ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಕೆಎಲ್ ರಾಹುಲ್ ಕಮ್‌ಬ್ಯಾಕ್ ಪಂದ್ಯದಲ್ಲೇ ಸೆಂಚುರಿ ಸಿಡಿಸಿದ್ದಾರೆ.
ಕೊಲೊಂಬೊ(ಸೆ.11) ಏಷ್ಯಾಕಪ್ ಟೂರ್ನಿಯಲ್ಲಿ ಭಾರತಕ್ಕೆ ಮಳೆ ಹಲವು ಬಾರಿ ನಿರಾಸೆ ಮಾಡಿದರೂ ಟೀಂ ಇಂಡಿಯಾ ಕುಗ್ಗಿಲ್ಲ. ದಿಟ್ಟ ಹೋರಾಟ ನೀಡುವ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಇಂಜುರಿಯಿಂದ ಸುದೀರ್ಘ ದಿನಗಳ ಬಳಿಕ ಕಮ್‌ಬ್ಯಾಕ್ ಮಾಡಿದ ಕೆಎಲ್ ರಾಹುಲ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಪಾಕಿಸ್ತಾನ ಮಾರಕ ಬೌಲಿಂಗ್ ದಾಳಿ ವಿರುದ್ಧ ದಿಟ್ಟ ಹೋರಾಟ ನೀಡಿದ ಕೆಎಲ್ ರಾಹುಲ್ ಏಕದಿನದಲ್ಲಿ 6ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. 100 ಎಸೆತದಲ್ಲಿ ಸೆಂಚುರಿ ಪೂರೈಸಿದ ಕೆಎಲ್ ರಾಹುಲ್ ಇತಿಹಾಸ ನಿರ್ಮಿಸಿದ್ದಾರೆ. ಕೆಎಲ್ ರಾಹುಲ್ ಬೆನ್ನಲ್ಲೇ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿದ್ದಾರೆ. ಕೊಹ್ಲಿ 84 ಎಸೆತದಲ್ಲಿ ಶತಕ ಪೂರೈಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದ ಮೀಸಲು ದಿನದಲ್ಲೂ ಮಳೆ ಅಡ್ಡಿಯಾಗಿತ್ತು. ಮಳೆ ನಿಂತ ಬಳಿಕ ಪಂದ್ಯ ಆರಂಭಗೊಂಡಿತ್ತು. ವಿರಾಟ್ ಕೊಹ್ಲಿಹಾಗೂ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಪಾಕಿಸ್ತಾನ ಬೌಲರ್ ಬೆವರಿಳಿಸಿದ್ದಾರೆ. ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ಬೌಲರ್ ಮೇಲುಗೈ ಸಾಧಿಸಿದ್ದರು. ಆದರೆ ಸೂಪರ್ 4 ಪಂದ್ಯದಲ್ಲಿ ಟೀಂ ಇಂಡಿಯಾ ಬಡ್ಡಿ ಸಮೇತ ತಿರುಗೇಟು ನೀಡಿತು.
undefined
ತಂದೆಯಾದ ಬುಮ್ರಾಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಪಾಕ್ ವೇಗಿ ಶಾಹೀನ್ ಅಫ್ರಿದಿ..! ಹೃದಯಗೆದ್ದ ವಿಡಿಯೋ ವೈರಲ್
ಪಾಕಿಸ್ತಾನ ಬೌಲರ್‌ಗಳು ಪಾರ್ಟ್ನರ್‌ಶಿಪ್ ಬ್ರೇಕ್ ಮಾಡಲು ಹಲವು ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊಹ್ಲಿ ಹಾಗೂ ರಾಹುಲ್ ಒಂದೇ ಟೆಂಪರ್‌ಮೆಂಟ್ ಪ್ರದರ್ಶಿಸಿದರು. ಜೊತೆ ಜೊತೆಯಾಗಿ ಹಾಫ್ ಸೆಂಚುರಿ ಸಿಡಿಸಿದ ಈ ಜೋಡಿ ಅಷ್ಟೇ ವೇಗದಲ್ಲಿ ಶತಕ ಪೂರೈಸಿದರು. ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.
ಪಾಕಿಸ್ತಾನ ವಿರುದ್ಧ ಪ್ರತಿ ಭಾರಿ ದಿಟ್ಟ ಹೋರಾಟ ನೀಡುವ ವಿರಾಟ್ ಕೊಹ್ಲಿ ತಮ್ಮ ಸಂಪ್ರದಾಯ ಮುಂದುವರಿಸಿದ್ದಾರೆ. ಪಾಕ್ ವಿರುದ್ಧದ ಮಹತ್ವದ ಹೋರಾಟದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಮೂಲಕ ಉತ್ತರಿಸಿದ್ದಾರೆ. ಇದೀಗ ಏಷ್ಯಾಕಪ್ ಟೂರ್ನಿಯಲ್ಲೂ ಇದೇ ಪರ್ಫಾಮೆನ್ಸ್ ಮುಂದುವರಿಸಿದ್ದಾರೆ. ಇತ್ತ ಕೆಎಲ್ ರಾಹುಲ್ ಐಪಿಎಲ್ ಟೂರ್ನಿ ಬಳಿಕ ಇಂಜುರಿ ಕಾರಣದಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದರು. ಇನ್ನು ಪಾಕಿಸ್ತಾನ ವಿರುದ್ದದ ಏಷ್ಯಾಕಪ್ ಲೀಗ್ ಪಂದ್ಯದಿಂದಲೂ ರಾಹುಲ್ ಹೊರಗುಳಿದಿದ್ದರು. ಸೂಪರ್ 4 ಹಂತದ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿ ತಮ್ಮ ಕ್ಲಾಸ್ ಆಟ ಪ್ರದರ್ಶಿಸಿದ್ದಾರೆ. ಈ ಜೋಡಿ 2ನೇ ವಿಕೆಟ್‌ಗೆ 200 ರನ್ ಜೊತೆಯಾಟದ ದಾಖಲೆ ಬರೆಯಿತು,
'ಟೆರರಿಸ್ಟ್‌ಗಳು ಶಾಂತಿಯ ಮಾತನಾಡಿದಂತೆ..' ಜುಬೇರ್ ವಿರುದ್ಧ ಮುಗಿಬಿದ್ದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್!