ಇನ್ನು ಇದೀಗ ಶ್ರೀಲಂಕಾ ಎದುರು ಟೀಂ ಇಂಡಿಯಾ, ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದು, ರನ್ ಗಳಿಸಲು ಪರದಾಡಿತು. ರೋಹಿತ್ ಶರ್ಮಾ ಹೊರತುಪಡಿಸಿ ಭಾರತದ ಯಾವೊಬ್ಬ ಬ್ಯಾಟರ್ ಕೂಡಾ 40+ ರನ್ ಬಾರಿಸಲು ಯಶಸ್ವಿಯಾಗಲಿಲ್ಲ. ಇಂತಹ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿತು. ಇಂತಹ ಸಂದರ್ಭದಲ್ಲಿ ಶಿಖರ್ ಧವನ್ ಟ್ವೀಟ್ ಮಾಡಿ ಟ್ರೋಲ್ ಆಗಿದ್ದಾರೆ.
ಬೆಂಗಳೂರು(ಸೆ.12): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಎದುರು ಭಾರೀ ಅಂತರದ ಗೆಲುವು ಸಾಧಿಸಿ 24 ಗಂಟೆ ಕಳೆಯುತ್ತಾ ಬಂದಿದೆ. ಇದೀಗ ಲಂಕಾ ಎದುರು ಮತ್ತೊಂದು ಪಂದ್ಯವನ್ನು ಭಾರತ ಕ್ರಿಕೆಟ್ ತಂಡ ಆಡುತ್ತಿದೆ. ಭಾರತ ಲಂಕಾ ಎದುರು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ಸಿಲುಕಿದೆ. ಹೀಗಿರುವಾಗ ಪಾಕಿಸ್ತಾನ ಎದುರಿನ ಗೆಲುವಿಗೆ ಈಗ ಶಿಖರ್ ಧವನ್, ಶುಭಕೋರಿ ಟ್ರೋಲ್‌ಗೆ ಒಳಗಾಗಿದ್ದಾರೆ.
ಹೌದು, ಪಾಕಿಸ್ತಾನ ಎದುರು ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ನೆರೆಯ ಪಾಕಿಸ್ತಾನ ಎದುರು 228 ರನ್‌ಗಳ ಜಯ ದಾಖಲಿಸಿತ್ತು. ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ತಲಾ ಅರ್ಧಶತಕ ಸಿಡಿಸಿದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ಅಜೇಯ ಶತಕ ಸಿಡಿಸಿದ್ದರು. ನಿಗದಿತ 50 ಓವರ್‌ಗಳಲ್ಲಿ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 356 ರನ್ ಕಲೆಹಾಕಿತು. ಇನ್ನು ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಕೇವಲ 128 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದೆ. ಟೀಂ ಇಂಡಿಯಾ ಪ್ರದರ್ಶನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
Asia Cup 2023 ಪಾಕ್ ಎದುರು ಅಬ್ಬರಿಸಿ, ಲಂಕಾ ಎದುರು ಮಂಕಾದ ಟೀಂ ಇಂಡಿಯಾ..! ಪಂದ್ಯಕ್ಕೆ ಮಳೆ ಅಡ್ಡಿ
ಇನ್ನು ಇದೀಗ ಶ್ರೀಲಂಕಾ ಎದುರು ಟೀಂ ಇಂಡಿಯಾ, ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದು, ರನ್ ಗಳಿಸಲು ಪರದಾಡಿತು. ರೋಹಿತ್ ಶರ್ಮಾ ಹೊರತುಪಡಿಸಿ ಭಾರತದ ಯಾವೊಬ್ಬ ಬ್ಯಾಟರ್ ಕೂಡಾ 40+ ರನ್ ಬಾರಿಸಲು ಯಶಸ್ವಿಯಾಗಲಿಲ್ಲ. ಇಂತಹ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿತು. ಇಂತಹ ಸಂದರ್ಭದಲ್ಲಿ ಶಿಖರ್ ಧವನ್ ಟ್ವೀಟ್ ಮಾಡಿ ಟ್ರೋಲ್ ಆಗಿದ್ದಾರೆ.
ಅಷ್ಟಕ್ಕೂ ಶಿಖರ್ ಧವನ್ ಟ್ವೀಟ್ ಮಾಡಿದ್ದೇನು?:
"ಪಾಕಿಸ್ತಾನ ಎದುರು ಅದ್ಭುತ ಜಯ ಸಾಧಿಸಿದ್ದಕ್ಕೆ ಟೀಂ ಇಂಡಿಯಾಗೆ ಅಭಿನಂದನೆಗಳು. ನೀವು ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರ ಎಂದು ಟ್ವೀಟ್ ಮಾಡಿದ್ದಾರೆ ಧವನ್.
Congratulations, , on a fantastic victory against Pakistan! You've made the nation proud!
— Shikhar Dhawan (@SDhawan25)ಇನ್ನು ಶಿಖರ್ ಧವನ್ ಇಷ್ಟೊಂದು ತಡವಾಗಿ ಟ್ವೀಟ್ ಮಾಡಿದ್ದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇನ್ನು ಕೆಲವು ನೆಟ್ಟಿಗರು ಶಿಖರ್ ಧವನ್ ಅವರೇ ಇದು 5ಜಿ ಯುಗ, ನೀವು 5ಜಿ ಬಳಸಿ ಎಂದು ತಮಾಷೆಯಾಗಿಯೇ ಟ್ರೋಲ್ ಮಾಡಿದ್ದಾರೆ.
bhai wo match kal tha... kidhr ghoom rahy ho.
— 𝙄𝑓𝐫ã🌻 (@i_ifraa)Love you paaji... Bt thoda late nhi ho gye aap wish karne me... Abhi to dusra match chal rha hai aur usme to lagi padi hai India ki.. 😅
— Aditya (@aditya10on9)Bahut jaldi savera hogai Shikhar Saab
— 🌾Venky Reddy🌱 (@venkyreddy)ಇನ್ನಷ್ಟು ಟ್ರೋಲ್‌ಗಳು ಹೀಗಿವೆ ನೋಡಿ
Gabbar bhai Internet Explorer se tweet kiya tha kya 😅
— sohom ʲᵃʷᵃⁿ ᵉʳᵃ (@AwaaraHoon)