ಭಾರತ-ಪಾಕಿಸ್ತಾನ ಪಂದ್ಯ ಮತ್ತೆ ಸ್ಥಗಿತ, ರದ್ಧಾದರೆ ರೋಹಿತ್ ಸೈನ್ಯಕ್ಕೆ ಸಂಕಷ್ಟ!

By Suvarna News  |  First Published Sep 11, 2023, 9:00 PM IST

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಕಾಟ ಅತೀಯಾಗಿದೆ. ಮೀಸಲು ದಿನದಲ್ಲೂ ಪಂದ್ಯಕ್ಕೆ ಮಳೆ ಅನುವು ನೀಡುತ್ತಿಲ್ಲ. 357 ರನ್ ಟಾರ್ಗೆಟ್ ಚೇಸ್‌ಗಿಳಿದ ಪಾಕಿಸ್ತಾನ 2 ವಿಕೆಟ್ ನಷ್ಟಕ್ಕೆ 44 ರನ್ ಸಿಡಿಸಿದ ವೇಳೆ ಮತ್ತೆ ಮಳೆ ವಕ್ಕರಿಸಿದೆ.  ಈ ಪಂದ್ಯ ರದ್ದಾದರೆ ರೋಹಿತ್ ಪಡೆಗೆ ಸಂಕಷ್ಟ ತಪ್ಪಿದ್ದಲ್ಲ.


ಕೊಲೊಂಬೊ(ಸೆ.11) ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದಲ್ಲಿ ಮಳೆ ಅಬ್ಬರವೇ ಜೋರಾಗಿದೆ. ಲೀಗ್ ಹಂತದ ಪಂದ್ಯ ಮಳೆಯಿಂದ ರದ್ದಾದರೆ ಸೂಪರ್ 4 ಹಂತದ ಪಂದ್ಯ ಮೀಸಲು ದಿನಕ್ಕೆ ಕಾಲಿಟ್ಟರೂ ಮಳೆ ಕಾಟ ಮಾತ್ರ ತಪ್ಪಿಲ್ಲ. ಟೀಂ ಇಂಡಿಯಾ ಅಬ್ಬರದ ಬ್ಯಾಟಿಂಗ್ ನಡೆಸಿತ್ತು. 356 ರನ್ ಸಿಡಿಸಿ ಪಾಕಿಸ್ತಾನಕ್ಕೆ ಬೃಹತ್ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಚೇಸಿಂಗ್ ವೇಳೆ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡ  ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸುರಿದ ಮಳೆಗೆ ಪಂದ್ಯ ಸ್ಥಗಿತಗೊಂಡಿದೆ.  ಈ ಪಂದ್ಯ ಆರಂಭಗೊಳ್ಳಲು ಮಳೆ ಅನುವು ಮಾಡಿಕೊಡದಿದ್ದರೆ ಉಭಯ ತಂಡಗಳು ಅಂಕ ಹಂಚಿಕೊಳ್ಳಲಿದೆ.

ಟೀಂ ಇಂಡಿಯಾ ನೀಡಿದ  357 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಪಾಕಿಸ್ತಾನ 17 ರನ್ ಸಿಡಿಸುವಷ್ಟರಲ್ಲೇ ಮೊದಲ ವಿಕೆಟ್ ಪತನಗೊಂಡಿತು. ಇಮಾಮ್ ಉಲ್ ಹಕ್ ಕೇವಲ 9 ರನ್ ಸಿಡಿಸಿ ಔಟಾದರು. ನಾಯಕ ಬಾಬರ್ ಅಜಮ್ 10 ರನ್ ಸಿಡಿಸಿ ವಿಕೆಟ್ ಕೈಚೆಲ್ಲಿದರು.  ಪಾಕಿಸ್ತಾನ 11 ಓವರ್‌ನಲ್ಲಿ 44 ರನ್ ಸಿಡಿಸಿದ ವೇಳೆ ಮಳೆ ಆರಂಭಗೊಂಡಿತು. 

