli ಶತಕವನ್ನು ನಾಲ್ಕು ಪದಗಳಲ್ಲಿ ವರ್ಣಿಸಿದ ಅನುಷ್ಕಾ ಶರ್ಮಾ..!

ಕಳೆದ 13 ಏಕದಿನ ಪಂದ್ಯದಲ್ಲಿ ಸತತ ಗೆಲುವು ದಾಖಲಿಸಿದ್ದ  ಶ್ರೀಲಂಕಾ ದಾಖಲೆಯನ್ನು ಭಾರತ ಬ್ರೇಕ್ ಮಾಡಿದೆ. 
ಏಕದಿನದಲ್ಲಿ ಸತತ ಗೆಲುವಿನ ದಾಖಲೆ
21 ಗೆಲುವು - ಆಸ್ಟ್ರೇಲಿಯಾ (ಜನವರಿ 2003 ರಿಂದ ಮೇ 2003)
13 ಗೆಲುವು - ಶ್ರೀಲಂಕಾ (ಜೂನ್ 2023 ರಿಂದ ಸೆಪ್ಟೆಂಬರ್ 2023)
12 ಗೆಲುವು - ಸೌತ್ ಆಫ್ರಿಕಾ (ಫೆಬ್ರವರಿ 2005 ರಿಂದ ಅಕ್ಟೋಬರ್ 2005)
12 ಗೆಲುವು- ಪಾಕಿಸ್ತಾನ (ನವೆಂಬರ್ 2007 ರಿಂದ ಜೂನ್ 2008)
12 ಗೆಲುವು - ಸೌತ್ ಆಫ್ರಿಕಾ (ಸೆಪ್ಟೆಂಬರ್ 2016 ರಿಂದ  ಫೆಬ್ರವರಿ 2017) 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!