Latest Videos

undefined

ವಿರಾಟ್ ಕೊಹ್ಲಿ ಶತಕಕ್ಕೆ ಸಚಿನ್, ಪಾಂಟಿಂಗ್ ಸೇರಿ ದಿಗ್ಗಜರ ದಾಖಲೆ ಪುಡಿ ಪುಡಿ!

ಫಲಿತಾಂಶ ಹೊರಬೀಳಲು ಪಾಕಿಸ್ತಾನ ಕನಿಷ್ಠ 20 ಓವರ್ ಬ್ಯಾಟಿಂಗ್ ಮಾಡಬೇಕಿದೆ.  ಮಳೆ ನಿಂತ ಬೆನ್ನಲ್ಲೇ ಕ್ರೀಡಾಂಗಣ ಸಿಬ್ಬಂದಿ ಮೈದಾನ ಆಟಕ್ಕೆ ಸಜ್ಜುಗೊಳಿಸಲು ತಯಾರಿ ಆರಂಭಿಸಿದ್ದರು. ಆದರೆ ಮತ್ತೆ ಮಳೆ ವಕ್ಕರಿಸಿದೆ. ಹೀಗಾಗಿ ಸಿಬ್ಬಂದಿ ಮತ್ತೆ ಕವರ್ ಮೂಲಕ ಪಿಚ್ ಹಾಗೂ ಕ್ರೀಡಾಂಗಣ ಮುಚ್ಚುವ ಕೆಲಸ ಆರಂಭಿಸಿದ್ದಾರೆ. ಸದ್ಯ ಮಳೆ ನಿರಂತರವಾಗಿ ಸುರಿಯುತ್ತಿದೆ. 

ಒಂದು ವೇಳೆ ಪಂದ್ಯ ಕೆಲ ಹೊತ್ತಿನ ಬಳಿಕ ಆರಂಭಗೊಂಡರೆ ಓವರ್ ಕಡಿತಗೊಳ್ಳಲಿದೆ.  ಫಲಿತಾಂಶಕ್ಕಾಗಿ ಕನಿಷ್ಠ 20 ಓವರ್ ಆಡಲೇಬೇಕು.  ಮಳೆ ನಿಂತು ಪಂದ್ಯ ಎಷ್ಟು ಬೇಗ ಆರಂಭಗೊಳ್ಳಲಿದೆ ಅನ್ನೋದರ ಮೇಲೆ ಓವರ್ ನಿರ್ಧಾರವಾಗಲಿದೆ. ಸಂಭಾವ್ಯ ಓವರ್ ಹಾಗೂ ಟಾರ್ಗೆಟ್ ಈ ಕೆಳಗೆ ನೀಡಲಾಗಿದೆ.

ಏಷ್ಯಾಕಪ್ ಹೋರಾಟದಲ್ಲಿ ರಾಹುಲ್-ಕೊಹ್ಲಿ ಸೆಂಚುರಿ ದಾಖಲೆ, ಪಾಕಿಸ್ತಾನಕ್ಕೆ 357 ರನ್ ಗುರಿ!

ಓವರ್ ಕಡಿತಗೊಂಡರೆ ಪರಿಷ್ಕೃತ ಟಾರ್ಗೆಟ್(ಸಂಭಾವ್ಯ)
200 ರನ್-20 ಓವರ್
216 ರನ್ 22 ಓವರ್
230 ರನ್  24 ಓವರ್
244 ರನ್ 26 ಓವರ್

ಏಷ್ಯಾಕಪ್ ಟೂರ್ನಿಯಲ್ಲಿ  ಟೀಂ ಇಂಡಿಯಾ ಪಂದ್ಯಗಳು ಮಳೆಯಿಂದಲೇ ರದ್ದಾಗುತ್ತಿದೆ. ಇದುಆತಂಕಕ್ಕೂ ಕಾರಣವಾಗಿದೆ.

click me!